ಈಶಾನ್ಯ ಮತ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಸ್ಪರ್ಧಿಸಿರುವ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಶಶಿಲ್ ನಮೋಶಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಚುನಾಯಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶಿಕ್ಷಕರಿಗೆ ಮನವಿ ಮಾಡಿದರು.
ಗಂಗಾವತಿ: ಈಶಾನ್ಯ ಮತ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಸ್ಪರ್ಧಿಸಿರುವ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಶಶಿಲ್ ನಮೋಶಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಚುನಾಯಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶಿಕ್ಷಕರಿಗೆ ಮನವಿ ಮಾಡಿದರು.
ನಗರದ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವ ವ್ಯಕ್ತಿ ನಮೋಶಿ ಅವರಾಗಿದ್ದಾರೆ. ಈ ಹಿಂದೆ ಅವರು ಸಾಕಷ್ಟು ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ. ಶಿಕ್ಷಕರ ಕುಂದು-ಕೊರತೆಗಳ ಬಗ್ಗೆ ವಿಧಾನ ಪರಿಷತ್ನಲ್ಲಿ ಧ್ವನಿ ಎತ್ತಿದ ನಾಯಕರಾಗಿದ್ದಾರೆ ಎಂದರು.ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇದ್ದಾಗ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಕರಿಗೆ ಸರಿಯಾದ ಸಮಯದಲ್ಲಿ ವೇತನ, ರಜೆ, ವರ್ಗಾವಣೆ ಮತ್ತು ಬಡ್ತಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿಕ್ಷಕರ ಧ್ವನಿಯಾಗಿರುವ ನಮೋಶಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಅಲ್ಲದೇ ನಮೋಶಿ ಹಲವಾರು ಬಾರಿ ಗಂಗಾವತಿ ಕ್ಷೇತ್ರಕ್ಕೆ ಆಗಮಿಸಿ ಶಿಕ್ಷಕರನ್ನು ಭೇಟಿಯಾಗಿ ಕುಂದು-ಕೊರತೆಗಳನ್ನು ಆಲಿಸಿದ್ದಾರೆ. ಇಂತಹ ನಾಯಕರನ್ನು ಚುನಾಯಿಸಬೇಕು ಎಂದು ಕೋರಿದರು.ಮಾಜಿ ಸಂಸದ ಶಿವರಾಮಗೌಡ ಮಾತನಾಡಿದರು. ಟಿಎಂಎಇ ಬಿಇಡಿ ಕಾಲೇಜು, ಕೊಲ್ಲಿ ನಾಗೇಶ್ವರರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಮತಯಾಚಿಸಿದರು.
ಎನ್. ಸೂರಿಬಾಬು, ಬಂಡೇಶ್, ವಿಷ್ಣುವರ್ಧನ್, ಶಿವುಕುಮಾರ್ ಅರಿಕೇರಿ, ಚೆನ್ನಪ್ಪ, ಚಂದ್ರಶೇಖರ ಹಿರೂರು, ಶಿವಾನಂದ ಮೇಟಿ, ಶಿವಪ್ಪ ಹತ್ತಿಮರದ್, ಮಾಜಿ ನಗರಸಭಾ ಸದಸ್ಯರಾದ ವಾಸು ನವಲಿ, ಪರಶುರಾಮ ಮಡ್ಡೆರ್, ನವೀನ ಮಾಲಿಪಾಟೀಲ್, ರಾಚಪ್ಪ ಸಿದ್ದಾಪುರ, ಉಮೇಶ್ ಸಿಂಗನಾಳ್, ಕಾಶಿನಾಥ್ ಚಿತ್ರಗಾರ, ಅಭಿಷೇಕ್ ಸಿರಿಗೇರಿ, ಅಕ್ಕಿ ಪ್ರಕಾಶ್, ತಿಪ್ರೇರುದ್ರಸ್ವಾಮಿ, ಸಂಗಯ್ಯ ಸ್ವಾಮಿ, ಸಚಿನ್ ಜೈನ, ಕನಕರಾಜ್ ಉಪಸ್ಥಿತರಿದ್ದರು.