ಹುಬ್ಬಳ್ಳಿ:

ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಮಾಜಿ ಸಚಿವ ಜಮೀರ್‌ ಅಹ್ಮದಖಾನ್‌ ಅವರಿಗೆ ಡಿಸಿಎಂ, ಮೂರು ಬಾರಿ ಗೆದ್ದಿರುವ ಶಾಸಕ ಪ್ರಸಾದ ಅಬ್ಬಯ್ಯಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಮುತುವಲ್ಲಿಸ್‌ ಫೌಂಡೇಷನ್‌ ವತಿಯಿಂದ ಹಳೇಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಳೇಹುಬ್ಬಳ್ಳಿಯಲ್ಲಿ ಜಮೆಯಾದ ಮುತುವಲ್ಲಿಸ್‌ ಫೌಂಡೇಶನ್‌ ಸದಸ್ಯರು, ಪ್ರತಿಭಟನೆ ನಡೆಸಿದರು. ಜಮೀರ್‌ ಅಹ್ಮದಖಾನ್‌ ಅವರು ವಸತಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಗೆಲ್ಲಲು ಶ್ರಮಿಸಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಂ ಸಮಾಜದವರು ಸಾಕಷ್ಟು ವಿರೋಧಿಸಿದ್ದರು. ಆದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಆದಕಾರಣ ಅವರನ್ನು ಡಿಸಿಎಂ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಪೂರ್ವ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದವರು. ಜತೆಗೆ ಸ್ಲಂ ಬೋರ್ಡ್‌ ಅಧ್ಯಕ್ಷರಾಗಿ ಹಾಗೂ ಲೀಡ್ಕರ್‌ ಅಧ್ಯಕ್ಷರಾಗಿ ಅತ್ಯುತ್ತಮ ಮಾಡಿದವರು. ಆದಕಾರಣ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು.

ಮುಕ್ತಿಯಾರ ಮನಿಯಾರ, ಕಾರ್ಯದರ್ಶಿ ಅಬ್ದುಲ್‌ ಖಾದರಖಾನ್‌, ಬಷೀರಖಾನ್‌ ಪಠಾಣ, ಹಾಜಿ ರಜಾಕ್‌ ಸವಣೂರು, ಶಬ್ಬೀರ ನದಾಫ್, ಶಕೀಲ್‌ ಮೊರಬದ ಸೇರಿದಂತೆ 30 ಮೊಹಲ್ಲಾ ಮುತುವಲ್ಲಿಸ್‌ ಮತ್ತು ಜಮಾತ್‌ ಸದಸ್ಯರು ಉಪಸ್ಥಿತರಿದ್ದರು.