ದಾನ ದಾನಕ್ಕಿಂತ ಶ್ರೇಷ್ಠವಾದ ದಾನ ಅನ್ನದಾನ, ನಾವು ಮಾಡಿದ ಪಾಪಗಳೆಲ್ಲಾ ದಾನದ ರೂಪದಲ್ಲಿ ಪ್ರಾಯಶ್ಚಿತವಾಗಲಿ ಎಂದು ದಾನ ಮಾಡಬೇಕು ಎಂದು ನುಗ್ಗೇಹಳ್ಳಿ ಶ್ರೀಮದ್ ರಂಭಾಪುರಿ ಶಾಖಾ ಪುರವರ್ಗ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ದಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಅಭಿವೃದ್ಧಿ ಹೊಂದಲು ಪೂರಕ ಎಂದು ಸನಾತನ ಧರ್ಮವು ಹೇಳುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಕಾರ್ಯಕ್ರಮಗಳು, ಸಮಾರಂಭಗಳು ನಡೆದರೂ ಅನ್ನದಾನ ಮಾಡುವುದು ವಾಡಿಕೆ ಹಾಗೂ ಸಂಪ್ರದಾಯವಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದಾನ ದಾನಕ್ಕಿಂತ ಶ್ರೇಷ್ಠವಾದ ದಾನ ಅನ್ನದಾನ, ನಾವು ಮಾಡಿದ ಪಾಪಗಳೆಲ್ಲಾ ದಾನದ ರೂಪದಲ್ಲಿ ಪ್ರಾಯಶ್ಚಿತವಾಗಲಿ ಎಂದು ದಾನ ಮಾಡಬೇಕು ಎಂದು ನುಗ್ಗೇಹಳ್ಳಿ ಶ್ರೀಮದ್ ರಂಭಾಪುರಿ ಶಾಖಾ ಪುರವರ್ಗ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಪಟ್ಟಣದ ವಾರ್ಡ್ ನಂ.೪ರ ಕೋಟೆ ಮಾರಿಕಾಂಭ ಗೆಳೆಯರ ಬಳಗ ವತಿಯಿಂದ ನಡೆದ ಗಣೇಶೋತ್ಸವದಲ್ಲಿ ಮಾತನಾಡಿ, ಮನುಷ್ಯನಿಗೆ ಅನ್ನ ಬಹಳ ತೃಪ್ತಿ ಕೊಡುವ ಕೆಲಸವಾಗಿದೆ, ಪಾಪ ಕರ್ಮಗಳೆಲ್ಲಾ ಹೋಗುವುದು ಅನ್ನದಾನದಿಂದ ಮಾತ್ರ, ಹಿರಿಯರು ಹೇಳುವ ಹಾಗೆ ತಲೆ ಮೇಲೆ ಮಾಡಿದ ಪಾದ ಎಲೆ ಮೇಲೆ ಹೋಗಲಿ ಎನ್ನುತ್ತಿದ್ದು, ಅದರಂತೆ ಇತಿಹಾಸದ ಪರಂಪರೆಯಂತೆ ದಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಅಭಿವೃದ್ಧಿ ಹೊಂದಲು ಪೂರಕ ಎಂದು ಸನಾತನ ಧರ್ಮವು ಹೇಳುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಕಾರ್ಯಕ್ರಮಗಳು, ಸಮಾರಂಭಗಳು ನಡೆದರೂ ಅನ್ನದಾನ ಮಾಡುವುದು ವಾಡಿಕೆ ಹಾಗೂ ಸಂಪ್ರದಾಯವಾಗಿದೆ. ಆದ್ದರಿಂದ ಅನ್ನದಾನ ಶ್ರೇಷ್ಠವಾಗಿದೆ ಅದನ್ನು ನಡೆಸುವ ಎಲ್ಲರಿಗೂ ಪುಣ್ಯದೊರೆಯಲಿದೆ. ಹಿಂದೂ ಧರ್ಮದವರು ಒಗ್ಗಟ್ಟಾಗಿ ಸಮಾಜದಲ್ಲಿ ಬದುಕಬೇಕು. ಕೋಟೆಯಲ್ಲಿ ನೆಲೆಸಿರುವ ಮಾರಿಕಾಂಭ ದೇವಿಗೆ ೨ಸಾವಿರ ವರ್ಷಗಳ ಇತಿಹಾಸವಿದ್ದು, ತಾಲೂಕಿನ ನಾನಾ ಭಾಗಗಳಿಂದ ಭಕ್ತರು ಬಂಧು ದರ್ಶನ ಪಡೆಯುತ್ತಾರೆ ಈ ದೇವಸ್ಥಾನವನ್ನು ತಲತಲಾಂತರಗಳಿಂದ ಪೂಜ ಕೈಕರ್ಯ ನಡೆಸಿಕೊಂಡು ಬರುತ್ತಿರುವ ಜನರಿಗೆ ಒಳಿತಾಗಲೀ ಎಂದರು.ಇದೇ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುಶಾಮಿಯಾನ, ನಿರಂಜನ್, ಸ್ಕಂದ, ಗಗನ್ ಮತ್ತಿತರಿದ್ದರು.