ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣ ಸಹಕಾರ ನೀಡುವೆ: ಶಾಸಕ ಬಿ.ಪಿ.ಹರೀಶ್

| Published : Mar 02 2024, 01:45 AM IST

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣ ಸಹಕಾರ ನೀಡುವೆ: ಶಾಸಕ ಬಿ.ಪಿ.ಹರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರದಲ್ಲಿ ಜಿಲ್ಲಾ ಸಮ್ಮೇಳನ ಆಯೋಜಿಸಿರುವುದು ಹರ್ಷವಾಗುತ್ತಿದೆ. ನಾನು ಒಬ್ಬ ಕನ್ನಡ ಅಭಿಮಾನಿಯಾಗಿ ಕಾರ್ಯಕರ್ತನಂತೆ ಈ ಸಮ್ಮೇಳನ ಯಶಸ್ವಿಗೆ ಶ್ರಮಿಸುತ್ತೇನೆ ಎಂದರು. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಸಿ.ವಿ.ಪಾಟೀಲ್ ರನ್ನು ಸಾಹಿತಿಗಳು ಮತ್ತು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈ ಜಿಲ್ಲೆ ಮತ್ತು ತಾಲೂಕಿಗೆ ಚಿರಪರಿಚಿತರು ಇವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ಹರಿಹರ

ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಸಿದ್ದೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ ಮಾ.೧೮ ಮತ್ತು ೧೯ ರಂದು ನಡೆಯುವ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಸಿ.ವಿ.ಪಾಟೀಲ್ ರನ್ನು ಅವರ ನಿವಾಸದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಅಧಿಕೃತ ಆಹ್ವಾನ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಪರ ಸಂಘಟನೆಗಳು ಹಾಗೂ ಪತ್ರಿಕಾ ಮಾಧ್ಯಮ ಒಳಗೊಂಡಂತೆ ಹರಿಹರದಲ್ಲಿ ಜಿಲ್ಲಾ ಸಮ್ಮೇಳನ ಆಯೋಜಿಸಿರುವುದು ಹರ್ಷವಾಗುತ್ತಿದೆ. ನಾನು ಒಬ್ಬ ಕನ್ನಡ ಅಭಿಮಾನಿಯಾಗಿ ಕಾರ್ಯಕರ್ತನಂತೆ ಈ ಸಮ್ಮೇಳನ ಯಶಸ್ವಿಗೆ ಶ್ರಮಿಸುತ್ತೇನೆ ಎಂದರು. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಸಿ.ವಿ.ಪಾಟೀಲ್ ರನ್ನು ಸಾಹಿತಿಗಳು ಮತ್ತು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈ ಜಿಲ್ಲೆ ಮತ್ತು ತಾಲೂಕಿಗೆ ಚಿರಪರಿಚಿತರು ಇವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಸಂತಸ ತಂದಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಹರಿಹರ ತಾಲೂಕಿನ ಹಿರಿಯ ಸಾಹಿತಿಗಳು, ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿ, ಜೊತೆಗೆ ೩೨ ಕೃತಿಗಳನ್ನು ರಚಿಸುವುದರೊಂದಿಗೆ ಪ್ರಾಧ್ಯಾಪಕ ವೃತ್ತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರೊ. ಸಿ.ವಿ. ಪಾಟೀಲ್ ರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಹರಿಹರ ನಗರದಲ್ಲಿ ಸಾಕಷ್ಟು ಸಾಹಿತ್ಯ ಆಸಕ್ತರು ಇದ್ದರೂ ಸಹ ಸಮ್ಮೇಳನಗಳು ಕಡಿಮೆ ಸಂಖ್ಯೆಯಲ್ಲಿ ನಡೆದಿವೆ. ಹರಿಹರ ತಾಲೂಕಿನಲ್ಲಿ ೩ ತಾಲ್ಲೂಕು ಸಮ್ಮೇಳನ, ೨ ಜಿಲ್ಲಾ ಸಮ್ಮೇಳನ ಇದುವರೆಗೂ ನಡೆದಿರುವುದರಿಂದ ನಾನು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇತ್ತೀಚೆಗೆ ಉಕ್ಕಡಗಾತ್ರಿ ಗ್ರಾಮದಲ್ಲಿ ತಾಲ್ಲೂಕು ಸಮ್ಮೇಳನ ಅದ್ದೂರಿಯಾಗಿ ನಡೆಸಲಾಯಿತು. ಈಗ ಮತ್ತೊಮ್ಮೆ ಜಿಲ್ಲಾ ಸಮ್ಮೇಳನ ನಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ನಿವೃತ್ತ ಪ್ರೊ. ಎಸ್.ಎ. ಭೀಕ್ಷಾವರ್ತಿಮರ್ ಮಾತನಾಡಿ, ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ಕೊಟ್ಟ ಮಾತಿನಂತೆ ನಡೆದು ಪ್ರೊ.ಸಿ.ವಿ. ಪಾಟೀಲ್ ರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಹರಿಹರ ತಾಲೂಕಿನ ಸಾಹಿತ್ಯ ಅಭಿಮಾನಿಗಳಿಗೆ ಹೆಚ್ಚು ಉಲ್ಲಾಸ ಮತ್ತು ಹುರುಪು ತರಿಸಿದೆ ಎಂದರು.

ಈ ಸಂದರ್ಭದಲ್ಲಿ ಆಶಾ ಸಿ.ವಿ. ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ದಿಳ್ಳೆಪ್ಪ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಿಲ್ಲಾ ಸದಸ್ಯ ಎ ರಿಯಾಜ್ ಅಹ್ಮದ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿಗಳಾದ ಬಿ.ಬಿ.ರೇವಣ್ಣನಾಯ್, ಚಿದಾನಂದ ಕಂಚಿಕೇರಿ, ಸದಸ್ಯ ಎ.ಕೆ. ಭೂಮೇಶ್, ಎಂ. ಉಮ್ಮಣ್ಣ, ನಾಗರಾಜ್, ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ, ಸಂಚಾಲಕ ಸದಾನಂದ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ,

ಹಿರಿಯ ಸಾಹಿತಿ ಕಲಿಂ ಭಾಷಾ, ಪತ್ರಕರ್ತ ಶೇಖರಗೌಡ ಪಾಟೀಲ್, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್, ಕಾರ್ಯದರ್ಶಿ ಎನ್.ಇ. ಸುರೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ಕೆ.ಸಿ. ಶಾಂತಕುಮಾರಿ, ಕುಂಬಳೂರು ವಾಸುದೇವ, ಕನ್ನಡದ ಪರ ಸಂಘಟನೆ ಮುಖಂಡರಾದ ಇಲಿಯಾಸ್ ಆಹ್ಮದ್, ಪ್ರೀತಂ ಬಾಬು, ಯಮನೂರು, ಶಶಿನಾಯ್ಕ್, ಭಾಗ್ಯಮ್ಮ, ನೇತ್ರಾವತಿ, ನಾಗಮ್ಮ ಐರಣಿಯಮ್ಮ ಜಮೀಲಾಬಿ, ಅಮಾನುಲ್ಲಾ, ರುದ್ರಗೌಡ್ರು, ಭರತ್ ಅಮರಾವತಿ, ಭರತ್ ಅಮರಾವತಿ. ಜಯಲಕ್ಷ್ಮಿ. ಅರುಣ. ಚೇತನ್.ಮನಸೂರು ಹಾಗೂ ಇತರರಿದ್ದರು.