ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ‘ಜಿಇಇಎಫ್ ಗ್ಲೋಬಲ್ ವಾಟರ್ ಟೆಕ್ ಅವಾರ್ಡ್ ೨೬’ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.ವಾಟರ್ ಎಫಿಷಿಯೆನ್ಸಿ ಮ್ಯಾನೇಜ್‌ಮೆಂಟ್ ಕಂಪೆನಿ ಆಫ್ ದ ಈಯರ್ ವಿಭಾಗದಲ್ಲಿ ಎಂಆರ್‌ಪಿಎಲ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಮಂಗಳೂರು : ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ‘ಜಿಇಇಎಫ್ ಗ್ಲೋಬಲ್ ವಾಟರ್ ಟೆಕ್ ಅವಾರ್ಡ್ ೨೬’ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.ವಾಟರ್ ಎಫಿಷಿಯೆನ್ಸಿ ಮ್ಯಾನೇಜ್‌ಮೆಂಟ್ ಕಂಪೆನಿ ಆಫ್ ದ ಈಯರ್ ವಿಭಾಗದಲ್ಲಿ ಎಂಆರ್‌ಪಿಎಲ್ ಪ್ರಶಸ್ತಿಗೆ ಆಯ್ಕೆಯಾಗಿದೆ. ವಿವಿಧ ಕೈಗಾರಿಕಾ ಕ್ಷೇತ್ರಗಳ ಸಂಸ್ಥೆಗಳ ನಡುವೆ ಎಂಆರ್‌ಪಿಎಲ್ ತನ್ನ ಸುಸ್ಥಿರ ನೀರು ನಿರ್ವಹಣಾ ಕ್ರಮಗಳು ಹಾಗೂ ನೀರಿನ ಬಳಕೆಯ ದಕ್ಷತೆ ಹೆಚ್ಚಿಸುವ ಪ್ರಯತ್ನಗಳಿಗಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಆ.೨೧ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಎಂಆರ್‌ಪಿಎಲ್‌ನ ಎಚ್‌ಎಸ್‌ಇ ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿ. ಪ್ರಸನ್ನ ಕುಮಾರ್ ಅವರು ‘ಟೀಮ್ ಎಂಆರ್‌ಪಿಎಲ್’ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. ಜಲಶಕ್ತಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಡಾ. ಶ್ಯಾಮಲ್ ಕುಮಾರ್ ಸರ್ಕಾರ್ ಹಾಗೂ ಭಾರತದಲ್ಲಿರುವ ಹಂಗೇರಿ ರಾಯಭಾರ ಕಚೇರಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ್ತಿ ಡಾ. ಡಯಾನಾ ಡಾಕ್ಜಿ ಪ್ರಶಸ್ತಿ ಪ್ರದಾನ ಮಾಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.