ಜಾಗತೀಕರಣದಿಂದಾಗಿ ಭಾಷೆಗಳ ಕಲಿಕೆಯಲ್ಲಿ ವೈವಿಧ್ಯತೆ ಹಿನ್ನೆಲೆಗೆ ಸರಿದು, ಕೆಲವೇ ಭಾಷೆಗಳ ಬಳಕೆ ಕಡೆಗೆ ಜಗತ್ತು ವಾಲುತ್ತಿದೆ ಎಂದು ಸಾಹಿತಿ ಎಸ್.ಪಿ. ಗೌಡರ ಹೇಳಿದರು.

ಸವಣೂರು: ಜಾಗತೀಕರಣದಿಂದಾಗಿ ಭಾಷೆಗಳ ಕಲಿಕೆಯಲ್ಲಿ ವೈವಿಧ್ಯತೆ ಹಿನ್ನೆಲೆಗೆ ಸರಿದು, ಕೆಲವೇ ಭಾಷೆಗಳ ಬಳಕೆ ಕಡೆಗೆ ಜಗತ್ತು ವಾಲುತ್ತಿದೆ ಎಂದು ಸಾಹಿತಿ ಎಸ್.ಪಿ. ಗೌಡರ ಹೇಳಿದರು.ಪಟ್ಟಣದ ಶ್ರೀ ಚನ್ನಬಸೇಶ್ವರ ಕಲ್ಯಾಣ ಮಂಟಪದ ಚಂದ್ರಶೇಖರ ಪಾಟೀಲ ಸಭಾ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ.ಗೋಕಾಕ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿ ಕನ್ನಡ ಕನ್ನಡ ರ‍್ರಿ ನಮ್ಮ ಸಂಗಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾತೃಭಾಷೆಯ ಕಲಿಕೆಯು ಆತ್ಮವಿಶ್ವಾಸದ ಕಲಿಕೆ ಅದು ಬರಿ ಮಾಹಿತಿ ತುಂಬುವ ಕಲಿಕೆಯಾಗಲಾರದೆ ವಿದ್ಯಾರ್ಥಿಯು ಸ್ವತಂತ್ರ ಬದುಕನ್ನು ನಿರ್ವಹಣೆ ಮಾಡಲು ಸಶಕ್ತನ್ನಾಗಿ ಮಾಡುವ ಶಕ್ತಿ ತಾಯಿನುಡಿಯಲ್ಲಿದೆ. ತಂತ್ರಜ್ಞಾನದಿಂದಾಗಿ ಭಾಷೆ ಬಳಕೆ ತುಂಬಾ ವ್ಯಾಪಕವಾಗಿ ಆಗುತ್ತಿದ್ದು, ಅಗಾಧವಾದ ಸಾಹಿತ್ಯ ರಾಶಿ ನಮಗೆ ಸುಲಭವಾಗಿ ಲಭ್ಯವಾಗುತ್ತಿದೆ ಅದರ ಸದ್ಬಳಕೆ ಆಗಬೇಕಾಗಿದೆ.ತಾಯಿನುಡಿ ಕಲಿಕೆಯು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಗತ್ಯವಾದ ಸಾಧನವಾಗಿದೆ. ಒಂದು ಭಾಷೆ ಎಂದರೆ ಕೇವಲ ಒಂದು ಭಾಷಾ ಸಮುದಾಯ ಐಚ್ಛಿಕವಾಗಿ ಒಪ್ಪಿಕೊಂಡು ಆಡುವ ಅವರ ನಿತ್ಯದ ವ್ಯವಹಾರಕ್ಕೆ ಸೀಮಿತವಾದ ಮಾಧ್ಯಮ ಮಾತ್ರವಲ್ಲ, ಅದು ಆ ಭಾಷೆ ಸದಸ್ಯರ ನಡುವಿನ ಯಾವ ಅನುವಾದಕ್ಕೂ ನಿಲುಕದ ಒಂದು ರಹಸ್ಯ ಸಾಂಸ್ಕೃತಿಕ ಹಾಗೂ ಜೈವಿಕ ಒಪ್ಪಂದದ ಬಂಧನವಾಗಿದೆ ಎಂದರುಲೇಖಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಆಶಯ ನುಡಿ ನುಡಿದರು. ಸಾಹಿತಿ ಡಾ. ಶ್ರೀಧರ ಹೆಗಡೆ ಭದ್ರನ್ ಅವರು ನಾಡಗೀತೆಗೆ ನೂರರ ಸಂಭ್ರಮ, ಪ್ರಾಧ್ಯಾಪಕ ಡಾ. ಸತೀಶ ಪಾಟೀಲ ಕನ್ನಡವೆಂಬುವುದು ಬರಿ ನುಡಿಯಲ್ಲಾ, ಸಾಹಿತಿ ವೀಣಾ ಪಾಟೀಲ ತಂತ್ರಜ್ಞಾನ ಯುಗದಲ್ಲಿ ಕನ್ನಡ ಸವಾಲುಗಳು ಎಂಬ ವಿಷಯಗಳ ಕುರಿತು ವಿಷಯ ಮಂಡಿಸಿದರು.ಪ್ರಮುಖರಾದ ಹನಮಂತಗೌಡ ಮುದಿಗೌಡ್ರ, ಸಚಿನ ಸಣ್ಣಪೂಜಾರ, ಜೆ.ಎಂ.ರೋಣಿಮಠ, ಆರ್.ವಿ. ಕೋಳಿವಾಡ, ಫಕ್ಕೀರೇಶ ಕಮಡೊಳ್ಳಿ ಹಾಗೂ ಇತರರು ಪಾಲ್ಗೊಂಡಿದ್ದರು. ಪೃಥ್ವಿರಾಜ ಬೇಟದೂರ, ಕೆ.ಎಸ್. ಇಟಗಿಮಠ, ಹಾಗೂ ಶಶಿಕಲಾ ಹೊಸಳ್ಳಿ ನಿರ್ವಹಿಸಿದರು.