ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಗಡಿಭಾಗದ ಇಂಡಿ ಲಿಂಬೆಗೆ ಜಾಗತಿಕ ಸ್ಥಾನ ದೊರಕಿಸಿಕೊಡಬೇಕು. ಲಿಂಬೆ ಬೆಳೆಗಾರರ ಸಹಾಯಕ್ಕೆ ಬರಬೇಕು ಎಂಬ ದೂರದೃಷ್ಟಿಯಿಂದ 2017ರಲ್ಲಿ ರಾಜ್ಯದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ರಚನೆ ಮಾಡಲಾಗಿದೆ. 2023ರಲ್ಲಿ ಎರಡು ವರ್ಷಗಳ ಹಿಂದೆ ಜಿಯೋಗ್ರಾಫಿಕಲ್ ಇಂಡಿಕೇಷನ್ (ಜಿಐ) ಟ್ಯಾಗ್ ಪಡೆದಿದ್ದರಿಂದ ಇದೀಗ ಇಂಡಿ ಲಿಂಬೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ನಿಂಬೆ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ವಿವಿಧ ಗ್ರಾಮಗಳ ರೈತರು ಒಂದುವರ್ಷದಲ್ಲಿ 7 ಲಕ್ಷ ನಿಂಬೆ ಸಸಿಗಳನ್ನು ಮಾರಾಟ ಮಾಡಿದ್ದಾರೆ. ತಾಂಬಾ ಗ್ರಾಮದ ಭೀರಪ್ಪ ವಗ್ಗಿ ಎಂಬ ರೈತ ಕಳೆದ ವರ್ಷ ಹಾಗೂ ಈ ವರ್ಷ ಸೇರಿ 3 ಲಕ್ಷ ನಿಂಬೆ ಸಸಿಗಳನ್ನು ಬೆಂಗಳೂರು, ಮೈಸೂರು, ರಾಮನಗರ, ಶಿವಮೊಗ್ಗ, ಹರಪನಹಳ್ಳಿ, ಇಲಕಲ್ಲ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಮಾರಾಟ ಮಾಡಿ ದಾಖಲೆ ಮಾಡಿದ್ದಾರೆ. ತೋಟಗಾರಿಕಾ ಇಲಾಖೆಯ ನರ್ಸರಿಯಿಂದ 14 ಸಾವಿರ ಸಸಿಗಳು ಇಲ್ಲಿಯವರೆಗೆ ಮಾರಾಟವಾಗಿದ್ದು, ಇನ್ನೂ 8 ಸಾವಿರ ನಿಂಬೆ ಸಸಿಗಳಿಗೆ ಬೇಡಿಕೆ ಇದ. ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ನಿಂಬೆ ಬೆಳೆಯುವ ಜಿಲ್ಲೆಯಾಗಿದ್ದು, ಜಿಲ್ಲೆಯ ಇಂಡಿ ತಾಲೂಕೊಂದರಲ್ಲೇ ಶೇ.50 ಕ್ಕಿಂತ ಹೆಚ್ಚು ನಿಂಬೆ ಬೆಳೆಯಲಾಗುತ್ತದೆ.
ಸಾಮಾನ್ಯವಾಗಿ ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು, ಧಾರವಾಡ ಮತ್ತು ಬೆಳಗಾವಿ ರೈತರು ಸಸಿಗಳನ್ನು ಖರೀದಿಸುತ್ತಿದ್ದು, ಇಂದು ಇಂಡಿ ತಾಲೂಕಿನ ರೈತರು ಬೆಳೆಸಿದ ನಿಂಬೆ ಸಸಿಗಳು ಅಂತರಾಜ್ಯಗಳಿಗೆ ಮಾರಾಟವಾಗುತ್ತಿವೆ. ಆದರೆ ಇಂಡಿ ಲಿಂಬೆಗೆ ಜಿಐ ಟ್ಯಾಗ್ ಸಿಕ್ಕಿರುವುದರಿಂದ ಸೋಲ್ಲಾಪುರ, ಪಂಢರಪುರ ಮತ್ತು ವಿವಿಧ ಭಾಗದ ರೈತರು ಈ ನಿಂಬೆ ಸಸಿಗಳನ್ನು ಖರಿದೀಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಲಿಂಬೆ ನರ್ಸರಿಗಳು ಹೆಚ್ಚುತ್ತಿವೆ. ರೈತರು ಸಹ ನಿಂಬೆ ಸಸಿಗಳನ್ನು ಹೆಚ್ಚು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಜಿಲ್ಲೆಯ ಅದರಲ್ಲೂ ಇಂಡಿ ತಾಲೂಕಿನ ಹಲವಾರು ರೈತರು ತಮ್ಮ ಜಮೀನಿನ ಹೆಚ್ಚಿನ ಭಾಗವನ್ನು ನಿಂಬೆ ನರ್ಸರಿಗೆ ಮೀಸಲಿಟ್ಟಿದ್ದಾರೆ. ಇಂಡಿ ತಾಲ್ಲೂಕಿನ ತಾಂಬಾ, ಸಾಲೋಟಗಿ, ಬೆನಕನಹಳ್ಳಿ, ತಡವಲಗಾ, ರೂಗಿ, ಬೊಳೆಗಾಂವ ಗ್ರಾಮದಲ್ಲಿ ರೈತರು ನಿಂಬೆ ಬೆಳೆ ಜೊತೆ 2 ರಿಂದ 3 ಎಕರೆ ಜಮೀನು ಮೀಸಲಿಟ್ಟು, ನಿಂಬೆ ಸಸಿಗಳನ್ನು ಬೆಳೆಸುತ್ತಾರೆ. ಗುಣಮಟ್ಟದ ಸಸಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಕೆಲ ರೈತರು ಒಂದು ವರ್ಷದ ಸಸಿಗೆ ₹ 50, ಎರಡು ವರ್ಷದ ಸಸಿಗೆ ₹ 75 ಅದಕ್ಕಿಂತ ದೊಡ್ಡ ಸಸಿಗಳಿಗೆ 100 ನಂತೆ ಮಾರಾಟ ಮಾಡಿದ್ದಾರೆ.ವಸ್ತು ಅಥವಾ ಉತ್ಪನ್ನ ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದ್ದು ಅಥವಾ ಅಲ್ಲಿ ಹುಟ್ಟಿಕೊಂಡಿದೆ ಎಂಬುದನ್ನು ಸೂಚಿಸಲು ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಅಥವಾ ಜಿಐ ಟ್ಯಾಗ್. ನಿರ್ದಿಷ್ಟ ವಸ್ತುವಿನ ಗುಣಮಟ್ಟ, ಖ್ಯಾತಿ, ಗುಣಲಕ್ಷಣಗಳನ್ನು ಗುರುತಿಸಲು ಜಿಐ ಟ್ಯಾಗ್ ಮಾನದಂಡವಾಗಿ ನೆರವಾಗುತ್ತದೆ. ಇಂಡಿ ಲಿಂಬೆಗೆ ಭೌಗೋಳಿಕ ಮಾನ್ಯತೆ ದೊರೆತಿರುವುದರಿಂದ ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಸಸಿಗಳಿಗೆ ಬೇಡಿಕೆ ಹೆಚ್ಚಿದೆ.
ಒಂದು ಕಾಲದಲ್ಲಿ ನೀರಿನ ಕೊರತೆಯಿಂದ ನಿಂಬೆ ಗಿಡಗಳನ್ನು ಕಡಿದು ಹಾಕಿ ಸಂಕಷ್ಟ ಪಡುತ್ತಿದ್ದ ರೈತರಿಗೆ ಇಂದು ನೀರು ದೊರೆತಿದೆ. ನಿಂಬೆಗೆ ಬೇಡಿಕೆಯೂ ಹೆಚ್ಚಿದೆ. ಶಾಸಕ ಯಶವಂತರಾಯಗೌಡ ಪಾಟೀಲರ ಶ್ರಮ ಇದೀಗ ಸಾರ್ಥಕವಾಗಿದೆ ಎಂದು ನಾಡಿನ ಜನರು ಸ್ಮರಿಸುತ್ತಿದ್ದಾರೆ.-----ಕೋಟ್ಕಳೆದ 12 ವರ್ಷದ ಹಿಂದೆ ಬೇಸಿಗೆಯಲ್ಲಿ ರೈತರು ಒಣಗಿದ ಲಿಂಬೆ ಗಿಡಗಳನ್ನು ಕಡಿದು ಹಾಕುತ್ತಿರುವುದನ್ನು ಗಮನಿಸಿ, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರನ್ನು ಇಂಡಿಗೆ ಕರೆಯಿಸಿ, ಕಡಿದು ಹಾಕಿದ್ದ ಲಿಂಬೆ ಗಿಡಗಳನ್ನು ತೋರಿಸಿದ್ದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿಂಬೆ ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬಲು ಲಿಂಬೆ ಅಭಿವೃದ್ಧಿ ಮಂಡಳಿ ರಚಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಮಂಡಳಿ ಸ್ಥಾಪಿಸಿದ್ದಾರೆ. ಇಂಡಿ ನಿಂಬೆಗೂ ಜಿಐ ಟ್ಯಾಗ್ ದೊರೆತಿದೆ.ಯಶವಂತರಾಯಗೌಡ ಪಾಟೀಲ, ಶಾಸಕರು,ಇಂಡಿಕೊಟ್
ಇಂಡಿ ಲಿಂಬೆಗೆ ಜಿಐ ಟ್ಯಾಗ್ ದೊರೆತಿರುವುದರಿಂದ ಜಿಲ್ಲೆ ಅದರಲ್ಲೂ ಇಂಡಿ ತಾಲೂಕಿನಲ್ಲಿ ರೈತರು ಲಿಂಬೆ ಸಸಿಗಳ ನರ್ಸರಿ ಆರಂಭಿಸಿದ್ದಾರೆ. ಇಲಾಖೆಯಿಂದ 14 ಸಾವಿರ, ರೈತರು ಎರಡು ವರ್ಷದಲ್ಲಿ 7 ಲಕ್ಷ ನಿಂಬೆ ಸಸಿ ಮಾರಾಟ ಮಾಡಿದ್ದಾರೆ.ಎಚ್.ಎಸ್.ಪಾಟೀಲ, ಎಡಿ ತೋಟಗಾರಿಕೆ ಇಲಾಖೆ