ಬನಹಟ್ಟಿಯಲ್ಲಿ ವೈಭವದ ವಚನ ಗ್ರಂಥ ರಥೋತ್ಸವ

| Published : Jun 18 2024, 12:50 AM IST

ಸಾರಾಂಶ

ಬನಹಟ್ಟಿ ನಗರದ ಕೆಎಚ್‌ಡಿಸಿ ಕಾಲೋನಿಲ್ಲಿ ಶ್ರೀ ಗುರುಬಸವ ಮನೆಯಲ್ಲಿ ಮಹಾಮನೆ ಸೇವಾ ಸಮಿತಿಯ ೧೫ನೇ ವಾರ್ಷಿಕೋತ್ಸವ ನಿಮಿತ್ಯ ವಚನ ಗ್ರಂಥ ರಥೋತ್ಸವ ವಿಜೃಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿ ನಗರದ ಕೆಎಚ್‌ಡಿಸಿ ಕಾಲನಿಯಲ್ಲಿ ಶ್ರೀ ಗುರುಬಸವ ಮನೆಯಲ್ಲಿ ಮಹಾಮನೆ ಸೇವಾ ಸಮಿತಿಯ ೧೫ನೇ ವಾರ್ಷಿಕೋತ್ಸವ ನಿಮಿತ್ತ ವಚನ ಗ್ರಂಥ ರಥೋತ್ಸವ ವಿಜೃಭಣೆಯಿಂದ ಜರುಗಿತು.

ರಾತ್ರಿ ೮ ಗಂಟೆಗೆ ವಚನ ಗ್ರಂಥ ರಥದಲ್ಲಿಟ್ಟು ಎಳೆಯಲಾಯಿತು. ರಥವನ್ನು ಬಸವಣ್ಣ ಭಾವಚಿತ್ರ ಹಾಗೂ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವ ವೀಕ್ಷಿಸಲು ಸಾವಿರಾರು ಶರಣರು ಆಗಮಿಸಿದ್ದರು. ಕೆಎಚ್‌ಡಿಸಿಯ ವಚನ ಮಂಟಪದಿಂದ ರಥೋತ್ಸವ ಅರ್ಧ ಗಂಟೆಗಳ ಕಾಲ ನಡೆಯಿತು.

ನಿಜಶರಣ ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಸಮಾನತೆ ತಂದುಕೊಟ್ಟ ಸಮಾನತೆಯ ವಚನ ಧರ್ಮ. ಶಿವಶರಣರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ವಚನ ಸಾಹಿತ್ಯ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವಂತಹ ಸಾಹಿತ್ಯ. ಅಂತಹ ಸಾಹಿತ್ಯವಾದ ಶಿವಶರಣರ ವಚನ ಗ್ರಂಥಗಳನ್ನು ಆರಾಧಿಸಿ, ಅಳವಡಿಕೊಂಡು, ಅವುಗಳನ್ನು ಹೊತ್ತು ಮೆರೆಸಿದರೆ ಈ ಮೂಲಕ ಭಕ್ತರಲ್ಲಿ ವಚನಗಳ ಮೇಲೆ ಭಕ್ತಿ ಶ್ರದ್ಧೆ ಹೆಚ್ಚಲಿ ಎಂಬ ಉದ್ದೇಶದಿಂದ ವಚನ ಗ್ರಂಥಗಳ ರಥೋತ್ಸವವನ್ನು ವಚನ ಜಯಘೋಷ, ವಚನ ಪಾಠಣದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಮಹಾಂತ ಮಂದಾರ ಮಠದ ಮಹಾಂತದೇವರು, ಶಿವಾನಂದ ಬುದ್ನಿ, ಶಿವಾನಂದ ಬರಗಲ, ಬಸವಂತಪ್ಪ ಬಾಣಕಾರ, ಕಾಡಪ್ಪ ಮಳಲಿ, ರವಿ ಗೆದ್ದೆಪ್ಪನವರ, ಶ್ರೀಶೈಲ ಮಡಿವಾಳರ, ಆಕಾಶ ಮುಂಡಗನೂರ, ಸುರೇಶ ಅಂಬಿ, ಪ್ರವೀಣ ಜವಳಗಿ, ಶಂಕರ ನಾಗರಾಳ, ಈರಣ್ಣ ಬಾಣಕಾರ, ಅಶೋಕ ಜೋರಿ, ಮಲ್ಲಪ್ಪ ಚಿಪ್ಪಾಡಿ, ಸದಾಶಿವ ಕೋಪರ್ಡೆ, ಬಸವರಾಜ ಚನಾಳ, ಸುನೀಲ ಕುರಂದವಾಡ, ಚನಬಸಯ್ಯ ಪೂಜಾರಿ, ಶಂಕರ ಹೋಳಗಿ, ಹುಚ್ಚಪ್ಪ ಹೋಳಗಿ, ಶಿವಲಿಂಗಪ್ಪ ಕರಲಟ್ಟಿ, ಮಹೇಶ ಬಂಡಿಗಣಿ, ರಾಜು ಸಾರವಾಡ, ಕಾಡು ಸಿದ್ದಾಪೂರ, ಶ್ರೀಧರ ಬಾಣಕಾರ ಇತರರು ಇದ್ದರು.