ಹರಪನಹಳ್ಳಿಯಲ್ಲಿ ವೈಭವದ ವೀರಭದ್ರೇಶ್ವರ ರಥೋತ್ಸವ

| Published : Nov 16 2024, 12:32 AM IST

ಹರಪನಹಳ್ಳಿಯಲ್ಲಿ ವೈಭವದ ವೀರಭದ್ರೇಶ್ವರ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೇವರ ಪಟವನ್ನು ದಂಡೆಪ್ಪನವರ ಚೆನ್ನವೀರಪ್ಪನವರು ₹1.31 ಲಕ್ಷಕ್ಕೆ ಪಡೆದುಕೊಂಡರು.

ಹರಪನಹಳ್ಳಿ: ಪಟ್ಟಣದ ಹಳೆ ಬಸ್ ನಿಲ್ದಾಣದ ಬಯಲಿನಲ್ಲಿ ಪ್ರಸಿದ್ಧ ವೀರಭದ್ರೇಶ್ವರ ರಥೋತ್ಸವ ಶುಕ್ರವಾರ ಸಂಜೆ ಅಪಾರ ಭಕ್ತರ ಮಧ್ಯೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.

ಸಂಜೆ 6.31ಕ್ಕೆ ರಥದ ಚಕ್ರಗಳು ಉರುಳಿದಾಗ ಭಕ್ತರು ಜಯಘೋಷ ಕೂಗಿ ಉತ್ತತ್ತಿ ಎಸೆದು ವೀರಭದ್ರಸ್ವಾಮಿಗೆ ಭಕ್ತಿ ಸಮರ್ಪಿಸಿದರು. ದೇವರ ಪಟವನ್ನು ದಂಡೆಪ್ಪನವರ ಚೆನ್ನವೀರಪ್ಪನವರು ₹1.31 ಲಕ್ಷಕ್ಕೆ ಪಡೆದುಕೊಂಡರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಹಾವೇರಿ ಜಿಲ್ಲಾಧಿಕಾರಿ ದಾನಮ್ಮನವರ ವಿಜಯ ಮಹಂತೇಶ ಅವರಿಗೆ ಸನ್ಮಾನಿಸಲಾಯಿತು.

ಧರ್ಮಕರ್ತ ಪಾಟೀಲ್ ಪ್ರವೀಣಕುಮಾರ, ಪ್ರಧಾನ ಅರ್ಚಕರಾದ ವೀರಮಲ್ಲಪ್ಪ ಪೂಜಾರ, ಷಣ್ಮುಖಪ್ಪ ಪೂಜಾರ, ಅರ್ಚಕರಾದ ಶಶಿಧರ ಪೂಜಾರ, ವಾಗೀಶ ಪೂಜಾರ, ಪಿ.ಬಿ.ಗೌಡ, ಪುರಸಭಾ ಮಾಜಿ ಅಧ್ಯಕ್ಷ ಎಂ.ರಾಜಶೇಖರ, ಪುರಸಭಾ ಸದಸ್ಯ ಗೊಂಗಡಿ ನಾಗರಾಜ, ಪಟೇಲ್ ಬೆಟ್ಟನಗೌಡ, ಕೊಟ್ಗಿ ವಿಶ್ವನಾಥ, ಕೊಟ್ಗಿ ಕರಿಬಸಪ್ಪ, ಪೂಜಾರ ಮಂಜುನಾಥ, ಮುದುಕನವರ್‌ ಶಂಕರ, ಎ.ಎಸ್‌.ಎಂ. ಗುರುಪ್ರಸಾದ್, ಸಾವಳಗಿ ಶಿವರಾಜ,ಡಾ.ರಮೇಶಕುಮಾರ, ಡಾ.ರೇಣುಕಾರಾದ್ಯಸೇರಿದಂತೆ ಅಪಾರ ಭಕ್ತ ಸಮೂಹ ರಥೋತ್ಸವ ಕಣ್ತುಂಬಿಕೊಂಡಿತು.

ಹರಪನಹಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ಪ್ರಸಿದ್ಧ ವೀರಭದ್ರೇಶ್ವರ ರಥೋತ್ಸವ ಅಪಾರ ಭಕ್ತರ ಮದ್ಯೆ ಶುಕ್ರವಾರ ಸಂಜೆ ಜರುಗಿತು.