ರಕ್ಷಣಾ ತಂತ್ರಜ್ಞಾನದಲ್ಲಿ ಎಂಟೆಕ್ ಪ್ರಾರಂಭಕ್ಕೆ ಮುಂದಾದ ಜಿಎಂ ವಿ.ವಿ

| Published : Nov 10 2024, 01:40 AM IST

ರಕ್ಷಣಾ ತಂತ್ರಜ್ಞಾನದಲ್ಲಿ ಎಂಟೆಕ್ ಪ್ರಾರಂಭಕ್ಕೆ ಮುಂದಾದ ಜಿಎಂ ವಿ.ವಿ
Share this Article
  • FB
  • TW
  • Linkdin
  • Email

ಸಾರಾಂಶ

GM to launch MTech in defense technology V.V

-ಇನ್ಸ್‌ಟಿಟ್ಯೂಟ್‌ ಆಫ್ ಡಿಫೆನ್ಸ ಸೈಂಟಿಸ್ಟ್ಸ್ಅಂಡ್ ಟೆಕ್ನಾಲಜಿಸ್ಟ್ಸ್‌ನಡುವಿನ ಸಹಯೋಗಕ್ಕೆ ಒಡಂಬಡಿಕೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ರಕ್ಷಣಾ ತಂತ್ರಜ್ಞಾನದಲ್ಲಿ ಎಂಟೆಕ್ ಕೋರ್ಸ್ ನಡೆಸಲು ಜಿಎಂ ವಿ.ವಿ ಮುಂದಾಗಿದ್ದು, ಅದಕ್ಕಾಗಿ ಬೆಂಗಳೂರು ಶಾಖೆಯ ಇನ್ಸ್‌ಟ್ಯೂಟ್‌ ಆಫ್ ಡಿಫೆನ್ಸ್ ಸೈಂಟಿಸ್ಟ್ಸ್ಅಂಡ್ ಟೆಕ್ನಾಲಜಿಸ್ಟ್ಸ್‌ನಡುವಿನ ಸಹಯೋಗಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಜಿಎಂ ವಿಶ್ವವಿದ್ಯಾಲಯದಲ್ಲಿ ಇನ್ಸ್‌ಟಿಟ್ಯೂಟ್‌ ಆಫ್‌ ಡಿಫೆನ್ಸ್‌ ಸೈಂಟಿಸ್ಟ್ಸ್‌ ಅಂಡ್ ಟೆಕ್ನಾಲಜಿಸ್ಟ್ಸ್ ಬೆಂಗಳೂರು ಶಾಖೆಯ ಅಧ್ಯಕ್ಷ ಡಾ. ಎ.ಎನ್. ನಾಗೇಶ್ವರ ಯೋಗಿ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಆರ್. ಶಂಕಪಾಲ್ ಅವರು 2025-26ನೇ ವರ್ಷದ ಸಾಲಿನಲ್ಲಿ ಡಿಆರ್ ಡಿಒ (DRDO) ಅಭಿವೃದ್ಧಿಪಡಿಸಿದ ಮತ್ತು ಎಐಸಿಟಿಇ (AICTE) ಹ್ಯಾಂಡ್‌ ಬುಕ್ (2021) ನಲ್ಲಿ ಪ್ರಕಟಿಸಲಾದ ಪಠ್ಯಕ್ರಮವನ್ನು ಅನುಸರಿಸಿ ರಕ್ಷಣಾ ತಂತ್ರಜ್ಞಾನದಲ್ಲಿ ಎಂಟೆಕ್ ಕೋರ್ಸ್ ಅನ್ನು ನಡೆಸಲು ಈ ಎರಡರ ನಡುವಿನ ಸಹಯೋಗಕ್ಕೆ ಸಹಿ ಹಾಕಿ ಅನುಮತಿ ಸ್ವೀಕರಿಸಲಾಯಿತು.

ರಕ್ಷಣಾ ಸಂಬಂಧಿತ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯವನ್ನು ನಿರ್ಮಿಸುತ್ತದೆ. ರಕ್ಷಣೆಗೆ ಸಂಬಂಧಿಸಿದ ಉದ್ಯೋಗಾವಕಾಶಗಳಿಗೆ ಅವರ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಜಿಎಂ ವಿಶ್ವವಿದ್ಯಾಲಯವು ಡಿಆರ್ ಡಿಒ ಸೂಚಿಸಿದ ಪಠ್ಯಕ್ರಮಕ್ಕೆ ಬದ್ಧವಾಗಿರುತ್ತದೆ ಮತ್ತು ಅಕಾಡೆಮಿಕ್ ಕೌನ್ಸಿಲ್‌ನಿಂದ ಅಗತ್ಯವಿರುವ ಅನುಮೋದನೆ ಪಡೆಯುತ್ತದೆ. ಈ ಕಾರ್ಯಕ್ರಮವು ಉಪನ್ಯಾಸಗಳು, ಸೆಮಿನಾರ್‌ಗಳು, ಅತಿಥಿ ಉಪನ್ಯಾಸಗಳು, ಟ್ಯುಟೋರಿಯಲ್‌ಗಳು, ಲ್ಯಾಬ್ ಕೆಲಸ ಮತ್ತು ಪ್ರಬಂಧ ಒಳಗೊಂಡಿರುತ್ತದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ತಿಳಿಸಿದರು.

ಡಿಆರ್ ಡಿಒ ನ ನಿವೃತ್ತ ಮತ್ತು ಕೆಲಸ ಮಾಡುವ ವಿಜ್ಞಾನಿಗಳ ಪೂಲ್‌ನಿಂದ ಅಧ್ಯಾಪಕರನ್ನು ನಾಮನಿರ್ದೇಶನ ಮಾಡಿ ಮತ್ತು ಸಂಘಟಿಸುವುದು. ರಕ್ಷಣಾ ವಲಯಗಳಿಂದ ಹೆಚ್ಚುವರಿ ಅಧ್ಯಾಪಕರು ಅಥವಾ ತಾಂತ್ರಿಕ ತಜ್ಞರನ್ನು ಗುರುತಿಸುವಲ್ಲಿ ಸಹಾಯ ಮಾಡಬೇಕು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಚಟುವಟಿಕೆ ನಿರ್ವಹಿಸಲು ಕೋರ್ಸ್ ಸಂಯೋಜಕರನ್ನು (CCO) ನೇಮಿಸಬೇಕು. ಬಾಹ್ಯ ಸಂಪನ್ಮೂಲಗಳೊಂದಿಗೆ ಸಮನ್ವಯಗೊಳಿಸಲು ಮತ್ತು ಡಿಆರ್ ಡಿಒ ಅವಶ್ಯಕತೆಗಳೊಂದಿಗೆ ಜೋಡಣೆ ಖಚಿತಪಡಿಸಿಕೊಳ್ಳಲು ಜಿಎಂ ವಿಶ್ವವಿದ್ಯಾಲಯಕ್ಕೆ ಸಹಾಯ ಮಾಡುವುದು ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸೈಂಟಿಸ್ಟ್ಸ್ ಅಂಡ್ ಟೆಕ್ನಾಲಜಿಸ್ಟ್ಸ್ ಪಾತ್ರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಆಡಳಿತ ಮಂಡಳಿಯ ಸದಸ್ಯರಾದ ಡಾ. ಕೆ. ದಿವ್ಯಾನಂದ, ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಿಭಾಗದ ಸೀನಿಯರ್ ಡೀನ್ ಡಾ. ಕರಿಬಸಪ್ಪ, ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಡಾ. ಟಿ.ಎಂ. ವೀರ ಗಂಗಾಧರ ಸ್ವಾಮಿ, ಫ್ಯಾಕಲ್ಟಿ ಆಫ್ ಕಂಪ್ಯೂಟಿಂಗ್ ಅಂಡ್ ಐಟಿ ವಿಭಾಗದ ಡೀನ್ ಡಾ. ಶ್ವೇತಾ ಮರಿಗೌಡರ್ ಇದ್ದರು.

.........

ಫೋಟೊ: ಕ್ಯಾಪ್ಷನಃ8ಕೆಡಿವಿಜಿ45ಃ

ದಾವಣಗೆರೆ ಜಿಎಂ ವಿವಿ ಬೆಂಗಳೂರು ಶಾಖೆಯ ಇನ್ಸ್‌ಟಿಟ್ಯೂಟ್‌ ಆಫ್ ಡಿಫೆನ್ಸ್ ಸೈಂಟಿಸ್ಟ್ಸ್ ಅಂಡ್ ಟೆಕ್ನಾಲಜಿಸ್ಟ್ಸ್ ನಡುವಿನ ಸಹಯೋಗಕ್ಕೆ ಒಡಂಬಡಿಕೆ ಮಾಡಿಕೊಂಡಿತು.