ಸಾರಾಂಶ
- ಹೈದರಾಬಾದ್‌ನ ಅಪೆಕ್ಸ್ ಎಸ್‌ಡಿಜಿ ಕಾರ್ಯನಿರ್ವಾಹಕ ನಿರ್ದೇಶಕ ಭೇಟಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆನಗರದ ಜಿಎಂ ವಿಶ್ವವಿದ್ಯಾಲಯವು ಪ್ರಾರಂಭಿಕ ಹಂತದಲ್ಲೇ ಕಡಿಮೆ ಅವಧಿಯಲ್ಲಿ ಅಂತರ ರಾಷ್ಟ್ರೀಯ ಮಾನ್ಯತೆ ಪಡೆಯಲು ಮೊದಲ ಹೆಜ್ಜೆ ಇಟ್ಟಿದ್ದು, ವಿದೇಶದಲ್ಲಿನ ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಇದೀಗ ಮುಂದಾಗಿದೆ.
ಈ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮತ್ತು ಎಂಟೆಕ್ ವ್ಯಾಸಂಗ ಪಡೆಯುತ್ತಿರುವ ವಿದ್ಯಾರ್ಥಿಗಳು ಇಲ್ಲಿ ಒಂದು ವರ್ಷದ ಜೊತೆಗೆ ವಿದೇಶದಲ್ಲಿನ ವಿಶ್ವವಿದ್ಯಾಲಯಗಳಲ್ಲೂ ಒಂದು ವರ್ಷ ವ್ಯಾಸಂಗ ಮಾಡುವಂತಹ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಡಬಲ್ ಡಿಗ್ರಿ ಪ್ರೋಗ್ರಾಮ್ ಪರಿಕಲ್ಪನೆಯ ಉದ್ದೇಶವನ್ನು ಜಿಎಂ ವಿಶ್ವವಿದ್ಯಾಲಯ ಹೊಂದಿದೆ. ಹೀಗೆ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ವಿದೇಶದಲ್ಲಿನ ವಿಶ್ವವಿದ್ಯಾಲಯಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಬೇಕಾದರೆ ಅಂತರ ರಾಷ್ಟ್ರೀಯ ಮಾನ್ಯತೆ ಅತ್ಯಗತ್ಯವಾಗಿದೆ. ಅದು ಅಂತರ ರಾಷ್ಟ್ರೀಯ ಸಂಸ್ಥೆಯ ಮುಖೇನ ಪಡೆಯುವ ವಿಧಾನ ಇದೆ.ಈ ದೃಷ್ಟಿಯಿಂದ ಜಿಎಂ ವಿಶ್ವವಿದ್ಯಾಲಯವು ಪ್ರಾರಂಭವಾದ ಎರಡೇ ವರ್ಷದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆಯಲು ಮುಂದಾಗಿದೆ. ಮಾನ್ಯತೆ ಪಡೆಯುವ ಸಲುವಾಗಿ ಜಿಎಸ್‌ಎಎಎ ಎಂಬ ಅಂತರರಾಷ್ಟ್ರೀಯ ಸಂಸ್ಥೆಗೆ ಮನವಿ ನೀಡಲಾಗಿತ್ತು. ಈ ಹಿನ್ನೆಲೆ ಗುರುವಾರ ಇದಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಅಪೆಕ್ಸ್ ಎಸ್‌ಡಿಜಿ ಕಾರ್ಯನಿರ್ವಾಹಕ ನಿರ್ದೇಶಕ ಸುಧೀರ್ ಕುಮಾರ್ ಅವರು ಜಿಎಂ ವಿವಿಗೆ ಭೇಟಿ ನೀಡಿ ಪ್ರತಿ ವಿಭಾಗ, ಶೈಕ್ಷಣಿಕ ಮತ್ತು ಕಲಿಕಾ ವಿಧಾನ ಸೇರಿದಂತೆ ಸಂಪೂರ್ಣವಾಗಿ ಅವಲೋಕಿಸಿದರು.
ವಿಶ್ವವಿದ್ಯಾಲಯದ ಸಹ ಕುಲಪತಿಗಳಾದ ಡಾ.ಎಚ್.ಡಿ.ಮಹೇಶಪ್ಪ, ಜಿಎಂ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಗಿರೀಶ್ ಬೋಳಕಟ್ಟಿ ಜೊತೆಗಿದ್ದು, ಪ್ರತಿಯೊಂದರ ಬಗ್ಗೆ ವಿವರಣೆ ನೀಡಿದರು. ಈ ವಿಚಾರವಾಗಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಅಂತರ ರಾಷ್ಟ್ರೀಯ ಮಾನ್ಯತೆಗಾಗಿ ಬೇಕಾದ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅವಶ್ಯಕ ದಾಖಲೆ ಸಹಿತ ವಿವರಣೆ ನೀಡಿದರು.ವಿವಿ ಬಗ್ಗೆ ಅವಲೋಕಿಸಿದ ಸುಧೀರ್ ಕುಮಾರ್ ಅವರು, ಜಿಎಂ ವಿಶ್ವವಿದ್ಯಾಲಯವು ಅತಿಥಿಯ ಸಂಸ್ಥೆಯಾಗಿದೆ. ಕಡಿಮೆ ಅವಧಿಯಲ್ಲಿಯೇ ಅಂತರ ರಾಷ್ಟ್ರೀಯ ಮಾನ್ಯತೆಗೆ ಮುಂದಾಗಿರುವುದು ಮೊದಲನೆಯದಾಗಿದೆ. ಇಲ್ಲಿ ಶೈಕ್ಷಣಿಕ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ಶ್ರೇಷ್ಠ ಸಹಮತದ ಜೊತೆಗೆ ಉತ್ತಮ ಸೌಲಭ್ಯಗಳನ್ನು ಸಹ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿನ ಬೆಳವಣಿಗೆಗೆ ಸಂಬಂಧಿಸಿದಂತೆ ಸಮರ್ಥನೀಯವಾದಂಥ ಅಂತರ ರಾಷ್ಟ್ರೀಯ ಸಮ್ಮೇಳನಗಳನ್ನು ಸಹ ನಡೆಸಲಾಗುತ್ತಿದೆ ಎಂದು ಪ್ರಶಂಶಿಸಿದರು.
- - - -8ಕೆಡಿವಿಜಿ43ಃ:ದಾವಣಗೆರೆಯ ಜಿಎಂ ವಿಶ್ವವಿದ್ಯಾನಿಲಯವು ವಿದೇಶದಲ್ಲಿನ ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಕುರಿತು ಚರ್ಚಿಸಲಾಯಿತು.