ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಲ್ಲರೂ ಸಮಾನತೆ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.ನವನಗರದ ಕಲಾಭವನದಲ್ಲಿ ನಡೆದ ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾಳಿದಾಸ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಹೈಸ್ಕೂಲ್ ವಿಭಾಗದ 5ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರೂ ಒಂದೇ ಸಮಾಜದವರಲ್ಲ, ಎಲ್ಲರೂ ವಿವಿಧ ಸಮಾಜದವರಾಗಿದ್ದೀರಿ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡು ಸಮಾನತೆ ಸಮಾಜ ನಿರ್ಮಾಣ ಮಾಡಲಿಕ್ಕೆ ಹೆಜ್ಜೆ ಹಾಕಬೇಕು. ಕಾಳಿದಾಸ ವಿದ್ಯಾಸಂಸ್ಥೆ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣಾಗಿ ಆಯೋಜಿಸಿದೆ ಎಂದರು.
ವಿದ್ಯಾರ್ಥಿಗಳು ಸಾಮಾಜಿಕ, ಪರಿಸರ ಹಾಗೂ ಸಮಯ ಪ್ರಜ್ಞೆ ಹೊಂದಿರಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಜೊತೆ ಪೋಷಕರು ಕೈಜೋಡಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇಷ್ಟು ದೊಡ್ಡ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಕೊಡುವುದು ಸುಲಭವಲ್ಲ. ನಮ್ಮ ದೇಶಕ್ಕೆ ಬೇಕಾಗಿರುವುದು ಒಳ್ಳೆಯ ಪ್ರಜೆಗಳು ನಾವು ಮಾಡೇ ಮಾಡ್ತೀವಿ ಎನ್ನುವ ಯುವ ಸಮೂಹ ಬೇಕಾಗಿದೆ. ಉತ್ತಮ ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳು ದೈನಂದಿನ ದಿನಾಚರಣೆ ಸಿದ್ಧತೆಯಲ್ಲಿ ಸಾಗಿದಾಗ ಮಾತ್ರ ಸಾಧನೆ ಸಾಧ್ಯ. ಕೇವಲ ಒಂದು ದಿನ ಎನ್ನದೆ ಇದು ಅನುದಿನದ ಸಿದ್ಧತೆಯಲ್ಲಿ ಇದ್ದಾಗ ಮಾತ್ರ ಫಲ ಸಿಗಲು ಸಾಧ್ಯ ಎಂದು ಹೇಳಿದರು.ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಪಂ ಸಿಇಒ ಶಶಿಧರ್ ಕುರೇರ, ಈ ಸಂಸ್ಥೆ ಕಳೆದ 1970ರಿಂದ ಇಲ್ಲಿಯವರೆಗೆ ಹಲವಾರು ಯಶಸ್ಸಿನ ಹೆಜ್ಜೆ ಕಂಡು ಹೆಮ್ಮರವಾಗಿ ಬೆಳೆದಿದೆ. ಈ ಸಂಸ್ಥೆಯ ಪದಾಧಿಕಾರಿಗಳು ಪ್ರಾಧ್ಯಾಪಕರು, ಶಿಕ್ಷಕರು, ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿಕ್ಷಣ ಸಂಸ್ಥೆ ನಡೆಸಿಕೊಂಡು ಹೋಗುವುದು ಈ ಯುಗದಲ್ಲಿ ಅಷ್ಟು ಸುಲಭದ ಕೆಲಸವಲ್ಲ ಎಂದರು. ಎಲ್ಲರಿಗೂ ಪ್ರತಿಯೊಂದು ಹಂತಗಳಲ್ಲಿ ನೋವು ಕಷ್ಟಗಳು ಬಂದೇ ಬರುತ್ತವೆ. ಅದನ್ನೇ ಬದಿಗೊತ್ತಿ ಒಳ್ಳೆಯ ಸತ್ಕಾರ ನಡವಳಿಕೆ ಅಳವಡಿಸಿಕೊಂಡು ಮಾತ್ರ ವಿಶೇಷವಾಗಿ ಸಾಧಿಸಲು ಸಾಧ್ಯ. ನಮ್ಮ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಲು ಅವರಿಗೆ ಸೂಕ್ತ ಸೌಲಭ್ಯ ಒದಗಿಸಿದಾಗ ಶಿಕ್ಷಣದಲ್ಲಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪಾಲಕರಿಗೆ ತಿಳಿಸಿದರು.
ನೋವುಗಳು ನಮ್ಮ ಜೀವನಕ್ಕೆ ಒಳ್ಳೆಯ ಪಾಠ ಹೇಳಿಕೊಡುತ್ತದೆ. ಕಷ್ಟಗಳನ್ನು ಬದಿಗೊತ್ತಿ ಒಳ್ಳೆಯ ಶಿಕ್ಷಣ ಪಡೆಯಿರಿ ಹೆಚ್ಚಿನ ಪ್ರಯತ್ನದಿಂದ ಒಂದು ದಿನ ಪ್ರತಿಫಲ ಸಿಕ್ಕೇ ಸಿಗುತ್ತದೆ. ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಅಧಿಕಾರಿಯಾಗಬೇಕೆಂಬ ಆಸೆ ಇದ್ದರೆ ಅದಕ್ಕೆ ಕಠಿಣ ಪರಿಶ್ರಮ ಮತ್ತು ಗುರಿ ಅಗತ್ಯ, ಪ್ರತಿಯೊಂದು ಮಗುವಿನಲ್ಲಿ ಒಳ್ಳೆಯ ಗುಣ ಮತ್ತು ಕೌಶಲ್ಯ ಅಡಗಿರುತ್ತದೆ. ಅವರಲ್ಲಿನ ಪ್ರತಿಭೆ ಹೊರ ಹಾಕುವ ಮೂಲಕ ಸಾಧನೆಗೆ ಮುಂದಾಗಲಿಕ್ಕೆ ನೆರವಾಗಿ ಎಂದು ನೆರೆದಿದ್ದ ಪಾಲಕರಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಜಿ.ಎಸ್.ಪಾಟೀಲ್, ಸಂಸ್ಥೆಯ ನಿರ್ದೇಶಕ ವಿ.ಎಂ.ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್ ಬಡದಾನಿ, ಕಾರ್ಯದರ್ಶಿ ಟಿ.ಬಿ.ಕುರುಬರ, ನಿರ್ದೇಶಕ ಎನ್.ವೈ.ನೀಲಾರ್, ಎಸ್.ಎಸ್.ದೊಡ್ಡಮನಿ, ವಿ.ಎಂ.ಪಾಟೀಲ್, ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲ ಮೇಲ್ವಿನ್ ಬಾಬಿ ಮರ್ಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪೂಜಾರಿ, ಪ್ರೌಢಶಾಲೆಯ ಪ್ರಾಚಾರ್ಯ ವಿರಕ್ತಮಠ ಹಾಗೂ ಪದವಿ ಕಾಲೇಜಿನ ಪ್ರಾಚಾರ್ಯ ಆರ್.ಎಫ್.ಚವ್ಹಾಣ ಸೇರಿ ಶಿಕ್ಷಕರು, ಸಿಬ್ಬಂದಿ ಇತರರಿದ್ದರು.