ಸನ್ನಡತೆ ಮೂಲಕ ಸದೃಢ ಭಾರತ ಕಟ್ಟಲು ಮುಂದಾಗಿ

| Published : Mar 13 2024, 02:01 AM IST

ಸಾರಾಂಶ

ಕಲಾದಗಿ: ನಮ್ಮ ಈ ಪವಿತ್ರ ಹಿಂದೂ ದೇಶವನ್ನು 2047 ರ ಹೊತ್ತಿಗೆ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿರುವ ದೇಶದ್ರೊಹಿಗಳಿಗೆ ತಕ್ಕ ಪಾಠಕಲಿಸಲು ಮನೆ ಮನೆಯಲ್ಲಿಯೂ ಹಿಂದೂತ್ವದ ಹಾಗು ನನ್ನ ದೇಶ, ನನ್ನ ಸಂಸ್ಕೃತಿ, ನನ್ನವರು ಎಂಬ ಜಾಗೃತಿ ಮೂಡಬೇಕಾಗಿದೆ. ಹಿಂದೂ ಸಂಘಟನೆಗಳಿಗೆ ತನು ಮನ ಧನದಿಂದ ಬಲ ತುಂಬುವ ಕೆಲಸ ಆಗಬೇಕಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ ನಮ್ಮ ಈ ಪವಿತ್ರ ಹಿಂದೂ ದೇಶವನ್ನು 2047 ರ ಹೊತ್ತಿಗೆ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿರುವ ದೇಶದ್ರೊಹಿಗಳಿಗೆ ತಕ್ಕ ಪಾಠಕಲಿಸಲು ಮನೆ ಮನೆಯಲ್ಲಿಯೂ ಹಿಂದೂತ್ವದ ಹಾಗು ನನ್ನ ದೇಶ, ನನ್ನ ಸಂಸ್ಕೃತಿ, ನನ್ನವರು ಎಂಬ ಜಾಗೃತಿ ಮೂಡಬೇಕಾಗಿದೆ. ಹಿಂದೂ ಸಂಘಟನೆಗಳಿಗೆ ತನು ಮನ ಧನದಿಂದ ಬಲ ತುಂಬುವ ಕೆಲಸ ಆಗಬೇಕಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ಛತ್ರಪತಿ ಶಿವಾಜಿ ಮಹರಾಜರ ಜಯಂತಿ ಹಾಗು ಶ್ರೀರಾಮನವಮಿಯ ನಿಮಿತ್ತ ಗ್ರಾಮದಲ್ಲಿ ಭಾನುವಾರ ಸಂಜೆ ಸ್ಥಳೀಯ ಶ್ರೀ ರಾಮಸೇನೆ ವತಿಯಿಂದ ಆಯೋಜಿಸಿದ್ದ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಮ್ಮದಲ್ಲ. ದೇಶದ್ರೋಹಿಗಳು ಅಟ್ಟಹಾಸ ಮೆರೆಯುತ್ತಿದ್ದು ಅವರನ್ನು ಕಾನೂನಿನ ಮೂಲಕ ಸದೆ ಬಡಿಯಬಹುದು ಎಂಬುದು ತಪ್ಪು. ನಮ್ಮ ದೇಶ, ನಮ್ಮ ಮನೆ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳಲು ಪ್ರತಿ ಮನೆಯಲ್ಲಿಯೂ ಶಿವಾಜಿ ಮಹರಾಜ, ಶ್ರೀರಾಮನಂಥವರು ಸಿದ್ದಗೊಳ್ಳಬೇಕಾಗಿದೆ ಎಂಬುದೇ ಇಂಥ ಆಚರಣೆಗಳ ಮೂಲ ಉದ್ದೇಶ ಎಂದು ಹೇಳಿದರು.

ಕೆಟ್ಟಚಟಗಳಿಗೆ ಬಲಿಯಾಗಿ ಹಾದಿ ತಪ್ಪುತ್ತಿರುವ ದೇಶದ ಶಕ್ತಿವಂತ ಯುವಕರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ದಯವಿಟ್ಟು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ದುಶ್ಚಟಗಳಿಂದ ಹೊರಬನ್ನಿ, ಸನ್ನಡತೆ ಮೂಲಕ ಸದೃಢ ಭಾರತ ಕಟ್ಟಲು ಮುಂದಾಗಿ ಎಂದು ಮನವಿ ಮಾಡಿದರು.

ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಅಣ್ಣಾ ಗುಂಜ್ಜಗಾವಿ ಮಾತನಾಡಿ, ರಾಮೇಶ್ವರಂ ಕೆಫೆ ಮೇಲೆ ಬಾಂಬ್ ದಾಳಿಗೆ, ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಬೆಂಬಲ ನೀಡುತ್ತಿರುವ ಕಾಂಗ್ರೇಸ್‌ನವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹರಿಹಾಯ್ದರು.

ಮಾಜಿ ಸೈನಿಕ ಹನುಮಂತ ಭಂಗಿ, ಹಿಂದೂ ಮುಖಂಡ ದಯಾನಂದ ವಾಘ, ಜಾಧವ ವೇದಿಕೆಯಲ್ಲಿದ್ದರು.