ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಗೊ.ರು. ಚನ್ನಬಸಪ್ಪ: ಸುರೇಶ್

| Published : Dec 09 2024, 12:45 AM IST

ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಗೊ.ರು. ಚನ್ನಬಸಪ್ಪ: ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರ, ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ತಮ್ಮ ಸಾಹಿತ್ಯದಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಕಜಾಪ ಜಿಲ್ಲಾಧ್ಯಕ್ಷ ಜೆ. ಬಿ. ಸುರೇಶ್ ತಿಳಿಸಿದರು.

ಸಾಹಿತಿ, ನಾಡೋಜ, ಡಾ, ಗೊರುಚ ರವರ ಬದುಕು ಬರಹ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ, ಅಜ್ಜಂಪುರ

ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ತಮ್ಮ ಸಾಹಿತ್ಯದಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಕಜಾಪ ಜಿಲ್ಲಾಧ್ಯಕ್ಷ ಜೆ. ಬಿ. ಸುರೇಶ್ ತಿಳಿಸಿದರು.

ತಾಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಅಜ್ಜಂಪುರ ತಾಲೂಕು ಮತ್ತು ಚಿಕ್ಕಮಗಳೂರು ಜಿಲ್ಲಾ ಜಾನಪದ ಪರಿಷತ್ತು ಘಟಕದಿಂದ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ಸಾಹಿತಿ, ನಾಡೋಜ, ಡಾ, ಗೊರುಚ ರವರ ಬದುಕು ಬರಹ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಅನಾದಿಕಾಲದಿಂದಲೂ ನಮ್ಮ ಜನಪದರು, ಶರಣರು, ಸಾಹಿತಿಗಳು ಕವಿಪುಂಗವರು, ಶ್ರೀಮಂತ ಗೊಳಿಸಿದ್ದಾರೆ. ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಸಾಹಿತಿ ಗೊರುಚ ರವರು ಹೊನ್ನ ಬಿತ್ತೇವು ಹೊಲಕ್ಕೆಲ್ಲ ಎಂಬ ಕೃತಿ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರಾವು, ಅಯ್ಯನಕೆರೆ ಮುಂತಾದ ಜಾನಪದ ನಾಟಕಗಳು, ನೂರಾರು ಸಾಕ್ಷ್ಯ ಚಿತ್ರಗಳು, ಶರಣ ಸಾಹಿತ್ಯ ರಚಿಸದಿದ್ದರೆ ಜಾನಪದ ಲೋಕ, ಶರಣ ಸಾಹಿತ್ಯ ಲೋಕ ಬಡವಾಗುತ್ತಿತ್ತು ಎಂದು ಅಭಿಪ್ರಾಯಿಸಿದರು.

ಆಗಿನ ತರೀಕೆರೆ ತಾಲೂಕು, ಗೊಂಡೇದ ಹಳ್ಳಿಯಲ್ಲಿ ಜನಿಸಿ ಹಡಗಲು ತಿಮ್ಮಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ಸಂಪಾದಕರಾಗಿ, ರಾಜ್ಯಮಟ್ಟದ ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ, ಕಸಾಪ , ಜಾನಪದ ಅಕಾಡೆಮಿ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು

ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಎಸ್. ಎಂ. ನಾಗರಾಜ್ ಉಧ್ಘಾಟಿಸಿ ಮಾತನಾಡಿ, ಗೊರುಚರವರು ಕನ್ನಡ ನಾಡಿನ ಜಾನಪದ ಹಾಗೂ ಶರಣ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಹೇಳಿದರು.

ಡಾ. ಬಸರಾಜ ನೆಲ್ಲಿಸರ ಮಾತನಾಡಿ, ಜಾನಪದ ಸಂಸ್ಕೃತಿ ಕಲೆ ಸಾಹಿತ್ಯ ಉಳಿಸಿ ಬೆಳೆಸುವ ಸಲುವಾಗಿ ಜಾನಪದ ವಿಶ್ವವಿದ್ಯಾಲಯ ಕಟ್ಟಿದರು. ಕಸಾಪ ಅಧ್ಯಕ್ಷರಾಗಿದ್ದಾಗ ಒಂದು ರು. ದೇಣಿಗೆ ಸಂಗ್ರಹಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿದರು. ಅವರ ಸಾಹಿತ್ಯ ಸೇವೆಗೆ ಪ್ರಶಸ್ತಿ ರೂಪದಲ್ಲಿ ನೀಡಿದ ಸುಮಾರು 25 ಲಕ್ಷ ರು. ಹಣವನ್ನು ಸರಕಾರದ ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿಗೆ ನೀಡಿರುವುದ ಜನಪದ ಕಲೆಗೆ ಅವರು ಕೊಟ್ಟಿರುವ ವಿಶೇಷ ಪ್ರೋತ್ಸಾಹ ಎಂದು ಬಣ್ಣಿಸಿದರು.

ಕಸಾಪದ ತಾಲೂಕು ಅಧ್ಯಕ್ಷ ಎಚ್.ಆರ್. ಚಂದ್ರಪ್ಪ, ಗೊರುಚ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸುತ್ತಾ ನಾಡಿನ ಜನಪದ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮರುಳುಸಿದ್ದ ಪಂಡಿತರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಡಿಸೆಂಬರ್ 15ನೇ ತಾರೀಕು ನಡೆಯುವ ಅಜ್ಜಂಪುರ ತಾಲೂಕು ಜಾನಪದ ಸಮ್ಮೇಳನದ ಅಧ್ಯಕ್ಷ ಚಿಕ್ಕಾನವಂಗಲ ಶಂಕರಪ್ಪ ನವರಿಗೆ ಆಹ್ವಾನ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಾಳೇನಹಳ್ಳಿ ಬಸಪ್ಪ ವಹಿಸಿದ್ದರು. ಅಜ್ಜಂಪುರ ತಾಲೂಕು ಗೌರವಾಧ್ಯಕ್ಷ ಮರುಳು ಸಿದ್ದಪ್ಪ, ಉಪಾಧ್ಯಕ್ಷ ಗೊಂಡೆದಹಳ್ಳಿ,ತಿಪ್ಪೇಶ್, ಶಿವಕುಮಾರ್, ಕೆ ಸಿ ಶಿವಮೂರ್ತಿ, ಆರ್ ನಾಗೇಶ್, ಓಂಕಾರಯ್ಯ, ಸಿಎಂ ಪರಮೇಶ್ವರಪ್ಪ, ಗಂಗಾಧರಪ್ಪ, ರಾಜಣ್ಣ, ದೇವರಾಜು, ಸೋಮಣ್ಣ, ಓಂಕಾರಯ್ಯ, ಶಂಕರ್ ಲಿಂಗಪ್ಪ, ಬಸಮ್ಮ, ಗಾಯತ್ರಮ್ಮ, ವಿರೂಪಾಕ್ಷಪ್ಪ,ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

8ಕಕೆಡಿಯು3.,

ಅಜ್ಜಂಪುರ ತಾಲೂಕಿನ ಚಿಕ್ಕಾನವಂಗಲ ಗ್ರಾಮದಲ್ಲಿ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ, ಜಾನಪದ ವಿದ್ವಾಂಸ ನಾಡೋಜ, ಡಾ, ಗೊರುಚ ರವರ ಬದುಕು ಬರಹ ವಿಚಾರ ಸಂಕಿರಣ ನಡೆಯಿತು.