ಸ್ವಯಂ ಉದ್ಯೋಗ ಪಡೆಯಲು ಮುಂದಾಗಿ: ರೇಖಾ ಮ್ಯಾಗೇರಿ

| Published : Mar 04 2024, 01:23 AM IST

ಸಾರಾಂಶ

ಕೌಶಲ್ಯ ಅಭಿವೃದ್ಧಿ ಅವಶ್ಯಕ ಕಾರ್ಯತಂತ್ರವಾಗಿದೆ ಗ್ರಾಮೀಣ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಇಂದು ಅವಶ್ಯವಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಆಕಾಶ ಕಂಪ್ಯೂಟರ್ ಕಚೇರಿಯಲ್ಲಿ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಮ್ ಎಂಟರ್‌ಪ್ರೈಸೆಸ್ ಡೆವಲಪ್‌ಮೆಂಟ್ ಫೆಸಿಲಿಟೇಶನ್ ಹಾಗೂ ಆಕಾಶ್‌ ಕಂಪ್ಯೂಟರ್ಸ್ ಯಾದಗಿರಿ ಸಂಯುಕ್ತಾಶ್ರಯದಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಎನ್.ಮ್ಯಾಗೇರಿ, ಕೌಶಲ್ಯ ಅಭಿವೃದ್ಧಿ ಅವಶ್ಯಕ ಕಾರ್ಯತಂತ್ರವಾಗಿದೆ ಗ್ರಾಮೀಣ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಇಂದು ಅವಶ್ಯವಾಗಿದೆ. ಯುವಕರು ಕೇವಲ ತಮ್ಮ ಅಂಕಪಟ್ಟಿಯನ್ನೇ ಅವಲಂಬಿಸಿ ಸರ್ಕಾರದ ಉದ್ಯೋಗಗಳಿಗೆ ಕಾಯುತ್ತಾ ಕೂರದೇ ಸ್ವಯಂ ಉದ್ಯೋಗ ಪಡೆಯಲು ಮುಂದಾಗುವುದು ಇಂದಿನ ಅವಶ್ಯಕತೆ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದರು.

ಆಕಾಶ್ ಕೊನಸಾಲಿ ಡಿಜಿಸ್ಟರ್ ಟೆಕ್ನಾಲಾಜಿ ಕಲಬುರಗಿ ಅವರು, ಯುವಕ ಯುವತಿಯರಿಗೆ ಯುಟ್ಯೂಬ್ ಹಾಗೂ ಇನ್ಸ್ಟಾಟಾಗ್ರಾಂ ಮೂಲಕ ಮನೆಯಲ್ಲಿಯೇ ಕುಳಿತು ಸಂವಹನ ಮೂಲಕ ವ್ಯಾಪಾರವನ್ನು ಮಾಡುತ್ತಾ ಆರ್ಥಿಕ ಲಾಭ ಪಡೆಯುವ ಅನೇಕ ಯೋಜನೆಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಆಕಾಶ್ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸತೀಶ ದುಪ್ಪಲ್ಲಿ ಹಾಗೂ ಆಕಾಶ್ ಕಂಪ್ಯೂಟರ್ಸ್ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಮತ್ತು ಯಾದಗಿರಿ ಅನೇಕ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ವೇದಿಕೆಯಲ್ಲಿ ಎ.ಸುಭಲಕ್ಷ್ಮಿ, ಸಹಾಯಕ ನಿದೇಶಕರು ಎಂಎಸ್ಎಂಇ, ಶಶಿಕುಮಾರ ಅಧಿಕಾರಿಗಳ ಎಂಎಸ್ಎಂಇ, ಬನ್ನಪ್ಪ ಸಜ್ಜನ, ವೆಂಕಟೇಶ ಸಜ್ಜನ, ಆಕಾಶ ಕಂಪ್ಯೂಟರ್ಸ್ ಸಿಬ್ಬಂದಿ ಅಂಬಿಕಾ, ಸೌಮ್ಯ ಸಜ್ಜನ, ಉಮೇಶ, ಬನದೇಶ ಮುಂತಾದವರಿದ್ದರು. ಉಪನ್ಯಾಸಕ ಗುರುಪ್ರಸಾದ್ ವೈದ್ಯ ನಿರೂಪಿಸಿದರು.