ರಸ್ತೆ ಮಧ್ಯದಲ್ಲಿ ದಿಢೀರನೆ ಬಂದ ಹಂದಿ ರಕ್ಷಿಸಲು ಹೋಗಿ ಡಿಸೆಲ್ ಟ್ಯಾಂಕರ್ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ತಾಲೂಕಿನ ಮಲ್ಲಾಬಾದ ಗ್ರಾಮದ ಬಳಿ ನಡೆದಿದೆ.
ಅಫಜಲ್ಪುರ: ರಸ್ತೆ ಮಧ್ಯದಲ್ಲಿ ದಿಢೀರನೆ ಬಂದ ಹಂದಿ ರಕ್ಷಿಸಲು ಹೋಗಿ ಡಿಸೆಲ್ ಟ್ಯಾಂಕರ್ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ತಾಲೂಕಿನ ಮಲ್ಲಾಬಾದ ಗ್ರಾಮದ ಬಳಿ ನಡೆದಿದೆ. ಡಿಸೆಲ್ ತುಂಬಿಕೊಂಡು ಮುಂಬೈನಿಂದ ತೆಲಂಗಾಣದ ಕರ್ನೂಲ್ ಗೆ ಈ ಟ್ಯಾಂಕರ್ ಹೊರಟಿತ್ತು. ಟ್ಯಾಂಕರ್ ಅಂದಾಜು ೪೦ ಸಾವಿರ ಲೀಟರ ಡಿಸೇಲ್ ಸಂಗ್ರಹಣೆ ಹೊಂದಿತ್ತು. ಪಲ್ಟಿಯಾದ ನಂತರ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ. ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಅಫಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.