ಕಾಂಗ್ರೆಸ್‌ನಿಂದ ಗೋಬ್ಯಾಕ್‌ ಮೋದಿ ಚಳವಳಿ

| Published : Apr 14 2024, 01:45 AM IST

ಕಾಂಗ್ರೆಸ್‌ನಿಂದ ಗೋಬ್ಯಾಕ್‌ ಮೋದಿ ಚಳವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬರಪರಿಹಾರ ಕೊಡುತ್ತಿಲ್ಲ. ಜಿಎಸ್‌ಟಿ ತೆರಿಗೆ ಹಣ ನೀಡುತ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಲೇ ಬರುತ್ತಿದೆ.

ಹುಬ್ಬಳ್ಳಿ:

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡದೇ ಅನ್ಯಾಯ ಮಾಡಿದೆ ಎಂದು ಆರೋಪಿಸಿ, ಗೋಬ್ಯಾಕ್‌ ಮೋದಿ ಚಳವಳಿಯನ್ನು ಕಾಂಗ್ರೆಸ್‌ ನಡೆಸಿತು.

ಇಲ್ಲಿನ ತಹಸೀಲ್ದಾರ್‌ ಕಚೇರಿ ಎದುರು ಗೋ ಬ್ಯಾಕ್‌ ಮೋದಿ, ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪದ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಬರಪರಿಹಾರ ಕೊಡುತ್ತಿಲ್ಲ. ಜಿಎಸ್‌ಟಿ ತೆರಿಗೆ ಹಣ ನೀಡುತ್ತಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಲೇ ಬರುತ್ತಿದೆ. ಅದ್ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬಂದು ಪ್ರಧಾನಿ ಮತ ಕೇಳುತ್ತಾರೆ. ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಕ್ಕಾಗಿ ಗೋಬ್ಯಾಕ್‌ ಮೋದಿ ಎಂಬ ಚಳವಳಿ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಬಳಿಕ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ ಸನದಿ, ಪ್ರಕಾಶ ಕುರಹಟ್ಟಿ, ಅನ್ವರ್‌ ಮುಧೋಳ, ಮೋಹನ ಹಿರೇಮನಿ, ರವಿ ಕಲ್ಯಾಣಿ, ಸದಾನಂದ ಡಂಗನವರ, ಎಂ.ಎಸ್‌. ಪಾಟೀಲ, ಗಂಗಾಧರ ದೊಡ್ಡವಾಡ, ಬಿ. ಶಿವಕುಮಾರ, ಸುವರ್ಣ ಕಲ್ಲಕುಂಟ್ಲಾ, ಹೂವಪ್ಪ ದಾಯಗೋಡಿ, ಶರಣಪ್ಪ ಕೊಟಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.