ಗೋಬರ್ ಗ್ಯಾಸ್ ಉತ್ಪಾದನೆಗೆ ಆದ್ಯತೆ ನೀಡಬೇಕು: ಎಸ್. ಅಬ್ದುಲ್ ನಜೀರ್

| Published : Oct 24 2024, 12:54 AM IST

ಗೋಬರ್ ಗ್ಯಾಸ್ ಉತ್ಪಾದನೆಗೆ ಆದ್ಯತೆ ನೀಡಬೇಕು: ಎಸ್. ಅಬ್ದುಲ್ ನಜೀರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದಂತೆ ಆಗಬೇಕು. ಬಸವಣ್ಣನವರು ಹೇಳಿದ ವಿಚಾರಗಳನ್ನು ಪಾಲಿಸಿದರೆ ಯಾವ ಪೊಲೀಸ್ ಠಾಣೆ, ನ್ಯಾಯಾಲಯಗಳು ಬೇಕಿಲ್ಲ. ಬೇಡ ಎನ್ನುವ ಬದಲಿಗೆ ಬೇಕು ಬೇಕು ಎನ್ನುವ ವಾತಾವರಣ ನಿರ್ಮಾಣ ಆಗಿದೆ. ಡಾ. ಜಗದ್ಗುರು ಶ್ರೀ ರಾಜೇಂದ್ರ ಸ್ವಾಮೀಜಿ ಅವರು ಜೆಎಸ್ಎಸ್ ಸಂಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟರು.

ಕನ್ನಡಪ್ರಭ ವಾರ್ತೆ ಮೈಸೂರು

ಇತ್ತೀಚಿನ ದಿನಗಳಲ್ಲಿ ಗೋಪಾಲಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಗೋಬರ್ ಗ್ಯಾಸ್ ಉತ್ಪಾದನಾ ಘಟಕ ನಿರ್ಮಿಸಲು ಮುಂದಾಗುವಂತೆ ಆಂಧ್ರಪ್ರದೇಶ ರಾಜ್ಯಪಾಲ ಹಾಗೂ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಸಲಹೆ ನೀಡಿದರು.

ನಗರದಲ್ಲಿ ಬುಧವಾರ ಜೆಎಸ್ಎಸ್ ಮಹಾ ವಿದ್ಯಾಪೀಠ, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಮಠ ಮಾನ್ಯಗಳು ಇಲ್ಲದಿದ್ದರೆ ದೇಶ ಮತ್ತಷ್ಟು ಹಿಂದುಳಿಯುತ್ತಿತ್ತು. ಸಮಾಜಕ್ಕೆ ಚಿಕಿತ್ಸೆ ಕೊಡುತ್ತಲೇ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಗೋಪಾಲಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಅಪಾರವಾದ ಸಗಣಿ ಉತ್ಪಾದನೆ ಆಗುತ್ತಿದೆ. ಗೋಬರ್ ಗ್ಯಾಸ್ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಮುಂದಾಗುವಂತೆ ಮನವಿ ಮಾಡಿದರು.

ಜೆಎಸ್ಎಸ್ ಸಂಸ್ಥೆ ಭೇಟಿ ನೀಡಿರುವುದು ಸಂತೋಷವಾಗಿದೆ. ಹಿಂದಿನ ಜನ್ಮದ ಪುಣ್ಯದ ಫಲದಿಂದ ಇಲ್ಲಿಗೆ ಬಂದಿದ್ದೇನೆ ಎನ್ನಿಸುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ಅಂಶಗಳಲ್ಲಿ ಕೆಲವಾರು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಅತ್ಯಂತ ಸಂತೋಷದಿಂದ ವಿದ್ಯಾರ್ಥಿ ನಿಲಯ ಕಟ್ಟಡವನ್ನು ಉದ್ಘಾಟಿಸಿದ್ದೇನೆ. ಒಂದು ಸಾವಿರ ವರ್ಷಗಳಿಗೂ ಮಿಗಿಲಾದ ಸಂಸ್ಥೆ ಸೇವೆ ಅನನ್ಯ. ಮಠಗಳು ನಮಗೆ ದಾರಿದೀಪವಾಗಿ ಮಾರ್ಗ ತೋರುತ್ತಿವೆ ಎಂದರು.

ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದಂತೆ ಆಗಬೇಕು. ಬಸವಣ್ಣನವರು ಹೇಳಿದ ವಿಚಾರಗಳನ್ನು ಪಾಲಿಸಿದರೆ ಯಾವ ಪೊಲೀಸ್ ಠಾಣೆ, ನ್ಯಾಯಾಲಯಗಳು ಬೇಕಿಲ್ಲ. ಬೇಡ ಎನ್ನುವ ಬದಲಿಗೆ ಬೇಕು ಬೇಕು ಎನ್ನುವ ವಾತಾವರಣ ನಿರ್ಮಾಣ ಆಗಿದೆ. ಡಾ. ಜಗದ್ಗುರು ಶ್ರೀ ರಾಜೇಂದ್ರ ಸ್ವಾಮೀಜಿ ಅವರು ಜೆಎಸ್ಎಸ್ ಸಂಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟರು. ಕಲಾಂ ಆಧ್ಯಾತ್ಮಿಕ ಚಿಂತಕರು. ಭಾರತೀಯ ಪರಂಪರೆಯಲ್ಲಿ ಆಧ್ಯಾತ್ಮಿಕ ವಿಚಾರ ಜಗತ್ತಿನ ಗಮನ ಸೆಳೆದಿದೆ ಎಂದರು.

ಜ್ಞಾನವೇ ಒಂದು ಔಷಧ ಇದ್ದಂತೆ ಜೆಎಸ್ಎಲ್ ಗೆ ಸೇರಿದ ಸುಮಾರು 300 ಶಿಕ್ಷಣ ಸಂಸ್ಥೆಗಳು ಮೈಸೂರು, ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶ, ವಿದೇಶದಲ್ಲಿದೆ. ಇದರಿಂದಾಗಿ ಸಾವಿರಾರು ಜನರಿಗೆ ಅನುಕೂಲ ಆಗಿದೆ. ಮಾನವನ ಸೇವೆ ಮಾಧವ ಸೇವೆಯಾಗಿದೆ. ಸಾಮಾಜಿಕ ಸೇವೆ, ಕಲ್ಚರಲ್, ಶಾಲಾ, ಕಾಲೇಜು ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ತೆರೆದು ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.

ಸಾಮಾಜಿಕ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು. ಈ ಕ್ಷೇತ್ರದಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಬೇಕು. ಸಂಶೋಧನೆ, 1800 ಹಾಸಿಗೆಯುಳ್ಳ ಆಸ್ಪತ್ರೆ. ನಾಲ್ಕು ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದು ಸುಲಭವಲ್ಲ. ಸಮುದಾಯ ಆರೋಗ್ಯ ಮತ್ತು ರೋಗಗಳನ್ನು ಪತ್ತೆ ಹಚ್ಚಿ ಅದನ್ನು ತಡೆಯುವ ಸಂಶೋಧನೆ ಆಗಬೇಕು ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಭಗವಂತನ ಕೃಪೆ ಇಲ್ಲದೆ ಒಂದು ಹುಲ್ಲು ಕಡ್ಡಿಯು ಅಲುಗಾಡಲ್ಲ.ಗೋವಾ ಮತ್ತು ಮೇಘಾಲಯ ರಾಜ್ಯಪಾಲರಿಂದ ಉದ್ಘಾಟನೆ ಆಗಬೇಕಿತ್ತು. ಯೋಗಾಯೋಗ ಅಂದರೆ ಆಂಧ್ರಪ್ರದೇಶದ ರಾಜ್ಯಪಾಲರ ಅಮೃತಹಸ್ತದಿಂದ ನೆರವೇರಿರುವುದು ತುಂಬಾ ಸಂತೋಷ ಆಗಿದೆ ಎಂದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗದೆ ನೇರವಾಗಿ ಸುಪ್ರೀಕೋರ್ಟ್ ಗೆ ಆಯ್ಕೆಯಾದ ಕೆಲವೇ ನ್ಯಾಯಾಧೀಶರಲ್ಲಿ ಅಬ್ದುಲ್ ನಜೀರ್ ಒಬ್ಬರು ಎನ್ನುವುದು ಮುಖ್ಯ. ಆಧಾರ್ ಕಾರ್ಡ್ ಗೆ ಗೌಪ್ಯತೆ ಇರಬೇಕು ಎನ್ನುವ ತೀರ್ಮಾನ ಮಾಡಿದರು. ತ್ರಿವಳಿ ತಲಾಖ್ ತೀರ್ಪು ಕೊಟ್ಟಾಗ ಆರು ತಿಂಗಳಲ್ಲಿ ಜಾರಿಗೆ ತರಬೇಕು ಎನ್ನುವ ಆದೇಶ ನೀಡಿದ ಫಲವಾಗಿ ಇಸ್ಲಾಂ ಧರ್ಮದ ಹೆಣ್ಣುಮಕ್ಕಳು ಮುಕ್ತವಾಗಿ ಬದುಕಲು ಸಾಧ್ಯವಾಗಿದೆ. ನ್ಯಾಯಾಲಯಗಳು ತಮ್ಮ ವ್ಯಾಪ್ತಿಯನ್ನು ಮೀರಿ ನಡೆಯಲ್ಲವೆಂದು ಹೇಳಿ ಸಂಸತ್ ನಲ್ಲಿ ಚರ್ಚೆಮಾಡುವ ವಿಚಾರವನ್ನು ವಾಕ್ ಸ್ವಾತಂತ್ರ್ಯ ಎಂದು ಅವರು ತೋರಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಕುಲಪತಿ ಡಾ. ಸುರೀಂದರ್ಸಿಂಗ್ ಇದ್ದರು.