ಮಾನವೀಯತೆಯಿಂದ ಪುಣ್ಯದ ಕೆಲಸ ಮಾಡುವವರನ್ನು ದೇವರು ಮೆಚ್ಚುತ್ತಾನೆ-ಬೊಮ್ಮಾಯಿ

| Published : Aug 26 2024, 01:31 AM IST

ಸಾರಾಂಶ

ಮಾನವೀಯತೆ ಎನ್ನುವುದು ಬಹಳ ದೊಡ್ಡದು. ಮಾನವೀಯತೆಯಿಂದ ಪುಣ್ಯದ ಕೆಲಸ ಮಾಡುವವರನ್ನು ದೇವರು ಮೆಚ್ಚುತ್ತಾನೆ. ನೇತ್ರಯೋಗಿ ಡಾ.ಎಂ.ಎಂ. ಜೋಶಿಯವರು ಟ್ರಸ್ಟ್ ಮಾಡುವ ಮೂಲಕ ಬಡಜನರಿಗೆ ಬೆಳಕನ್ನ ನೀಡುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು: ಮಾನವೀಯತೆ ಎನ್ನುವುದು ಬಹಳ ದೊಡ್ಡದು. ಮಾನವೀಯತೆಯಿಂದ ಪುಣ್ಯದ ಕೆಲಸ ಮಾಡುವವರನ್ನು ದೇವರು ಮೆಚ್ಚುತ್ತಾನೆ. ನೇತ್ರಯೋಗಿ ಡಾ.ಎಂ.ಎಂ. ಜೋಶಿಯವರು ಟ್ರಸ್ಟ್ ಮಾಡುವ ಮೂಲಕ ಬಡಜನರಿಗೆ ಬೆಳಕನ್ನ ನೀಡುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ವತಿಯಿಂದ ನಡೆದ ದೃಷ್ಟಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಣ್ಣಿನ ಸಮಸ್ಯೆಯ ನಿವಾರಣೆಗೆ ಮೊದಲು ಕ್ಯಾಂಪಿಗೆ ಹೋಗುತ್ತಿದ್ದೇವು ಅಲ್ಲಿ ಪರೀಕ್ಷೆ ಮಾಡಿದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದೇವು. ಆದರೆ ಈಗ ಸವಣೂರಿನಲ್ಲಿ ಚಿಕಿತ್ಸಾ ಕೇಂದ್ರ ಆರಂಭಿಸಿರುವುದು ಉತ್ತಮ ಕೆಲಸ. ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿಯವರು ಇದರ ಹಿಂದಿನ ಬೆನ್ನಲುಬಿನ ಶಕ್ತಿಯಾಗಿದ್ದಾರೆ. ನಮ್ಮವರೇ ಕೇಂದ್ರದಲ್ಲಿದ್ದರೆ ನಮ್ಮ ಕ್ಷೇತ್ರಕ್ಕೆ ಬಹಳಷ್ಟು ಅನುಕೂಲ ಎಂಬುದನ್ನು ಮಾಡಿ ತೋರಿಸಿದ್ದಾರೆ ಎಂದರು.ಪ್ರಹ್ಲಾದ್ ಜೋಶಿ ಅವರು ಸಚಿವರಾಗಿ ಕರ್ನಾಟಕಕ್ಕೆ ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮವರೇ ಆದವರು ಕೇಂದ್ರದಲ್ಲಿ ಇದ್ದರೆ ಅನುಕೂಲವಾಗುತ್ತದೆ. ನಮ್ಮವರೇ ಆಗಿದ್ದರಿಂದ ಈ ತರಹ ದೃಷ್ಟಿಕೇಂದ್ರವನ್ನು ಪ್ರತಿ ತಾಲೂಕಿಗೆ ಮಾಡಿದ್ದಾರೆ. ಮತ ಹಾಕಿದವರಿಗಷ್ಟೇ ಇದು ಸಹಾಯ ಅಲ್ಲ. ಮತ ಹಾಕದಿದ್ದವರಿಗೂ ಸಹಾಯ. ಸವಣೂರಿನ ಬಡ ದುಡಿಯುವ ಅಲ್ಪಸಂಖ್ಯಾತ ಜನರಿಗೆ ಇದರಿಂದ ಅನುಕೂಲವಾಗಲಿದೆ. ಇದರಲ್ಲಿ ಜಾತಿ, ಮತ, ಧರ್ಮ ಯಾವುದೇ ಬೇಧ ಇಲ್ಲ ಎಂದರು.ನೇತ್ರಯೋಗಿ ಡಾ.ಎಂ.ಎಂ.ಜೋಶಿಯವರು ಟ್ರಸ್ಟ್ ಮಾಡುವ ಮೂಲಕ ಬಡಜನರಿಗೆ ಬೆಳಕನ್ನ ನೀಡುವ ಕೆಲಸ ಮಾಡಿದ್ದಾರೆ. ಸಾರ್ವಜನಿಕರಿಗೆ ಅಂತಕರಣದಿಂದ ಇವರ ಮಗನು ಸಹ ಸೇವೆ ಮಾಡುತ್ತಿದ್ದಾರೆ ಎಂದು ಶ್ಲಾಘಿಷಿಸಿದರು.ಹಿಂದೆ ತಮ್ಮ ಸರ್ಕಾರದಿಂದ ಉಪಯೋಗ ಪಡೆದು ಕೊಂಡ ಕಿವಿ ಸರಿಪಡಿಸಿಕೊಂಡ ಯುವಕ ತನ್ನ ಮನೆಯಲ್ಲಿ ನನ್ನ ಭಾವಚಿತ್ರ ಹಾಕಿಕೊಂಡಿದ್ದನ್ನು ನೋಡಿ ಧನ್ಯತಾಭಾವ ಬಂದಿತು. ಕಣ್ಣು ಬಂದವರು ದೃಷ್ಟಿ ಸಮಸ್ಯೆಯಿಂದ ನಿವಾರಣೆಯಾದವರು ತಮ್ಮತಮ್ಮ ಮನೆಯಲ್ಲಿ ಬೆಳಕು ನೀಡಿದ ಪ್ರಹ್ಲಾದ್‌ ಜೋಶಿಯವರ ಫೋಟೋವನ್ನು ಮನೆಯಲ್ಲಿ ಹಾಕಿಕೊಳ್ಳಿ ಎಂದು ಬೊಮ್ಮಾಯಿ ಕರೆ ನೀಡಿದರು.ಈ ಸಂದರ್ಭದಲ್ಲಿ ಕೇಂದ್ರದ ಸಚಿವ ಪ್ರಹ್ಲಾದ್‌ ಜೋಶಿ, ಡಾ.ಶ್ರೀನಿವಾಸ ಜೋಶಿ, ಗೋವಿಂದ ಜೋಶಿ ಮತ್ತಿತ್ತರ ಪ್ರಮುಖರು ಇದ್ದರು.