ದೇವರು, ಆತ್ಮ ಇಂದಿನ ದೊಡ್ಡ ಸವಾಲು: ಎನ್.ಬಿ.ಶಿವರುದ್ರಪ್ಪ

| Published : Jul 22 2024, 01:17 AM IST

ದೇವರು, ಆತ್ಮ ಇಂದಿನ ದೊಡ್ಡ ಸವಾಲು: ಎನ್.ಬಿ.ಶಿವರುದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತಿನ ಎಲ್ಲೆಡೆ ಬೌದ್ಧ ಧಮ್ಮ ಪಸರಿಸಿದೆ. ಆದರೆ, ಭಾರತದ ಮಣ್ಣಿನಲ್ಲಿ ಹುಟ್ಟಿದ ಈ ಧಮ್ಮಕ್ಕೆ ಇಲ್ಲಿ ನೆಲೆ ಇಲ್ಲದಂತಾಗಿದೆ. ದೇವರು ಮತ್ತು ಆತ್ಮ ಈ ಎರಡೂ ವಿಚಾರಗಳಿಂದ ಜನರನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಇದು ಇಂದಿನ ದೊಡ್ಡ ಸವಾಲಾಗಿ ಕಾಡುತ್ತಿದ್ದು, ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲಾಗದೆ ಜನರು ಪರಿತಪಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಗತ್ತಿನ ಎಲ್ಲೆಡೆ ಬೌದ್ಧ ಧಮ್ಮ ಪಸರಿಸಿದೆ. ಆದರೆ, ಭಾರತದ ಮಣ್ಣಿನಲ್ಲಿ ಹುಟ್ಟಿದ ಈ ಧಮ್ಮಕ್ಕೆ ಇಲ್ಲಿ ನೆಲೆ ಇಲ್ಲದಂತಾಗಿದೆ. ದೇವರು ಮತ್ತು ಆತ್ಮ ಈ ಎರಡೂ ವಿಚಾರಗಳಿಂದ ಜನರನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಇದು ಇಂದಿನ ದೊಡ್ಡ ಸವಾಲಾಗಿ ಕಾಡುತ್ತಿದ್ದು, ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲಾಗದೆ ಜನರು ಪರಿತಪಿಸುತ್ತಿದ್ದಾರೆ ಎಂದು ವಿಚಾರವಾದಿ ಹಾಗೂ ಹಿರಿಯ ವಕೀಲ ಎನ್.ಬಿ. ಶಿವರುದ್ರಪ್ಪ ತಿಳಿಸಿದರು.

ವಿಜಯನಗರ 1ನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧಧಮ್ಮ ಸಮಿತಿಯು ಭಾನುವಾರ ಆಯೋಜಿಸಿದ್ದ ಧಮ್ಮ ಚಕ್ಕಪವತ್ತನ ದಿನಾಚರಣೆಯಲ್ಲಿ ಬುದ್ಧರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಮಾನವನ ಬದುಕನ್ನು ಬಂಧನದಿಂದ ಬಿಡಿಸಿ, ಜ್ಞಾನವನ್ನು ಸಾರಿದ ದಿನವೇ ಧಮ್ಮ ಚಕ್ಕಪವತ್ತನ ದಿನ. ಮನಸ್ಸಿನಲ್ಲಿರುವ ಕಳೆಯನ್ನು ತೆಗೆದು ಪರಿಶುದ್ಧ ಮಾಡಿಕೊಳ್ಳಬೇಕಾಗಿದೆ. ಇಂದಿನ ಯುವಪೀಳಿಗೆಗೆ ಜ್ಞಾನವನ್ನು ತುಂಬುವ ಕೆಲಸವಾಗಬೇಕಿದೆ. ಪ್ರತಿಯೊಬ್ಬರೂ ಬುದ್ಧರ ಮಾರ್ಗದಲ್ಲಿ ನಡೆಯಬೇಕು. ಈ ಮೂಲಕ ಬದುಕಿನಲ್ಲಿ ಬದಲಾವಣೆಯನ್ನು ಕಾಣಬೇಕು ಎಂದು ಅವರು ಹೇಳಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಮಹದೇವಪ್ಪ ಮಾತನಾಡಿ, ಶುದ್ಧವಾದ ನೀರಿನಲ್ಲಿ ಪ್ರತಿಬಿಂಬ ಕಾಣುವಂತೆ ಬುದ್ಧರ ವಿಚಾರದಲ್ಲಿ ಅಷ್ಟೇ ಸ್ಪಷ್ಟತೆ ಇದೆ. ಬುದ್ಧ ಧಮ್ಮವು ಸರಳ ಮತ್ತು ಕ್ಲಿಷ್ಟಕರವಾಗಿದೆ. ಮೊಟ್ಟ ಮೊದಲು ಜಗತ್ತಿನ ಜ್ಞಾನದ ಬಾಗಿಲನ್ನು ತೆರೆದವರು ಬುದ್ಧ ಗುರು. ಜಗತ್ತಿನ ಎಲ್ಲಾ ಜೀವಿಗಳೂ ಒಂದನ್ನೊಂದು ಪರಸ್ಪರ ಅವಲಂಬಿಸಿವೆ. ಆದ್ದರಿಂದ ಆಷಾಢದ ಕತ್ತಲೆಗೆ ಹುಣ್ಣಿಮೆಯ ಬೆಳಕಿನ ಸ್ಪರ್ಶ ನೀಡಿದ ಕರುಣಾಮೂರ್ತಿ ಬುದ್ಧರು ಎಂದರು.

ಇಂದಿನ ಗುರು ಮಠಗಳೇ ಕತ್ತಲೆಯಲ್ಲಿ ಇರುವುದರಿಂದ ಜನರಿಗೆ ಜ್ಞಾನವನ್ನು ತುಂಬುವ ಕೆಲಸಗಳು ನಡೆಯುತ್ತಿಲ್ಲ. ಜನ ಸಾಮಾನ್ಯರಿಗೆ ಜ್ಞಾನವನ್ನು ತುಂಬುವ ಮಠಗಳು ಪ್ರಸ್ತುತ ಅನಿವಾರ್ಯವಾಗಿವೆ. ಶಿಷ್ಯರನ್ನು ಹುಡುಕಿಕೊಂಡು ಹೋಗಿ ಮೊಟ್ಟ ಮೊದಲ ಬಾರಿಗೆ ಜ್ಞಾನವನ್ನು ಬೋಧಿಸಿದವರು ಬುದ್ಧ ಗುರು ಎಂದು ಅವರು ಹೇಳಿದರು.

ಎಸ್ಸಿ, ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಡಿ. ಚಂದ್ರಶೇಖರಯ್ಯ, ಎಂ. ಸಾವಕಯ್ಯ, ನಿವೃತ್ತ ಎಂಜಿನಿಯರ್ ಆರ್. ನಟರಾಜು, ಕರ್ನಾಟಕ ಬುದ್ಧಧಮ್ಮ ಸಮಿತಿಯು ಅಧ್ಯಕ್ಷ ಪ್ರೊ.ಡಿ. ನಂಜುಂಡಯ್ಯ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಡಾ.ಎಸ್. ಪ್ರೇಮ್‌ ಕುಮಾರ್, ವಕೀಲ ರಾಜು ಹಂಪಾಪುರ, ನಿಸರ್ಗ ಸಿದ್ದರಾಜು, ಪಿ. ನಿರಂಜನ್, ಡಾ.ವಿ. ಷಣ್ಮುಗಂ, ಮಲ್ಲಿಕಾರ್ಜುನಸ್ವಾಮಿ, ಡಾ. ಮಂಜು ಸತ್ತಿಗೆಹುಂಡಿ, ಕೃಷ್ಣಮೂರ್ತಿ, ಬಿ.ಎಂ. ಲಿಂಗರಾಜು, ಮಹಾದೇವಸ್ವಾಮಿ, ಮಾ.ನಾಗಯ್ಯ, ಲಿಂಗಣ್ಣಯ್ಯ, ಬಿ. ಗಾಯತ್ರಿದೇವಿ, ಎಂ.ಆರ್. ಪ್ರೇಮಲತಾ, ವೆಂಕಟೇಶ್, ವಿಶಾಲ್, ಸಚಿನ್ ಮೊದಲಾದವರು ಇದ್ದರು.ಮೌಢ್ಯದ ಬಂಧನದಿಂದ ಜನರು ಹೊರಬರಬೇಕು. ಸತ್ಯದ ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕು ಹಸನಾಗುತ್ತದೆ. ಅಮಲು ಬರುವ ವಸ್ತುಗಳನ್ನು ಸೇವಿಸಬಾರದು. ಇವು ಜೀವನಕ್ಕೆ ಮಾರಕವಾಗಿವೆ. ಇವು ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತವೆ. ಇವುಗಳನ್ನು ತ್ಯಜಿಸಿ ಅಂಬೇಡ್ಕರ್ ಮತ್ತು ಬುದ್ಧರು ತೋರಿಸಿದ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು.

- ಪ್ರೊ.ಡಿ. ನಂಜುಂಡಯ್ಯ, ಅಧ್ಯಕ್ಷ, ಕರ್ನಾಟಕ ಬುದ್ಧ ಧಮ್ಮ ಸಮಿತಿ