ದೇವರು ಬೇರೆ ಅಲ್ಲ, ಬೂತ್‌ ಕಾರ್ಯಕರ್ತರು ಬೇರೆಯಲ್ಲ: ಬಿ.ವೈ.ರಾಘವೇಂದ್ರ

| Published : Apr 01 2024, 12:47 AM IST

ದೇವರು ಬೇರೆ ಅಲ್ಲ, ಬೂತ್‌ ಕಾರ್ಯಕರ್ತರು ಬೇರೆಯಲ್ಲ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಕಾಲದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲದ ಪರಿಸ್ಥಿತಿ ಬಿಜೆಪಿಗೆ ಇತ್ತು. ಜನಸಂಘದ ಕಾಲದಲ್ಲಿ ಪಕ್ಷ ಸಂಘಟಿಸಿದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ಅವತ್ತೇ ಭಾರತದಲ್ಲಿ ಎರಡು ಧ್ವಜ, ಎರಡು ಸಂವಿಧಾನ ಇರಬಾರದು. ಆರ್ಟಿಕಲ್ 370 ತೆಗೆದುಹಾಕಬೇಕು ಎಂದು ಸಂಕಲ್ಪ ಮಾಡಿದ್ದರು. ಅವರು ಅವತ್ತು ಮಾಡಿದ ಸಂಕಲ್ಪ ಇವತ್ತು ಕಾರ್ಯರೂಪಕ್ಕೆ ಬಂದಿದೆ. ಶ್ರೀರಾಮ ಮಂದಿರ ಆಗಬೇಕು ಎಂದು 500 ವರ್ಷಗಳ ಹಿಂದೆ ಅನೇಕ ಕರ ಸೇವಕರು ಮಾಡಿದ ತ್ಯಾಗ, ಬಲಿದಾನದ ಫಲವಾಗಿ ಇಂದು ಶ್ರೀರಾಮ ಮಂದಿರ ಆಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

65 ವರ್ಷ ಅಧಿಕಾರ ನಡೆಸಿ ಕಾಂಗ್ರೆಸ್‌ ಪಕ್ಷ ಇವತ್ತು ವಿಪಕ್ಷ ನಾಯಕ ಸ್ಥಾನವನ್ನೂ ಕಳೆದುಕೊಂಡಿದೆ ಎಂದರೆ ಇದು ಬಿಜೆಪಿ ಕಾರ್ಯಕರ್ತರ ಅನೇಕ ವರ್ಷದ ತಪಸ್ಸು ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಬಿ.ಎಚ್‌.ರಸ್ತೆಯಲ್ಲಿರುವ ಸೈನ್ಸ್ ಮೈದಾನದಲ್ಲಿ ಭಾನುವಾರ ಸಂಜೆ ನಗರ ಬಿಜೆಪಿಯಿಂದ ಆಯೋಜಿಸಿದ್ದ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿ, ದೇವರು ಬೇರೆ ಅಲ್ಲ, ಬೂತ್‌ ಕಾರ್ಯಕರ್ತರು ಬೇರೆ ಅಲ್ಲ. ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಇಡೀ ಪ್ರಪಂಚದ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಇದರ ಹಿಂದೆ ಬೂತ್‌ ಮಟ್ಟದ ಕಾರ್ಯಕರ್ತರ ಪರಿಶ್ರಮ ಇದೆ. ಶಿವಮೊಗ್ಗ ನಗರಕ್ಕೆ ಮೋದಿಯವರು ಒಂದುವರೆ ವರ್ಷದಲ್ಲಿ ಮೂರು ಬಾರಿ ಬಂದಿದ್ದಾರೆ. ಇದು ಈ ಮಣ್ಣಿನ ಶಕ್ತಿ. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮೈದಾನಕ್ಕೆ ಬಂದ ಜನ ಮಹಾನ್‌ ಪುರುಷ ಮೋದಿಯವರ ನೋಡಿದ ಸೌಭಾಗ್ಯ ಸಿಕ್ತು ಎಂದು ಕಣ್ಣೀರು ಹಾಕಿದ್ದಾರೆ ಎಂದು ತಿಳಿಸಿದರು.

ಕರಸೇವಕರ ತ್ಯಾಗ, ಬಲಿದಾನದ ಫಲ:

ಒಂದು ಕಾಲದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲದ ಪರಿಸ್ಥಿತಿ ಬಿಜೆಪಿಗೆ ಇತ್ತು. ಜನಸಂಘದ ಕಾಲದಲ್ಲಿ ಪಕ್ಷ ಸಂಘಟಿಸಿದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ಅವತ್ತೇ ಭಾರತದಲ್ಲಿ ಎರಡು ಧ್ವಜ, ಎರಡು ಸಂವಿಧಾನ ಇರಬಾರದು. ಆರ್ಟಿಕಲ್ 370 ತೆಗೆದುಹಾಕಬೇಕು ಎಂದು ಸಂಕಲ್ಪ ಮಾಡಿದ್ದರು. ಅವರು ಅವತ್ತು ಮಾಡಿದ ಸಂಕಲ್ಪ ಇವತ್ತು ಕಾರ್ಯರೂಪಕ್ಕೆ ಬಂದಿದೆ. ಶ್ರೀರಾಮ ಮಂದಿರ ಆಗಬೇಕು ಎಂದು 500 ವರ್ಷಗಳ ಹಿಂದೆ ಅನೇಕ ಕರ ಸೇವಕರು ಮಾಡಿದ ತ್ಯಾಗ, ಬಲಿದಾನದ ಫಲವಾಗಿ ಇಂದು ಶ್ರೀರಾಮ ಮಂದಿರ ಆಗಿದೆ. ರಷ್ಯಾ-ಉಕ್ರೇನ್‌ ಯುದ್ದದಲ್ಲಿ 4500 ಹೆಚ್ಚು ಭಾರತೀಯರ ದೇಶಕ್ಕೆ ವಾಪಸ್‌ ಕರೆ ತಂದಿದ್ದು ಮೋದಿಯ ಶ್ರೇಷ್ಠತೆ ಎಂದರು.ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ:

2006ರ ಬಿ.ಎಸ್‌.ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಕಾಲದಿಂದಲೂ ಶಿವಮೊಗ್ಗಕ್ಕೆ ಸಾಕಷ್ಟು ಅನುದಾನವನ್ನು ತಂದು ಶಿವಮೊಗ್ಗ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಮೆಡಿಕಲ್‌ ಕಾಲೇಜು, ಆಯುರ್ವೇದೀಕ್‌ ಕಾಲೇಜ್‌, ರಾಷ್ಟ್ರೀಯ ರಕ್ಷ ವಿಶ್ವವಿದ್ಯಾಲಯ, ದೂರದರ್ಶನದ ಟವರ್‌ ಅನ್ನು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕೇಂದ್ರದ ಗಮನಕ್ಕೆ ತಂದ ಪ್ರತಿಫಲ ಇವತ್ತು ಟ್ರಾನ್ಸ್‌ಮೀಟರ್‌ ಮಂಜೂರು ಆಗಿದೆ. ಇದರಿಂದ ಮುಂದೆ ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮವನ್ನು ಎಲ್ಲೆಂದರಲ್ಲಿ ವೀಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಕಾರ್ಮಿಕರಿಗಾಗಿ ಇಎಸ್‌ಐ ಆಸ್ಪತ್ರೆ ಜಿಲ್ಲೆಯಲ್ಲಿ ಆಗುತ್ತಿದೆ. ಕೇಂದ್ರ ಸರ್ಕಾರ ನಿವೃತ್ತ ಹಾಗೂ ಹಾಲಿ ನೌಕರರಿಗಾಗಿ ಸಿಬಿಎಸ್‌ಇ ಆಸ್ಪತ್ರೆ ಮಂಜೂರು ಆಗಿದೆ. ವಿಮಾನ ನಿಲ್ದಾಣ, ಸ್ಮಾರ್ಟ್‌ಸಿಟಿ ಇಷ್ಟೆಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಬಿಜೆಪಿ ಕಾಲದಲ್ಲಿ ಆಗಿದೆ. ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿ ಆಗಬೇಕಿದೆ. ಇದಕ್ಕಾಗಿ ಈ ಜಿಲ್ಲೆಯ ಜನತೆ ಮತ್ತೊಮ್ಮೆ ನನಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಶಾಸಕರಾದ ಎಸ್‌.ಎನ್‌.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್‌ , ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಮೋಹನ್‌ ರೆಡ್ಡಿ, ವಿಧಾನಪರಿಷತ್‌ ಸದಸ್ಯರಾದ ಡಿ.ಎಸ್‌.ಅರುಣ್‌, ಎಸ್‌.ರುದ್ರೇಗೌಡ. ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌, ಜೆಡಿಎಸ್‌ ರಾಜ್ಯ ವಕ್ತಾರ ಕೆ.ಬಿ.ಪ್ರಸನ್ನಕುಮಾರ್‌, ಜಿಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ್‌, ನಗರ ಅಧ್ಯಕ್ಷ ದೀಪಕ್‌ ಸಿಂಗ್‌, ಶಿವರಾಜ್‌, ಮಾಲ್ತೇಶ್‌, ಹರಿಕೃಷ್ಣ, ಎನ್‌.ಕೆ.ಜಗದೀಶ್‌, ಎಸ್‌.ಎಸ್‌.ಜ್ಯೋತಿ ಪ್ರಕಾಶ್‌, ಕೆ.ಜಿ.ಕುಮಾರಸ್ವಾಮಿ, ಜ್ಞಾನೇಶ್ವರ್‌, ಎನ್‌.ಜೆ.ರಾಜಶೇಖರ್‌ ಸೇರಿ ಹಲವರಿದ್ದರು. ಕಾಂಗ್ರೆಸ್ಸಿಂದ ಬಡವರ ದ್ವೇಷ

ಕಾಂಗ್ರೆಸ್‌ನವರು ರಾಷ್ಟ್ರದ ವಿಚಾರ ಕಣ್ಣ ಮುಂದೆ ಇಟ್ಟು ದೇಶದ ಬಡತನವನ್ನು ಪ್ರೀತಿ ಮಾಡಿ, ಬಡವರನ್ನು ದ್ವೇಷ ಮಾಡಿಕೊಂಡು ಬಂದರು. ಕಾಂಗ್ರೆಸ್‌ 65 ವರ್ಷದಲ್ಲಿ ಆಗದ ಬದಲಾವಣೆ, ಮೋದಿ 10 ವರ್ಷದಲ್ಲಿ ಮಾಡಿ ತೋರಿಸಿದ್ದಾರೆ. ಆಯುಷ್ಮಾನ್‌ ಯೋಜನೆ ಜಾರಿ ತಂದು ಬಡವರು ಮಕ್ಕಳು ಶ್ರೀಮಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿದ್ದು ನರೇಂದ್ರ ಮೋದಿ. ಅಂತಹ ಮಹಾನ್‌ ನಾಯಕನನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವಲ್ಲಿ ಕಾರ್ಯಕರ್ತರ ಶ್ರಮ ಹೆಚ್ಚಿದೆ.

ಬಿ.ವೈ.ರಾಘವೇಂದ್ರ, ಸಂಸದ, ಬಿಜೆಪಿ ಅಭ್ಯರ್ಥಿ

-------------

ದೇಶದ ಸುರಕ್ಷತೆಗೆ ಮತ್ತೊಮ್ಮೆ ಮೋದಿ ಅವಶ್ಯ: ಸಿದ್ರಾಮಣ್ಣ

ಶಿವಮೊಗ್ಗ ನಗರದಿಂದ ಈ ಬಾರಿ 1.40 ಲಕ್ಷಕ್ಕೂ ಹೆಚ್ಚು ಮತಗಳ ಕೊಡಿಸುತ್ತೇವೆ

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಘೋಷಿಸಿದೆ. ಆದರೆ, ಅದರಲ್ಲಿ ಒಂದು ಅಗಳು ಅಕ್ಕಿಯನ್ನೂ ರಾಜ್ಯ ಸರ್ಕಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಟ್ಟರೆ, ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲಾಗಿ ಹಣ ಕೊಡುತ್ತಿದೆ. ಇದು ಎಲ್ಲರಿಗೂ ತಲುಪುತ್ತಿಲ್ಲ. ಆದರೆ, ನರೇಂದ್ರ ಮೋದಿಯವರು ಸಾಮಾನ್ಯ ಜನರಿಗೆ ಸುರಕ್ಷತೆಯ ಗ್ಯಾರಂಟಿ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಪಾಕಿಸ್ತಾನ ಘೋಷಣೆ, ಹೋಟೆಲ್‌ನಲ್ಲಿ ಬಾಂಬ್‌ ಇಡುವ ವ್ಯಕ್ತಿಗಳು ನಮ್ಮ ಜೊತೆಯೇ ಇದ್ದಾರೆ. ಈ ದೇಶದ ಸುರಕ್ಷತೆಗೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್‌.ಕೆ.ಸಿದ್ರಾಮಣ್ಣ ತಿಳಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರದಿಂದ ರಾಘವೇಂದ್ರರಿಗೆ 1.10 ಲಕ್ಷ ಮತಗಳ ಕೊಡಿಸಿದ್ದೇವು. ಈ ಬಾರಿ 1.40 ಲಕ್ಷಕ್ಕೂ ಹೆಚ್ಚು ಮತಗಳ ನಾವು ಕೊಡಿಸುತ್ತೇವೆ. ಈ ರೀತಿ ನಾವು ಭರವಸೆ ನೀಡಬೇಕಾದರೆ ಈ ಸಮಾವೇಶದಲ್ಲಿ ಹಾಜರಾಗಿರುವ ಬೂತ್‌ ಪ್ರಮುಖರ ಹಾಜರಾತಿ ಕಾರಣ. ಈ ಚುನಾವಣೆ ಎಲ್ಲೋ ದೆಹಲಿ ನಡೆಯುವುದಿಲ್ಲ. ನಮ್ಮ ಬೂತ್‌ಗಳಲ್ಲಿ ನಡೆಯುತ್ತದೆ. ನನ್ನ ಬೂತ್‌ನಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಕೊಡಿಸಬೇಕಾದ ಜವಾಬ್ದಾರಿ ನನ್ನ ಮೇಲಿದೆ ಎಂದರು.