ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ತಂದೆ ತಾಯಿಯ ಸೇವೆಯಿಂದ ಭಗವಂತನಿಗೆ ತೃಪ್ತಿ ಆಗುತ್ತದೆ ಎಂಬುದನ್ನು ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ ದೇವರು ಹಾಗೂ ನೆಮ್ಮದಿಯನ್ನು ಹುಡುಕುವುದನ್ನು ಬಿಟ್ಟು ತಂದೆ ತಾಯಿಯ ಸೇವೆ ಮಾಡಿ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ತಾಲೂಕಿನ ಹುತ್ರಿದುರ್ಗ ಹೋಬಳಿಯ ಬೆಟ್ಟಹಳ್ಳಿ ಮಠದಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ವಾರ್ಷಿಕ ಸಮಾವೇಶದಲ್ಲಿ ಎಲ್ ವಿ ಟ್ರಾವೆಲ್ ಸಂಸ್ಥಾಪಕರಾದ ಎಲ್ ವಿ ಪರಮಶಿವಯ್ಯ ಅವರಿಗೆ ಉರಿಲಿಂಗ ಶ್ರೀ ಪ್ರಶಸ್ತಿ ಪ್ರಧಾನ ಮಾಡಿ ನೂರಾರು ತಾಯಂದಿರಿಗೆ ಬಾಗಿನ ಸೀರೆ ಅರ್ಪಿಸಿ ಮಾತನಾಡಿದರು. ಪ್ರತಿ ವರ್ಷ ನಮ್ಮ ಜನ್ಮದಿನ ಆಚರಣೆ ಮಾಡಲು ಸಾವಿರಾರು ಮಂದಿ ಮಠಕ್ಕೆ ಆಗಮಿಸಿ, ಕೇಕು ಕತ್ತರಿಸುವಂತೆ ಪೀಡಿಸುತ್ತಿದ್ದರು ಕೇಕು ಕತ್ತರಿಸುವುದು ನಮ್ಮ ಸಂಸ್ಕೃತಿ ಅಲ್ಲ ಅದನ್ನು ತಡೆಯುವ ಮತ್ತು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಸುತ್ತಮುತ್ತಲಿನ ಹಲವಾರು ತಾಯಂದಿರಿಗೆ ಅಭಿನಂದನೆ ಗೌರವ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಮಾಡುವ ಸಾಮಾಜಿಕ ಸಂಘಟನೆ ಮತ್ತು ಮಹಿಳೆಯರಿಗೆ ಮಾನಸಿಕ ಶಕ್ತಿ ತುಂಬುವ ಕೆಲಸವನ್ನು ಆರಂಭಿಸಲಾಯಿತು. ಇಂತಹ ಸಂದರ್ಭದಲ್ಲಿ ಮಠಕ್ಕೆ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿರುವ ಸಾಧಕರಿಗೆ ಉರಿಲಿಂಗ ಶ್ರೀ ಪ್ರಶಸ್ತಿ ನೀಡಬೇಕೆಂದು ತೀರ್ಮಾನಿಸಿ ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು ಎಂದರು. ಮಠದ ಆವರಣದಲ್ಲಿ ಉರಿಲಿಂಗ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಲ್ ವಿ ಪರಮಶಿವಯ್ಯ, ಉಳ್ಳವರು ಕೇವಲ ತನ್ನ ಸಂಸಾರದ ಅಭಿವೃದ್ಧಿಗಾಗಿ ಶ್ರಮಿಸುವುದು ಅಭಿವೃದ್ಧಿ ಅಲ್ಲ ಸಮಾಜದಲ್ಲಿ ತುಳಿತಕ್ಕೊಳಗಾದವರ ಮಠಮಾನ್ಯಗಳ ಹಾಗೂ ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕಾಗಿದೆ. ಬೆಟ್ಟಳ್ಳಿ ಮಠ ಹಲವಾರು ದೀನ ದಲಿತ ಹಾಗೂ ಬಡವರ ಕಲ್ಯಾಣ ಶಿಕ್ಷಣ ಹಾಗೂ ಇತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದರು ಕ್ರಮವನ್ನು ನಡೆಸಲಾಯಿತುಸ್ವಾಮೀಜಿ ಜನ್ಮದಿನ ಪ್ರಯುಕ್ತ ಎಲ್ ವಿ ಟ್ರಾವಲ್ಸ್‌ನ ಸಂಸ್ಥಾಪಕ ಎಲ್ ವಿ ಪರಮಶಿವಯ್ಯ ತಮ್ಮ ಕುಟುಂಬದ ಜೊತೆಗೆ ಭೇಟಿ ನೀಡಿ ಸ್ವಾಮೀಜಿಗಳಿಗೆ ಇನ್ನೋವಾ ಕಾರ್ ಉಡುಗೊರೆಯಾಗಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಸ್ವಾಮೀಜಿ ಧರ್ಮ ಪ್ರಚಾರ ಮಾಡುವ ಸಲುವಾಗಿ ಹಲವಾರು ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಕೂಡ ಪ್ರವಾಸ ಮಾಡುತ್ತಾರೆ. ಹೆಚ್ಚಿನ ಪ್ರಯಾಣ ಮಾಡುವ ಅವರಿಗೆ ಆರಾಮದಾಯಕ ಪ್ರಯಾಣ ಆಗಿರಲಿ ಎಂದು ಸ್ವಾಮೀಜಿಗಳಿಗೆ ಇನ್ನೋವಾ ಕ್ರಿಸ್ಟಾ ಕಾರನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ ಅವರ ಸೇವೆ ಈ ಕರ್ನಾಟಕದ ಜನತೆಗೆ ಹೆಚ್ಚು ಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ , ಹುತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ , ಭದ್ರಗಿರಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ , ಕೆಎಎಸ್ ಅಧಿಕಾರಿ ಮಹಾಬಲೇಶ್ವರ್ , ವಿಮಲ ಪರಮಶಿವಯ್ಯ, ಕಿಶೋರ್ ಕುಮಾರ್, ಮಹಾಂತೇಶ್, ಚಂದ್ರಶೇಖರ್,ರಾಮಚಂದ್ರಯ್ಯ, ಭಾಲ್ಕಿ ಮಹೇಂದ್ರ ಡಾ.ರಮೇಶ್, ಸುರೇಶ್, ಅರುಣ್ ಕುಮಾರ್ , ಜಯರಾಮ್, ರಾಮಕೃಷ್ಣ, ಕೋಗಟ್ಟ ರಾಜಣ್ಣ, ಸೇರಿದಂತೆ ಅನೇಕರು ಇದ್ದರು