ಪರಿಶುದ್ಧ ಭಕ್ತಿಯಿಂದ ದೈವ ಸಾಕ್ಷಾತ್ಕಾರ: ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ

| Published : Feb 24 2024, 02:36 AM IST

ಪರಿಶುದ್ಧ ಭಕ್ತಿಯಿಂದ ದೈವ ಸಾಕ್ಷಾತ್ಕಾರ: ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು ಪಟ್ಟಣದ ಅಶೋಕ ನಗರ ಅಂಚೇರ ಬೀದಿಯಲ್ಲಿ ದುರ್ಗಾಪರಮೇಶ್ವರಿ ದೇವಾಲಯ ಲೋಕಾರ್ಪಣೆ, ಮಹಾಕುಂಭಾಭಿಷೇಕ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀರೂರು

ಪರಿಶುದ್ದ ಭಕ್ತಿ ಮತ್ತು ಅಚಲ ನಂಬಿಕೆಯಿಂದ ದೈವ ಸಾಕ್ಷಾತ್ಕಾರವಾಗುತ್ತದೆ ಎಂದು ಹರಿಹರಪುರದ ಶಾರಾದಾ ಲಕ್ಷ್ಮೀನರಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಅಶೋಕ ನಗರ ಅಂಚೇರ ಬೀದಿಯಲ್ಲಿ ದುರ್ಗಾಪರಮೇಶ್ವರಿ ದೇವಾಲಯ ಲೋಕಾರ್ಪಣೆ ಮತ್ತು ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಕ್ತಿ ಎನ್ನುವುದು ಮಾನವ ಮತ್ತು ದೇವರ ನಡುವಿನ ಸಂಬಂಧ ಸೂತ್ರ, ಕುಟುಂಬ ಎನ್ನುವುದು ಸಂಸ್ಕಾರದ ಪಾಠ ಶಾಲೆ,ಮನೇಯೇ ಮೊದಲ ಪಾಠಶಾಲೆಯಾಗಿ ಮಕ್ಕಳಿಗೆ ಆಧ್ಯಾತ್ಮ ತಳಹದಿಯ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಬೇಕು.ಕುಟುಂಬ ಪದ್ದತಿಯನ್ನು ರಕ್ಷಿಸದಿದ್ದರೆ ಭಾರತ ದೇ ಶವು ವೃದ್ದಾಶ್ರಮವಾಗುತ್ತದೆ ಎನ್ನುವ ಎಚ್ಚರ ಇರಬೇಕು ಎಂದರು.

ಸಂಸ್ಕೃತಿ ಚಿಂತಕ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿದರು. ಆದ್ಯಾತ್ಮ ಎನ್ನುವುದು ನಮ್ಮ ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೆ ಆತ್ಮಜ್ಞಾನದ ಮೂಲಕ ಕಂಡುಕೊಂಡ ವಿದ್ಯೆಯಾಗಿದೆ. ವಿಜ್ಞಾನಕ್ಕೂ ನಮ್ಮ ನಮ್ಮ ಸಂಪ್ರದಾಯಿಕ ಜ್ಞಾನಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.

ಪ್ರಾಸ್ತಾವಿಕವಾಗಿ ಬೀರೂರು ದೇವರಾಜ್ ಮಾತನಾಡಿದರು. ಶಾಂತಾದೇವರಾಜ್ ಶ್ರೀ ಗಳಿಗೆ ಬಿನ್ನವತ್ತಳೆ ಅರ್ಪಿಸಿದರು. ಗೆಳೆಯರು ಮತ್ತು ಅಭಿಮಾನಿಗಳು ದೇವರಾಜ್ ದಂಪತಿಯನ್ನು ಗೌರವಿಸಿದರು. ಹರಿಹರ ಪುರ ಮಠದ ವೈದಿಕ ವೃಂದದವರು ಧಾರ್ಮಿಕ ಕಾರ್ಯಕ್ರಮ ನಡೆಸಿದರು.

ವೆಂಕಟೇಶ ಜಿ.ಒಡೆಯರ್, ಕೆ.ಜಿ.ಮಂಜುನಾಥ್, ಜಿಯಾವುಲ್ಲಾ, ಹಾಲಪ್ಪ, ನಿವೃತ್ತ ಎಸಿಪಿ ಗಂಗಾಧರ್, ಅರೇಕಲ್ ಪ್ರಕಾಶ್, ಕೆ.ಹೆಚ್.ಶಂಕರ್, ಸವಿತಾ ರಮೇಶ್, ಬಿ.ಕೆ. ಶಶಿಧರ್, ಬಿ.ಆರ್.ರವಿಕುಮಾರ್, ಗಂಟೆ ಸಂತೋಷ್, ಬಿ.ಜೆ ಮಂಜುನಾಥ್, ಸಾಂಗ್ಲಿರಾಜು, ಶಿವಕುಮಾರ್, ಕ್ವಾಲೀಸ್ ಮಂಜು, ಶಿವಕುಮಾರ್ ಮತ್ತು ಭಕ್ತರು ಇದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಯಾವುದೇ ಕಾರ್ಯದ ಪರಿಪೂರ್ಣತೆಗೆ ಸಾಮೂಹಿಕ ಸಹಭಾಗಿತ್ವ ಅಗತ್ಯವಾಗಿದೆ. ತಮ್ಮ ಸೋಲು –ಗೆಲುವುಗಳಿಗೆ ತಲೆಕೆಡಸಿಕೊಳ್ಳದೆ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿರುವ ಬೀರೂರು ದೇವರಾಜ್ ದಂಪತಿ ತಮ್ಮ ಪೂರ್ವಿಕರ ಆರಾಧ್ಯದೈವಕ್ಕೆ ನೆಲೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.