ಕನ್ನಡಪ್ರಭ ವಾರ್ತೆ ರಾಯಬಾಗ
ದೇವರ ವಾಸ ಆಕಾಶವಲ್ಲ, ಗುಡಿಯೂ ಅಲ್ಲ, ಮನುಷ್ಯರ ಭಾವನೆಯೇ ಅದರ ನೆಲೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಹೇಳಿದರು.ತಾಲೂಕಿನ ಚಿಂಚಲಿ ಪಟ್ಟಣದ ಮಾಲಿನಿ ಪಾಟೀಲ ಭವನದಲ್ಲಿ ಶನಿವಾರ ಶ್ರೀಮಹಾಕಾಳಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 1992-93ನೇ ಸಾಲಿನ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಬಸವಣ್ಣ ದೇವರನ್ನು ದೇಹದಲ್ಲಿ ಕಂಡರೆ, ಅಂಬೇಡ್ಕರ್ ಅವರು ವಿದ್ಯೆಯಲ್ಲಿ ಕಂಡರು. ವರನಟ ರಾಜಕುಮಾರ್ ಅವರು ಅಭಿಮಾನಿಗಳಲ್ಲಿ ಕಂಡರೆ, ವಿದ್ಯಾರ್ಥಿಗಳಾದ ತಾವು ಅಕ್ಷರ ಕಲಿಸಿದ ಗುರುಗಳಲ್ಲಿ ದೇವರನ್ನು ಕಾಣುತ್ತಿರುವುದು ವೈಚಾರಿಕ ನೋಟದ ವಿಸ್ತರಣೆಯಾಗಿದೆ ಎಂದು ವಿಶ್ಲೇಷಿಸಿದರು.ಸ್ಥಳೀಯ ಮಲ್ಲಿಕಾರ್ಜುನ ಗುರುದೇವ ಆಶ್ರಮದ ಸಿದ್ಧಪ್ರಸಾದ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ತಂದೆ ತಾಯಿಗಳ ನಂತರ ಬದುಕು ರೂಪಿಸುವವರು ಗುರುಗಳು. ಮೂವತ್ತು ವರ್ಷಗಳ ನಂತರವೂ ಅವರನ್ನು ನೆನಪಿಟ್ಟು ಗೌರವಿಸುವ ನಿಮ್ಮ ಆದರ್ಶದ ಹಿಂದೆ ಅವರು ಕಲಿಸಿದ ಸಂಸ್ಕಾರವಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಎಸ್.ಬಿ.ಈರಗಾರ, ಎಮ್.ಎಚ್.ಪಾಟೀಲ, ಡಿ.ಎನ್.ಪಾಟೀಲ, ಧನ್ಯಕುಮಾರ ಕಾಂಬಳೆ ಕೃತಜ್ಞತಾ ನುಡಿಗಳನ್ನಾಡಿದರು. ಶಿಕ್ಷಕರಾದ ಎಸ್.ಎ.ಲಕ್ಷ್ಮೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಾಂತ ಪಟ್ಟೇಕರಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕರಾದ ಮಚ್ಛೇಂದ್ರ ಶಿಂಧೆ, ಮಹಿಬೂಬ ತರಡೆ, ಧರೆಪ್ಪಾ ಖಿಲಾರೆ, ಆರತಿ ಇನಾಮದಾರ, ನಿರ್ಮಲಾ ರೆಂಟೆ, ಮಲ್ಲಪ್ಪ ಕಸರಡ್ಡಿ, ಶಿವಾನಂದ ಕಲ್ಲಟ್ಟಿ, ದೌಲತರಾವ ಪಾಟೀಲ, ಖಲೀಲ ಮುಲ್ಲಾ, ಅಶೋಕ ಹೊನಮಾನೆ, ಬಸನಗೌಡ ಪಾಟೀಲ, ಅನಿಲ ಉಪಾಧ್ಯೆ, ನಾರಾಯಣ ಮಾಂಗ, ಸಂಜು ಚೌಗುಲೆ, ವೀರೇಂದ್ರ ಹಿಡಕಲ್, ಗಂಗೂತಾಯಿ ಪೂಜೇರಿ, ಅಖೀಲಾ ಸಗರೆ, ರಂಜನಾ ಜಾಧವ, ವಿನೋದ ಪಾಟೀಲ, ದತ್ತಾತ್ರೇಯ ಕರಾಡಕರ, ರಾಜು ವಡ್ಡರ, ಜಿತೇಂದ್ರ ಕಾಂಬಳೆ, ಕೀರ್ತಿ ಪಟ್ಟೇಕರಿ, ಪುಟ್ಟಕ್ಕ ಜಲಾಲಪುರೆ ಇತರರು ಇದ್ದರು.ವೈಶಾಲಿ ಪಾಟೀಲ ಸ್ವಾಗತಿಸಿದರು, ರೇಖಾ ಅಲಗೂರೆ ನಿರೂಪಿಸಿದರು, ಬಸವಂತ ಕವಳೆ ವಂದಿಸಿದರು.