ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಭಗವಂತನ ರಕ್ಷೆ: ಎಡತೊರ ಶ್ರೀ

| Published : Jun 26 2024, 12:35 AM IST

ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಭಗವಂತನ ರಕ್ಷೆ: ಎಡತೊರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಡೂರು ಪಟ್ಟಣದ ಕೋಟೆ ಶೃಂಗೇರಿ ಮಠಕ್ಕೆ ಆಗಮಿಸಿದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಅವರಿಗೆ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.

- ಸನ್ಯಾಸ ಸ್ವೀಕಾರದ 50 ನೇ ವರ್ಷಾಚರಣೆ | ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಪಠಣ ಕನ್ನಡಪ್ರಭ ವಾರ್ತೆ ಕಡೂರು

ಪಟ್ಟಣದ ಕೋಟೆ ಶೃಂಗೇರಿ ಮಠಕ್ಕೆ ಆಗಮಿಸಿದ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಅವರಿಗೆ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಭಾರತೀ ತೀರ್ಥ ಸ್ವಾಮೀಜಿಯವರ ಸನ್ಯಾಸ ಸ್ವೀಕಾರದ 50 ನೇ ವರ್ಷಾಚರಣೆ ಪ್ರಯುಕ್ತ, ರಾಜ್ಯದಾದ್ಯಂತ ಶಂಕರಾಚಾರ್ಯರು ರಚಿಸಿದ ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ ಮತ್ತು ಕಲ್ಯಾಣ ವೃಷ್ಟಿ ಸ್ತವ ಸ್ತೋತ್ರದ ಸಾಮೂಹಿಕ ಪಠಣವು ಕಡೂರಿನಲ್ಲಿ ವಿಪ್ರ ಸಮಾಜ, ಆರ್ಯ ವೈಶ್ಯ ಸಮಾಜ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ವೃಂದದಿಂದ ನಡೆಯಿತು.

ಶಂಕರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಸದಾ ಭಗವಂತನ ರಕ್ಷೆಯಿರುತ್ತದೆ. ಸದಾ ಕಾಲವೂ ಧರ್ಮ ಬಿಡದೆ ಸರಿ ಮಾರ್ಗದಲ್ಲಿ ಎಲ್ಲರೂ ನಡೆಯಬೇಕೆಂದು ಶಂಕರ ಭಗವತ್ಪಾದರು ನೀಡಿದ ಸಂದೇಶ ನಮ್ಮೆಲ್ಲರಿಗೂ ಆದರ್ಶವಾಗಿರಬೇಕು ಎಂದರು.

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್, ಮಠದ ಸಂಚಾಲಕ ಮಂಜುನಾಥ್, ಸಚ್ಚಿದಾನಂದಸ್ವಾಮಿ, ಶಿವಶಂಕರ್, ವಿ.ಎಂ.ಪ್ರಸಾದ್, ಸಖರಾಯಪಟ್ಟಣ ಚಂದ್ರಮೌಳಿ ಇದ್ದರು.