ದೇಶದಲ್ಲಿ ಹೆಣ್ಣಿಗೆ ದೇವತೆ ಸ್ಥಾನ: ಮುರಳೀಧರ ಸ್ವಾಮೀಜಿ

| Published : Jun 21 2024, 01:07 AM IST

ದೇಶದಲ್ಲಿ ಹೆಣ್ಣಿಗೆ ದೇವತೆ ಸ್ಥಾನ: ಮುರಳೀಧರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸಂಸ್ಕೃತಿಯು ತಾಯಿಯನ್ನು ಭೂಮಿಗೆ ಹೋಲಿಸುತ್ತದೆ. ಜನ್ಮ ನೀಡುವ ತಾಯಿ ಒಂದು ಹೆಣ್ಣಾಗಿ, ಅವ್ವ, ಅಕ್ಕ, ತಂಗಿ, ಅತ್ತೆ, ಅತ್ತಿಗೆ, ಸೊಸೆ, ಹೆಂಡತಿಯಾಗಿ ಮತ್ತು ಎಲ್ಲರಿಗೂ ಹಿತೈಷಿಯಾಗಿ ಜೀವನದ ಪ್ರತಿ ಹಂತದಲ್ಲೂ ಪಾತ್ರ ನಿರ್ವಹಿಸುತ್ತಾಳೆ. ಆದರೆ ಆಕೆಯನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ. ಅವಳಿಗೆ ಸಿಗಬೇಕಾದ ಗೌರವ, ಮನ್ನಣೆ,ಮತ್ತು ಪ್ರಾತಿನಿಧ್ಯವನ್ನು ಸರಿಸಮನಾಗಿ ನೀಡಿದ್ದೇವೆಯೇ ಎಂದು ಚಂದ್ರಗಿರಿ ಮಠದ ಶ್ರೀ ಮುರಳಿಧರ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ಜೂ. 20ನಮ್ಮ ಸಂಸ್ಕೃತಿಯು ತಾಯಿಯನ್ನು ಭೂಮಿಗೆ ಹೋಲಿಸುತ್ತದೆ. ಜನ್ಮ ನೀಡುವ ತಾಯಿ ಒಂದು ಹೆಣ್ಣಾಗಿ, ಅವ್ವ, ಅಕ್ಕ, ತಂಗಿ, ಅತ್ತೆ, ಅತ್ತಿಗೆ, ಸೊಸೆ, ಹೆಂಡತಿಯಾಗಿ ಮತ್ತು ಎಲ್ಲರಿಗೂ ಹಿತೈಷಿಯಾಗಿ ಜೀವನದ ಪ್ರತಿ ಹಂತದಲ್ಲೂ ಪಾತ್ರ ನಿರ್ವಹಿಸುತ್ತಾಳೆ. ಆದರೆ ಆಕೆಯನ್ನು ನಾವು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ. ಅವಳಿಗೆ ಸಿಗಬೇಕಾದ ಗೌರವ, ಮನ್ನಣೆ,ಮತ್ತು ಪ್ರಾತಿನಿಧ್ಯವನ್ನು ಸರಿಸಮನಾಗಿ ನೀಡಿದ್ದೇವೆಯೇ ಎಂದು ಚಂದ್ರಗಿರಿ ಮಠದ ಶ್ರೀ ಮುರಳಿಧರ ಸ್ವಾಮೀಜಿ ಪ್ರಶ್ನಿಸಿದರು.

ಇತ್ತೀಚೆಗೆ ನಿಧನರಾದ ಶತಾಯುಷಿ ಸಣ್ಣಪ್ಳ ತಿಮ್ಮಮ್ಮ (ಪುರಂದರ ಲೋಕಿಕೆರೆಯವರ ಮಾತೃಶ್ರೀ)ನವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುರಳೀಧರ ಸ್ವಾಮೀಜಿ ಮಾತನಾಡಿ ತಾಯಿ ನೂರಾರು ಹೆಣ್ಣು ದೇವರುಗಳ ಪ್ರತಿರೂಪ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ದಿಳ್ಯಪ್ಪ, ಆರ್.ಜಿ.ಹಳ್ಳಿ ಸುರೇಂದ್ರ, ನಿವೃತ್ತ ಬ್ಯಾಂಕ್ ಅಧಿಕಾರಿ ಕೊಗ್ಗನೂರು ಶಿವಾನಂದ, ಹೋರಾಟಗಾರ ಕಂಪ್ಲಿ ತಿಪ್ಪೇಸ್ವಾಮಿ, ಎಸ್.ಎಸ್.ರವಿಕುಮಾರ, ಶಿವಬಸಪ್ಪ ಕಮತರ್, ಪೂಜಾರ್ ಆನಂದ, ತ್ಯಾವಣಗಿ ಹೊನ್ನಪ್ಪ, ವಿಶ್ವಮಾನವ ಮಂಟಪ ಸಂಸ್ಥಾಪಕ ಅವರಗೆರೆ ರುದ್ರಮುನಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರು, ಮಾಲತೇಶ, ಬಾಗಳಿ ಸಂಗಪ್ಪ, ದೇವ್ರಹಳ್ಳಿ ನೀಲಪ್ಪ ಇತರರು ಪಾಲ್ಗೊಂಡಿದ್ದರು. ಕಲಾವಿದರಾದ ದಾಗಿನಕಟ್ಟೆ ಸಿದ್ದಪ್ಪ, ಶರಣ್ ಶ್ಯಾಗಲೆ, ಶೌಕತ್ ತುರ್ಚಘಟ್ಟ, ರುದ್ರೇಶ ಆಶಯ ಗೀತೆಗಳನ್ನು ಹಾಡಿದರು........20ಕೆಡಿವಿಜಿ41

ದಾವಣಗೆರೆಯಲ್ಲಿ ಪುರಂದರ ಲೋಕಿಕೆರೆಯವರ ಮಾತೃಶ್ರೀ ಶತಾಯುಷಿ ಸಣ್ಣಪ್ಳ ತಿಮ್ಮಮ್ಮಯ್ಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀ ಮುರಳಿಧರ ಸ್ವಾಮೀಜಿ ಇತರರು ಇದ್ದರು.