ದೇವ್ರು ಕೊಟ್ರು ಪೂಜಾರಿ ಕೊಡ್ತಿಲ್ಲ: ಪಡಿತರ ವಿತರಣೆಯಲ್ಲಿ ಲೋಪ

| Published : Mar 19 2025, 12:30 AM IST

ದೇವ್ರು ಕೊಟ್ರು ಪೂಜಾರಿ ಕೊಡ್ತಿಲ್ಲ: ಪಡಿತರ ವಿತರಣೆಯಲ್ಲಿ ಲೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ದೇವ್ರು ಕೊಟ್ರು ಪೂಜಾರಿ ಕೊಡ್ತಿಲ್ಲ ಎಂಬಂತೆ ಸರ್ಕಾರದ ಆದೇಶದಂತೆ ಪಡಿತರದಾರರಿಗೆ ಅಕ್ಕಿ ನೀಡದೆ ಸೊಸೈಟಿಯಲ್ಲಿ ಪಡಿತರ ವಿತರಕರು ತಾರತಮ್ಯ ಮಾಡುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಸಿಂಗಟಗೆರೆ ಹೋಬಳಿ ಬಿ.ಮಲ್ಲೇನಹಳ್ಳಿ ಗ್ರಾಮದ ಸೊಸೈಟಿಯಲ್ಲಿ ಮಂಗಳವಾರ ನಡೆದಿದೆ

ಪಡಿತರ ವಿತರಣೆಯಲ್ಲಿ ತಾರತಮ್ಯ: ಜನರ ಆಕ್ರೋಶ

ಕನ್ನಡಪ್ರಭ ವಾರ್ತೆ, ಕಡೂರು

ದೇವ್ರು ಕೊಟ್ರು ಪೂಜಾರಿ ಕೊಡ್ತಿಲ್ಲ ಎಂಬಂತೆ ಸರ್ಕಾರದ ಆದೇಶದಂತೆ ಪಡಿತರದಾರರಿಗೆ ಅಕ್ಕಿ ನೀಡದೆ ಸೊಸೈಟಿಯಲ್ಲಿ ಪಡಿತರ ವಿತರಕರು ತಾರತಮ್ಯ ಮಾಡುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಸಿಂಗಟಗೆರೆ ಹೋಬಳಿ ಬಿ.ಮಲ್ಲೇನಹಳ್ಳಿ ಗ್ರಾಮದ ಸೊಸೈಟಿಯಲ್ಲಿ ಮಂಗಳವಾರ ನಡೆದಿದೆ

ಈ ಬಗ್ಗೆ ಗ್ರಾಹಕರು ಆರೋಪಿಸಿದ್ದು, ಅಕ್ಕಿ ಕೊಡೋದ್ರಲ್ಲಿ ವಿತರಕರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಒಂದೊಂದು ಕಾರ್ಡಿಗೆ 5-10 ಕೆ.ಜಿ. ಅಕ್ಕಿ ಕಡಿಮೆ ಕೊಡುತ್ತಿದ್ದಾರೆ ಎಂದು ಪಡಿತರ ವಿತರಕರ ಜೊತೆ ಜನರ ವಾಗ್ವಾದ ನಡೆಸಿದ್ದಾರೆ.

ಬಿ.ಮಲ್ಲೇನಹಳ್ಳಿ ನ್ಯಾಯ ಬೆಲೆ ಅಂಗಡಿ ವ್ಯಾಪ್ತಿಗೆ ಬಿ.ಮಲ್ಲೇನಹಳ್ಳಿ, ಬಿ.ಬೊಮ್ಮೇನಹಳ್ಳಿ, ಬಿ.ಬಸವನಹಳ್ಳಿ ತಾಂಡ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಗಳ ಪಡಿತರದಾರರು ಒಳಪಡಲಿದ್ದಾರೆ. ಮಂಗಳವಾರ ಮಧ್ಯಾಹ್ನ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಸಂದರ್ಭದಲ್ಲಿ 8 ಪಡಿತರ ಚೀಟಿದಾರರಿಗೆ 105 ಕೆಜಿ ಅಕ್ಕಿ ಬದಲಾಗಿ 75 ಕೆಜಿ ಅಕ್ಕಿ ವಿತರಿಸಿರುವ ಬಗ್ಗೆ ಹಾಗೂ 75 ಕೆಜಿ ಬದಲಾಗಿ 55 ಕೆಜಿ ಹಾಗೂ 30ಕ್ಕು ಹೆಚ್ಚು ಜನ ಪಡಿತರದಾರರಿಗೆ ತಲಾ 2 ಕೆಜಿ ಅಕ್ಕಿ ಕಡಿಮೆ ನೀಡಿರುವ ಬಗ್ಗೆ ಪ್ರಶ್ನಿಸಿದ್ದಾರೆ ಅಕ್ಕಿ ಪಡೆದವರು ಪ್ರಶ್ನಿಸಿದ್ದಾರೆ.

ಇದನ್ನು ವಿಡಿಯೋ ಮಾಡಿರುವ ಬಿ.ಬಸವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಮಂಜುನಾಥ್ ಬಡವರಿಗೇಕೆ ಅನ್ಯಾಯ ಮಾಡುತ್ತೀರಾ.. ಬಡವರ ಅಕ್ಕಿ ತಿಂದ್ರೆ ನಿಮಗೆ ಒಳ್ಳೆದಾಗುತ್ತಾ ಎಂದು ಪ್ರಶ್ನೆ ಮಾಡಿದರು. ನಿಮ್ಮ ಮನೆಯಿಂದ ತಂದು ಕೊಡಬೇಡಿ, ಸರ್ಕಾರ ಕೊಟ್ಟಿದ್ದು ಕೊಡಿ ಎಂದು ಕಿಡಿ ಕಾರಿದರಲ್ಲದೆ, ಇಲ್ಲಿ ಯಾರೂ ಶ್ರೀಮಂತರಿಲ್ಲ, ನಾವೆಲ್ಲ ಕೂಲಿ ಮಾಡೋ ಬಡವರು, ಅಕ್ಕಿ ಏಕೆ ಕಡಿಮೆ ಕೊಡ್ತಿದ್ದೀರಾ ಒಬ್ಬರಿಗೆ 15 ಕೆಜಿ ಯಂತೆ ಮನೆಯಲ್ಲಿ ಐವರಿದ್ರೆ 75 ಕೆ.ಜಿ. ಕೊಡಬೇಕು ಆದರೆ, ವಿತರಕರು 60, 65, 70 ಕೆ.ಜಿ. ಕೊಡ್ತಿದ್ದಾರೆಂದು ಆರೋಪಿಸಿ ಪಡಿತರದಾರರು ವಿತರಕರ ಜೊತೆ ವಾಗ್ವಾದಕ್ಕಿಳಿದರು ಎನ್ನಲಾಗಿದೆ.

-- ಬಾಕ್ಸ ಸುದ್ದಿಗೆ---

ಅಧಿಕಾರಿಗಳ ಭೇಟಿ

ಕಡೂರು ತಾಲೂಕಿನ ಬಿ. ಮಲ್ಲೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆ ನಿರೀಕ್ಷಕ ಶ್ರೀನಿವಾಸ್ ಮತ್ತು ಶಿಲ್ಪಾ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದರು. ದೂರು ಬಂದ ಹಿನ್ನಲೆಯಲ್ಲಿ ಈ ಸೊಸೈಟಿ ಶಿವಕುಮಾರ್ ಎಂಬುವರಿಗೆ ಸೇರಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮಂಗಳವಾರ ಪಡಿತರದಾರರಿಗೆ ವಿತರಣೆ ಮಾಡಿರುವ ಪಡಿತರದಲ್ಲಿ 30 ಜನರಿಗೆ 2 ಕೆಜಿ ಅಕ್ಕಿ ಕಡಿಮೆ ನೀಡಲಾಗಿದೆ. ಒಬ್ಬ ಪಡಿತರದಾರರಿಗೆ 30 ಕೆಜಿ ಅಕ್ಕಿ ಕಡಿಮೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಾಲೂಕು ಆಹಾರ ನಿರೀಕ್ಷಕ ಶ್ರೀನಿವಾಸ್ ಮತ್ತು ಶಿಲ್ಪಾ ತಿಳಿಸಿದರು.18ಕೆಕೆಡಿಯು2.

ಕಡೂರು ತಾಲೂಕಿನ ಬಿ. ಮಲ್ಲೇನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆಯ ನಿರೀಕ್ಷಕ ಶ್ರೀನಿವಾಸ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದರು.