ಗೋಕಾಕ ಜಲಪಾತ: ನದಿಗೆ ಇಳಿಯಲು ನಿಷೇಧ

| Published : Jul 10 2024, 12:46 AM IST

ಸಾರಾಂಶ

ಗೋಕಾಕ ಜಲಪಾತದ ಬಳಿ ತೆರಳದಂತೆ ಪೊಲೀಸ್‌ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಬ್ಯಾರಿಕೇಡ್ ಹಾಕಿ ನಿರ್ಬಂಧ ವಿಧಿಸಿವೆ.

ಗೋಕಾಕ: ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಗೋಕಾಕ ಜಲಪಾತಕ್ಕೆ ದಿನದಿಂದ ದಿನಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಪ್ರಕೃತಿಯ ಸೊಬಗು ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ನೀರಿನ ಹರಿವು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ಜಲಪಾತ ಬಳಿ ತೆರಳದಂತೆ ಪೊಲೀಸರು ಮತ್ತು ಪ್ರವಾಸೋದ್ಯಮ ಇಲಾಖೆ ಬ್ಯಾರಿಕೇಡ್ ತಡೆ ಹಾಕಿದ್ದಾರೆ.

ಗೋಕಾಕ ಜಲಪಾತ ವೀಕ್ಷಿಸಿಲು ಬರುವ ಪ್ರವಾಸಿಗರು ಜಲಪಾತದ ತುದಿಗೆ ಹೋಗಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸದ್ಯ ಘಟಪ್ರಭಾ ನದಿಯ ನೀರಿನ ಹರಿವು ಹೆಚ್ಚುತ್ತಿರುವ ಹಿನ್ನೆಲೆ ಪ್ರವಾಸಿಗರು ದೂರದಿಂದ ಜಲಪಾತ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿರುವ ಪೊಲೀಸರು ಬ್ಯಾರಿಕೇಡ್ ಹಾಕಿ ಜಲಪಾತ ಸಮೀಪ ಜನರು ತೆರಳುವುದನ್ನು ನಿರ್ಬಂಧಿಸಿದ್ದಾರೆ.