ನೇಕಾರ ವಸತಿ ಯೋಜನೆ ಆಯ್ಕೆಯಲ್ಲಿ ಗೋಲ್‌ ಮಾಲ್

| Published : Nov 19 2024, 12:49 AM IST

ನೇಕಾರ ವಸತಿ ಯೋಜನೆ ಆಯ್ಕೆಯಲ್ಲಿ ಗೋಲ್‌ ಮಾಲ್
Share this Article
  • FB
  • TW
  • Linkdin
  • Email

ಸಾರಾಂಶ

ನೇಕಾರರ ವಸತಿ ರಹಿತರಿಗೆ 2021-22ನೇ ಸಾಲಿನಲ್ಲಿ ಮಂಜೂರಾದ 100 ಮನೆಗಳಲ್ಲಿ 40ಕ್ಕೂ ಅಧಿಕ ನೇಕಾರರು ಮತ್ತು ಕುಶಲ ಕರ್ಮಿಗಳು ಅಲ್ಲದ ವ್ಯಕ್ತಿಗಳನ್ನು ಆಯ್ಕೆಮಾಡಿ ನೇಕಾರರಿಗೆ ಅನ್ಯಾಯ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ದೇವರಾಜ ಅರಸು ವಸತಿ ಯೋಜನೆಯಡಿ ವಸತಿ ಇಲಾಖೆಯು ಕುಶಲಕರ್ಮಿ ನೇಕಾರರ ವಸತಿ ರಹಿತರಿಗೆ 2021-22ನೇ ಸಾಲಿನಲ್ಲಿ ಮಂಜೂರಾದ 100 ಮನೆಗಳಲ್ಲಿ 40ಕ್ಕೂ ಅಧಿಕ ನೇಕಾರರು ಮತ್ತು ಕುಶಲ ಕರ್ಮಿಗಳು ಅಲ್ಲದ ವ್ಯಕ್ತಿಗಳನ್ನು ಆಯ್ಕೆಮಾಡಿ ನೇಕಾರರಿಗೆ ಅನ್ಯಾಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ನೇಕಾರ ಕಾಲೋನಿಯಲ್ಲಿ ಅರ್ಹ ಫಲಾನುಭವಿಗಳನ್ನು ಹೊರತು ಪಡಿಸಿ, ಇನ್ನುಳಿದ 40ಕ್ಕೂ ಅಧಿಕ ಅನರ್ಹರ ಪಟ್ಟಿ ರದ್ದುಗೊಳಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಹೇಳಿದರು.

ಪುರಸಭೆ ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೇಕಾರ ವೃತ್ತಿ ಮಾಡದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಬಡನೇಕಾರರಿಗೆ ಅನ್ಯಾಯ ಮಾಡಲಾಗಿದೆ. ಜಿಲ್ಲಾಧಿಕಾರಿ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ಈಗಿನ ಆಯ್ಕೆಪಟ್ಟಿ ರದ್ದುಗೊಳಿಸಿ ಅರ್ಹರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಪ್ರಲ್ಹಾದ ಸಣ್ಣಕ್ಕಿ ಮಾತನಾಡಿ, ಕುಶಲ ಕರ್ಮಿಗಳ ನೇಕಾರ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಭಾರಿ ಗೋಲ್‌ಮಾಲ್ ನಡೆದಿದೆ. ಸೌಜನ್ಯ ನೇಕಾರ ಸೊಸೈಟಿ ಜಿ.ಎಸ್.ಗೊಂಬಿ ರವರು ಒಬ್ಬೊಬ್ಬ ಫಲಾನುಭವಿಯಿಂದ ಕನಿಷ್ಠ 20 ರಿಂದ 30 ಸಾವಿರ ರು. ಲಂಚ ಪಡೆದು ನೇಕಾರರರು ಅಲ್ಲದ 40ಕ್ಕೂ ಅಧಿಕ ಫಲಾನುಭವಿಗಳಿಗೆ ಮನೆ ಹಂಚಿ ಲಕ್ಷಾಂತರ ಅವ್ಯವಹಾರ ನಡೆಸಿದ್ದಾರೆ. ಅರ್ಹ ನೇಕಾರರಿಗೆ ವಸತಿ ಯೋಜನೆ ಸೌಲಭ್ಯ ನೀಡಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ, ಜವಳಿ ಇಲಾಖೆ ಉಪನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗೆ ಮನವಿ ಮೂಲಕ ಪತ್ರ ಸಲ್ಲಿಸಿ ಆಗ್ರಹಿಸಲಾಯಿತು.ಪುರಸಭೆ ಸದಸ್ಯರಾದ ಬಸವರಾಜ ಚಮಕೇರಿ, ರವಿ ಜವಳಗಿ, ಮುಖಂಡರಾದ ಮಹಾಲಿಂಗ ಮುದ್ದಾಪೂರ, ಚನ್ನಪ್ಪ ರಾಮೋಜಿ, ಚನ್ನಗೀರಿ ಕೆಳಗಡೆ ಸೇರಿದಂತೆ ಹಲವರು ಇದ್ದರು.