ಸಾರಾಂಶ
ಉಡುಪಿ ಜಿಲ್ಲೆಯ ಬ್ಯಾಂಕ್‌ಗಳು, ಫೈನಾನ್ಸ್‌ಗಳಲ್ಲಿ ಹಾಗೂ ಸೊಸೈಟಿಗಳಲ್ಲಿ ನಕಲಿ ಚಿನ್ನ ಅಡವಿಡುವ ತಂಡಗಳು ಕಾರ್ಯಚರಿಸುತ್ತಿದ್ದು, ಇದರಿಂದ ಚಿನ್ನಾಭರಣ ಪರಿವೀಕ್ಷಕರಿಗೆ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಈ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಮಂಗಳವಾರ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಹಾಗೂ ಉಪ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆಯ ಬ್ಯಾಂಕ್‌ಗಳು, ಫೈನಾನ್ಸ್‌ಗಳಲ್ಲಿ ಹಾಗೂ ಸೊಸೈಟಿಗಳಲ್ಲಿ ನಕಲಿ ಚಿನ್ನ ಅಡವಿಡುವ ತಂಡಗಳು ಕಾರ್ಯಚರಿಸುತ್ತಿದ್ದು, ಇದರಿಂದ ಚಿನ್ನಾಭರಣ ಪರಿವೀಕ್ಷಕರಿಗೆ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಈ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಮಂಗಳವಾರ ಜಿಲ್ಲಾ ಪೋಲಿಸ್ ಅಧೀಕ್ಷಕರಿಗೆ ಹಾಗೂ ಉಪ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಈ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ತಿಳಿಸಿದರು.ಈ ಸಂದರ್ಭ ಚಿನ್ನ, ಬೆಳ್ಳಿ ಕೆಲಸಗಾರರ ಸಂಘ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಗೌರವ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು, ಕಾರ್ಯದರ್ಶಿ ರಘುನಾಥ್ ಆಚಾರ್ಯ, ಜೊತೆ ಕಾರ್ಯದರ್ಶಿ ಪ್ರಸನ್ನ ಅಚಾರ್ಯ, ಕೋಶಾಧಿಕಾರಿ ದಿವಾಕರ್ ಆಚಾರ್ಯ, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ಕೀಶೊರ್ ಆಚಾರ್ಯ, ಜಯಪ್ರಕಾಶ್ ಕುತ್ಪಾಡಿ, ಹರೀಶ್ ಆಚಾರ್ಯ ಕಳತ್ತೂರು, ಅರುಣ್ ಆಚಾರ್ಯ, ಪ್ರಕಾಶ್ ಆಚಾರ್ಯ ಕಟಪಾಡಿ, ಸತೀಶ್ ಆಚಾರ್ಯ ಪಡುಬಿದ್ರಿ, ರಾಮ್‌ದಾಸ್ ಶೇಟ್ ಉಡುಪಿ, ಜಗದೀಶ್ ಆಚಾರ್ಯ, ಗಜೇಂದ್ರ ಶೇಟ್, ಉಡುಪಿ ಗಣೇಶ್ ಆಚಾರ್ಯ, ಸುರೇಶ್ ಆಚಾರ್ಯ, ಪ್ರಭಾಕರ್ ಆಚಾರ್ಯ, ಪ್ರಸಾದ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.