ಕ್ರೀಡಾಕೂಟದಲ್ಲಿ ಸೆಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಗೆ 13 ಚಿನ್ನದ ಪದಕ

| Published : Aug 03 2025, 11:45 PM IST

ಕ್ರೀಡಾಕೂಟದಲ್ಲಿ ಸೆಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಗೆ 13 ಚಿನ್ನದ ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಐಸಿಎಸ್‌ಇ ಕೊಡಗು ಹಾಗೂ ಮೈಸೂರು ವಲಯ ಟ್ರಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಅಂಡರ್ ೧೪ ಮತ್ತು ಅಂಡರ್ ೧೭ ವಿಭಾಗಗಳಲ್ಲಿ ಚಾಮರಾಜನಗರದ ರಾಮಸಮುದ್ರದಲ್ಲಿ ಇರುವ ಸೆಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ೧೩ ಚಿನ್ನ ಹಾಗೂ ೧೮ ಬೆಳ್ಳಿ ಮತ್ತು ೬ ಕಂಚಿನ ಪದಕ ಗಳಿಸಿ ಯಶಸ್ವಿಯಾಗಿದ್ದಾರೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೊಡಗಿನ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಐಸಿಎಸ್‌ಇ ಕೊಡಗು ಹಾಗೂ ಮೈಸೂರು ವಲಯ ಟ್ರಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ಅಂಡರ್ ೧೪ ಮತ್ತು ಅಂಡರ್ ೧೭ ವಿಭಾಗಗಳಲ್ಲಿ ಚಾಮರಾಜನಗರದ ರಾಮಸಮುದ್ರದಲ್ಲಿ ಇರುವ ಸೆಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ೧೩ ಚಿನ್ನ ಹಾಗೂ ೧೮ ಬೆಳ್ಳಿ ಮತ್ತು ೬ ಕಂಚಿನ ಪದಕ ಗಳಿಸಿ ಯಶಸ್ವಿಯಾಗಿದ್ದಾರೆ.

ಅಂಡರ್ ೧೪ ವಿಭಾಗದಲ್ಲಿ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಪ್ರಜ್ವಲ್, ಬೆಳ್ಳಿ ಪದಕ ಬಿ.ಎಸ್.ಲಿಖಿತ, ಕಂಚಿನ ಪದಕ ಗಣವಿ. ಶಾಟ್‌ಪುಟ್- ಸುದರ್ಶನ್ ಚಿನ್ನ, ಇಮಾಮ್, ಹನ್ನಿಕಾ ಬೆಳ್ಳಿ ಪದಕ. ಡಿಸ್ಕಸ್ ಥ್ರೋ- ಲಿಖಿತಾ, ಸುದರ್ಶನ್ ಚಿನ್ನದ ಪದಕ, ಜನಿಷಾ, ಇಮಾಮ್ ಬೆಳ್ಳಿ ಪದಕ ಪಡೆದಿದ್ದಾರೆ.

ಅಂಡರ್ ೧೭ ವಿಭಾಗದಲ್ಲಿ ಲಾಂಗ್‌ಜಂಪ್- ಆದರ್ಶ ಚಿನ್ನದ ಪದಕ, ಟ್ರಿಪಲ್ ಜಂಪ್- ಆದರ್ಶ ಚಿನ್ನದ ಪದಕ, ಚಿತ್ತೇಶ್ ಬೆಳ್ಳಿ ಪದಕ ಹೈ ಜಂಪ್-ಆಕಾಶ್ ಚಿನ್ನದ ಪದಕ, ಋತೀಶ್ ಕಂಚಿನ ಪದಕ ಶಾಟ್ ಪುಟ್-ಇನಾಮ್, ಆಕಾಶ್ ಚಿನ್ನದ ಪದಕ ಡಿಸ್ಕಸ್ ಥ್ರೋ-ಸಂಪದಾ, ಆಶಿಷ್ ಚಿನ್ನದ ಪದಕ, ಸಾನ್ವಿ ಬೆಳ್ಳಿ ಪದಕ, ಇಂದ್ರಧನುಷ್ ಕಂಚಿನ ಪದಕ ಜ್ಯಾವೆಲಿನ್ ಥ್ರೋ- ಆದರ್ಶ್ ಬೆಳ್ಳಿ ಪದಕ, ಆಶಿಷ್, ಚಿಂಥನಾ ಕಂಚಿನ ಪದಕ ಹರ್ಡಲ್ಸ್- ಸಂಪದಾ,ಚಿತ್ತೇಶ್ ಚಿನ್ನದ ಪದಕ, ತನೂಷಾ, ವಿಕಾಸ್ ಬೆಳ್ಳಿ ಪದಕ ೪-೧೦೦ ಮೀಟರ್ ರಿಲೇ-ಆದರ್ಶ್, ಆಕಾಶ್,ಇಂದ್ರಧನುಷ್,ಚಿತ್ತೇಶ್ ಬೆಳ್ಳಿ ಪದಕ ೪-೪೦೦ ಮೀಟರ್ ರಿಲೇ- ಆದರ್ಶ್, ಅರ್‍ಸಲಾನ್, ಇಂದ್ರಧನುಷ್,ಚಿತ್ತೇಶ್ ಬೆಳ್ಳಿ ಪದಕ ಹ್ಯಾಮರ್ ಥ್ರೋ-ಐಶ್ವಾರ್ಯ ಎಸ್.ಎಸ್, ಇಂದ್ರಧನುಷ್, ಚಿನ್ನದ ಪದಕ, ಅನಾಸ್ ಕಂಚಿ ಪದಕ ಪಡೆದ ವಿದ್ಯಾರ್ಥಿಗಳು ವಿಜೇತರಾದ ವಿದ್ಯಾರ್ಥಿಗಳಿಗೆ ಸೆಂಟ್ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಯ ಪ್ರಾಂಶುಪಾಲರಾದ ವಂದನೆಯ ಸ್ವಾಮಿ ಪ್ರಭಾಕರ್, ಆಡಳಿತಾಧಿಕಾರಿ ಜೋಸೆಫ್, ಹಾಗೂ ಕ್ರೀಡಾ ವಿಭಾಗದ ಚೀಪ್ ಕೋಚ್ ಶಿವು, ಶಾಲಾ ದೈಹಿಕ ಶಿಕ್ಷಕ ಕುಮಾರ್ ಹಾಗೂ ಶಾಲಾ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.