ಹಲಗೆ ಮಜಲು ತಜ್ಞ ಬಡಿಗೇರ್ ಗೆ ಸುವರ್ಣ ಕರ್ನಾಟಕ ಪ್ರಶಸ್ತಿ

| Published : Feb 28 2024, 02:41 AM IST

ಸಾರಾಂಶ

ಕೊಲ್ಹಾರ: ತಾಲೂಕಿನ ಹಣಮಾಪೂರ ಗ್ರಾಮದ ಖ್ಯಾತ ಹಲಗೆ ಮಜಲು ವಾದಕ ಗಂಗಾಧರ ಬಡಿಗೇರ ನೇತೃತ್ವದ ಗ್ರಾಮ ದೇವತೆ ಹಲಗೆ ಮಜಲು ಜನಪದ ಕಲಾ ತಂಡಕ್ಕೆ ಸುವರ್ಣ ಕರ್ನಾಟಕ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕಾ ಘಟಕ, ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ವಿಜಯಪುರ ಸಹಯೋಗದಲ್ಲಿ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ನಡೆದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೇವೆ ಗುರ್ತಿಸಿ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಕೊಲ್ಹಾರ: ತಾಲೂಕಿನ ಹಣಮಾಪೂರ ಗ್ರಾಮದ ಖ್ಯಾತ ಹಲಗೆ ಮಜಲು ವಾದಕ ಗಂಗಾಧರ ಬಡಿಗೇರ ನೇತೃತ್ವದ ಗ್ರಾಮ ದೇವತೆ ಹಲಗೆ ಮಜಲು ಜನಪದ ಕಲಾ ತಂಡಕ್ಕೆ ಸುವರ್ಣ ಕರ್ನಾಟಕ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕಾ ಘಟಕ, ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ವಿಜಯಪುರ ಸಹಯೋಗದಲ್ಲಿ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ನಡೆದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೇವೆ ಗುರ್ತಿಸಿ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸದ ರಮೇಶ ಜಿಗಜಿಣಗಿ, ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಅಶೋಕ ಶಾಬಾದಿ, ಡಾ.ಪ್ರಭುಗೌಡ ಚಬನೂರ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಕಾನಿಪ ತಾಲೂಕಾಧ್ಯಕ್ಷ ಸಂಗಮೇಶ ಉತ್ನಾಳ ಇದ್ದರು.