ಸಮಚಿತ್ತದಿಂದ ಇದ್ದಾಗ ಸಾರ್ಥಕ ಜೀವನ ನಡೆಸಬಹುದು

| Published : Aug 25 2024, 01:50 AM IST

ಸಾರಾಂಶ

ಒಬ್ಬನು ತನ್ನ ಹೃದಯ ತೆರೆದು ದೇವರನ್ನು ಆ ಸಿಹಿ, ಅಮೃತ, ದೈವಿಕ, ಶುದ್ಧ ಮತ್ತು ಕಳಂಕರಹಿತ ಪ್ರೀತಿಗಾಗಿ ಅನುಭವಿಸಿದರೆ,

ಕನ್ನಡಪ್ರಭ ವಾರ್ತೆ ಮೈಸೂರುನಿಮ್ಮ ಅಸ್ತಿತ್ವದ ಪರಮ ಸತ್ಯ ತಿಳಿದುಕೊಳ್ಳುವ ಮೂಲಕ ಎಲ್ಲಾ ಸಂದರ್ಭಗಳಲ್ಲಿ ಸಮಚಿತ್ತರಾಗಿದ್ದರೆ ಜಗತ್ತಿನಲ್ಲಿ ಶಾಂತಿ, ಸಂತೋಷ ಮತ್ತು ಸಾರ್ಥಕತೆಯ ಜೀವನ ನಡೆಸಬಹುದು ಎಂದು ಆಧ್ಯಾತ್ಮಿಕ ಚಿಂತಕ ಮಧುಸೂದನ ಸಾಯಿ ಹೇಳಿದರು.ನಗರದ ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತವಾನೋತ್ಸವ ಸಭಾಂಗಣದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸ- 14 ಹಾಗೂ ವಿಶೇಷ ಉಪನ್ಯಾಸ ಮಾಲೆಯ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಒಬ್ಬನು ತನ್ನ ಹೃದಯ ತೆರೆದು ದೇವರನ್ನು ಆ ಸಿಹಿ, ಅಮೃತ, ದೈವಿಕ, ಶುದ್ಧ ಮತ್ತು ಕಳಂಕರಹಿತ ಪ್ರೀತಿಗಾಗಿ ಅನುಭವಿಸಿದರೆ, ಅದು ಮಾತ್ರ ದೈವತ್ವದ ಅನುಭವ ಮತ್ತು ತಿಳುವಳಿಕೆಯಾಗಿದೆ. ಮೋಕ್ಷ ಯಾವಾಗಲೂ ದೇವರ ಬಗ್ಗೆ ಯೋಚಿಸುತ್ತದೆ. ನೀವು ಬದುಕುತ್ತೀರಿ, ಉಸಿರಾಡುತ್ತೀರಿ, ತಿನ್ನುತ್ತೀರಿ, ನಿದ್ದೆ ಮಾಡುತ್ತೀರಿ, ನಡೆಯುತ್ತೀರಿ ಮತ್ತು ಯಾವಾಗಲೂ ದೇವರನ್ನು ಅನುಭವಿಸುತ್ತೀರಿ. ಯಾವುದೇ ಸಾವಾನ್ಯ ಕ್ರಿಯೆ, ಎಷ್ಟೇ ಸಾಮಾನ್ಯವೆಂದು ತೋರಿದರೂ, ಅದರ ಹಿಂದೆ ಸರಿಯಾದ ವರ್ತನೆ ಮತ್ತು ಸರಿಯಾದ ಆಲೋಚನೆ ಹೊಂದುವ ಮೂಲಕ ದೈವಿಕ ಕ್ರಿಯೆಯಾಗಿ ಪರಿವರ್ತಿಸಬಹುದು ಎಂದರು.ಭಗವಂತ ಮತ್ತು ಆತನ ಪ್ರೀತಿಗಾಗಿ ಹಂಬಲಿಸುವವರು ಆತನಿಗೆ ತಮ್ಮ ಮಾರ್ಗವನ್ನು ಕಂಡುಕೊಳ್ಳುತ್ತಾರೆ ಮತ್ತು ಆತನು ಅವರಿಗೆ ದಾರಿ ಕಂಡುಕೊಳ್ಳುತ್ತಾನೆ ಇದು ಸತ್ಯ ಎಂದು ಅವರು ಹೇಳಿದರು.ನೀವು ವಾಡುವ ಪ್ರತಿಯೊಂದು ಒಳ್ಳೆಯ ಕಾರ್ಯವು ಫಲ ನೀಡುತ್ತದೆ. ಇತರ ಜನರಿಗೆ ಒಳ್ಳೆಯದನ್ನು ಮಾಡುವುದು ನಿಮಗೆ ಅಗತ್ಯವಿರುವಾಗ ನಿಮಗೆ ಸಹಾಯ ಮಾಡುವ ವಿಮೆಯನ್ನು ನಿರ್ಮಿಸುವಂತಿದೆ ಎಂದರು.ಕೃತಿಗಳನ್ನು ಬಿಡುಗಡೆಗೊಳಿಸಿದ ವಿಶ್ರಾಂತ ಕುಲಪತಿ ಪ್ರೊ.ಜೆ. ಶಶಿಧರ್ ಪ್ರಸಾದ್ ಮಾತನಾಡಿ, ಭಗವಾನ್ ಸತ್ಯಸಾಯಿ ಬಾಬಾ ಅವರಂತೆ ದೈವ ಪ್ರೇರಣೆಯಂತೆ ಮಧುಸೂದನ್ ಸಾಯಿ ಅವರು ಕೆಲಸ ವಾಡುತ್ತಿದ್ದಾರೆ. ಇದು ನನಗೆ ಯೋಗಾ ಯೋಗ ಅಂದುಕೊಂಡಿದ್ದೇನೆ ಎಂದು ಹೇಳಿದರು.ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪ್ರಾದೇಶಿಕ ಆಯುಕ್ತ ಡಿ.ಎಸ್. ರಮೇಶ್ ಅಧ್ಯಕ್ಷೀಯ ಭಾಷಣ ಮಾಡಿದರು. ಅತಿಥಿಗಳಾಗಿ ಸತ್ಯಸಾಯಿ ವಿವಿ ಕುಲಪತಿ ನರಸಿಂಹಮೂರ್ತಿ ಭಾಗವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಎಸ್.ಪಿ. ಶಿವಕುಮಾರ ಸ್ವಾಮಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಹೊಸಮಠದ ಶ್ರೀ ಚಿದಾನಂದಸ್ವಾಮೀಜಿ, ಬಿ. ನಿರಂಜನಮೂರ್ತಿ, ಪ್ರೊ.ಸಿ. ಬಸವರಾಜು, ಪ್ರೊ.ಬಿ.ವಿ. ಸಾಂಬಶಿವಯ್ಯ, ಡಾ.ಎಚ್. ಬಸವನಗೌಡ, ಡಾ. ಮಂಜುನಾಥ್ ಮೊದಲಾದವರು ಇದ್ದರು. ಜೆಎಸ್ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಬಿ. ಸುರೇಶ್ ಸ್ವಾಗತಿಸಿದರು.