ಗೋವಾದ ರಾಜಧಾನಿ ಪಣಜಿಯ ಹೃದಯಭಾಗದಲ್ಲಿ ಎಂ.ಆರ್.ಜಿ. ಸಮೂಹದ ‘ಗೋಲ್ಡ್ ಫಿಂಚ್ ಪಣಜಿ ಗೋವಾ’ ಅತ್ಯಾಧುನಿಕ ಆತಿಥ್ಯಸೇವೆಗಳನ್ನು ಗೋವಾದ ವಿಶಿಷ್ಟ ಸೊಬಗಿನೊಂದಿಗೆ ಸಂಯೋಜಿಸಿ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ.

ಮಂಗಳೂರು: ಗೋವಾದ ರಾಜಧಾನಿ ಪಣಜಿಯ ಹೃದಯಭಾಗದಲ್ಲಿ ಎಂ.ಆರ್.ಜಿ. ಸಮೂಹದ ‘ಗೋಲ್ಡ್ ಫಿಂಚ್ ಪಣಜಿ ಗೋವಾ’ ಅತ್ಯಾಧುನಿಕ ಆತಿಥ್ಯಸೇವೆಗಳನ್ನು ಗೋವಾದ ವಿಶಿಷ್ಟ ಸೊಬಗಿನೊಂದಿಗೆ ಸಂಯೋಜಿಸಿ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ.ಸುಂದರ ಮಂಡೋವಿ ನದಿಯ ನೋಟವನ್ನು ಹೊಂದಿರುವ ಈ ಹೋಟೆಲ್, ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ದೇಶಾದ್ಯಂತ ಬೆಳೆಯುತ್ತಿರುವ ಹೋಟೆಲ್ ಜಾಲಕ್ಕೆ ಹೊಸ ಸೇರ್ಪಡೆಯಾಗಿದೆ. ವ್ಯಾಪಾರ ಮತ್ತು ಪ್ರವಾಸ ಉದ್ದೇಶದ ಅತಿಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಹೋಟೆಲ್, ಆರಾಮ, ಅನುಕೂಲತೆ ಮತ್ತು ಆಧುನಿಕ ಸೊಬಗನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.

ಒಟ್ಟು 98 ಸುಸಜ್ಜಿತ ಕೊಠಡಿಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಏಳು ವಿಶಾಲ ಸೂಟ್‌ಗಳಿವೆ. ಆಧುನಿಕ ಸೌಲಭ್ಯಗಳು, ವಿಶಾಲ ಲಾಬಿ, ಹಸಿರು ಪರಿಸರ ಹಾಗೂ ಆಕರ್ಷಕ ಒಳಾಂಗಣ ವಿನ್ಯಾಸಗಳು ಗೋವಾದ ನಿರಾಳ ಮತ್ತು ಉತ್ಸಾಹಭರಿತ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತವೆ.ಹೋಟೆಲ್‌ನ ಪ್ರಮುಖ ಆಕರ್ಷಣೆಯಾದ ‘ಬಂಜಾರಾ’ ರೆಸ್ಟೋರೆಂಟ್ ದಿನಪೂರ್ತಿ ಆಹಾರ ಸೇವೆಯನ್ನು ಒದಗಿಸುತ್ತಿದ್ದು, ಅಂತಾರಾಷ್ಟ್ರೀಯ ಖಾದ್ಯಗಳ ಜೊತೆಗೆ ಸ್ಥಳೀಯ ಸುವಾಸನೆಗಳನ್ನೊಳಗೊಂಡ ವೈವಿಧ್ಯಮಯ ಪಾಕಶೈಲಿಯನ್ನು ಅತಿಥಿಗಳಿಗೆ ಪರಿಚಯಿಸುತ್ತದೆ. ಗೋವಾದ ಶ್ರೀಮಂತ ಮತ್ತು ವೈವಿಧ್ಯಮಯ ಆಹಾರ ಸಂಸ್ಕೃತಿಯ ಸೊಗಡನ್ನು ಇಲ್ಲಿ ಸವಿಯಬಹುದು.

ಎಂ.ಆರ್.ಜಿ. ಸಮೂಹದ ಸ್ಥಾಪಕಾಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ದೀರ್ಘಕಾಲ ಸಮಾಜಕ್ಕೆ ಉಪಯುಕ್ತವಾಗುವ ಸಂಸ್ಥೆಗಳು ಮತ್ತು ಯೋಜನೆಗಳನ್ನು ನಿರ್ಮಿಸುವುದೇ ಎಂ.ಆರ್.ಜಿ. ಸಮೂಹದ ಆಶಯ. ಗೋಲ್ಡ್‌ಫಿಂಚ್ ಪಣಜಿ ಗೋವಾದ ಆರಂಭ ಆತಿಥ್ಯ ಕ್ಷೇತ್ರದಲ್ಲಿ ನಮ್ಮ ಬೆಳವಣಿಗೆಯ ಪಯಣದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದರು.ಎಂ.ಆರ್.ಜಿ. ಸಮೂಹದ ವ್ಯವಸ್ಥಾಪಕ ನಿರ್ದೇಶಕ ಗೌರವ್ ಶೆಟ್ಟಿ ಮಾತನಾಡಿ, ಗೋಲ್ಡ್ ಫಿಂಚ್ ಪಣಜಿ ಗೋವಾದ ಆರಂಭವು ಎಂ.ಆರ್.ಜಿ. ಸಮೂಹದ ಆತಿಥ್ಯ ಕ್ಷೇತ್ರದ ಬೆಳವಣಿಗೆಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ದೇಶದ ಪ್ರಮುಖ ಪ್ರವಾಸ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಅರ್ಥಪೂರ್ಣ ಆತಿಥ್ಯ ಅನುಭವಗಳನ್ನು ಸೃಷ್ಟಿಸುವ ನಮ್ಮ ನಿರಂತರ ಬದ್ಧತೆಯ ಪ್ರತಿಬಿಂಬವೇ ಈ ಹೊಸ ಹೋಟೆಲ್ ಎಂದರು.ಗೋಲ್ಡ್ ಫಿಂಚ್ ಪಣಜಿ ಗೋವಾದ ಆರಂಭ ಭಾರತದ ಆತಿಥ್ಯ ಕ್ಷೇತ್ರದಲ್ಲಿ ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿಯ ಬೆಳೆಯುತ್ತಿರುವ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ವಿಶ್ವಮಟ್ಟದ ಆತಿಥ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಎಂ.ಆರ್.ಜಿ. ಸಮೂಹದ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿ ಕುರಿತು ಎಂ.ಆರ್.ಜಿ. ಸಮೂಹದ ಆತಿಥ್ಯ ವಿಭಾಗವಾದ ಗೋಲ್ಡ್ ಫಿಂಚ್ ಹಾಸ್ಪಿಟಾಲಿಟಿ, ಬೆಂಗಳೂರು, ಮಂಗಳೂರು, ಮುಂಬೈ ಹಾಗೂ ಇದೀಗ ಗೋವಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಹೋಟೆಲ್ ಜಾಲವನ್ನು ವಿಸ್ತರಿಸಿದೆ.

ಎಂ.ಆರ್.ಜಿ. ಸಮೂಹ ಆತಿಥ್ಯ, ಆರೋಗ್ಯ, ಶಿಕ್ಷಣ, ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಸೇರಿದಂತೆ ವಿವಿಧಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಜಿ. ಸಮೂಹ 2035ರ ವೇಳೆಗೆ 3,500ಕ್ಕೂ ಹೆಚ್ಚು ಕೊಠಡಿಗಳ ಸಾಮರ್ಥ್ಯ ಹೊಂದುವ ಗುರಿಯನ್ನು ಹೊಂದಿದ್ದು, ಭವಿಷ್ಯಮುಖಿ ಮತ್ತು ಬಲಿಷ್ಠ ಆತಿಥ್ಯ ಜಾಲವನ್ನು ನಿರ್ಮಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.