ಗೋಣಿಕೊಪ್ಪ ದಸರಾ: ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಪ್ರದರ್ಶನ

| Published : Oct 11 2024, 11:45 PM IST

ಸಾರಾಂಶ

ಗೋಣಿಕೊಪ್ಪ ಕಾವೇರಿ ಕಲಾವೇದಿಕೆಯಲ್ಲಿ 9ನೇ ದಿನದ ಕಾರ್ಯಕ್ರಮವಾಗಿ ಸ್ಥಳೀಯ ಪ್ರತಿಭೆಗಳು ವೇದಿಕೆಯನ್ನು ತುಂಬಿಕೊಂಡು ಸಂಜೆಯ ಸಾಂಸ್ಕೃತಿಕ ಉಲ್ಲಾಸ ಹೆಚ್ಚಿಸಿದರು. ಸುಮಾರು 3 ಗಂಟೆಗಳ ಕಾಲ ನಡೆದ ನೃತ್ಯಗಳಲ್ಲಿ ಪ್ರಥಮವಾಗಿ ವೇದಿಕೆ ಹತ್ತಿದ ಪುಟಾಣಿಗಳಿಂದ 45ರ ವಯಸ್ಸಿನ ಮಹಿಳೆಯರ ತನಕ ಕಲಾವಿದರು ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಗೋಣಿಕೊಪ್ಪ ಕಾವೇರಿ ಕಲಾವೇದಿಕೆಯಲ್ಲಿ 9ನೇ ದಿನದ ಕಾರ್ಯಕ್ರಮವಾಗಿ ಸ್ಥಳೀಯ ಪ್ರತಿಭೆಗಳು ವೇದಿಕೆಯನ್ನು ತುಂಬಿಕೊಂಡು ಸಂಜೆಯ ಸಾಂಸ್ಕೃತಿಕ ಉಲ್ಲಾಸ ಹೆಚ್ಚಿಸಿದರು. ಸೈಕ್ಲೋನ್ ನೃತ್ಯ ಶಾಲೆಯ ರಮೇಶ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ರಿಫ್ಲೆಕ್ಷನ್ ಡಾನ್ಸ್ ತಂಡದ ಅವಿನಾಶ್ ವಿದ್ಯಾರ್ಥಿಗಳು ದೇಶಭಕ್ತಿ, ಭಕ್ತಿ ಗೀತೆ, ಸೇರಿದಂತೆ ಹಲವು ಪ್ರಕಾರಗಳ ನೃತ್ಯಗಳಿಗೆ ಹೆಜ್ಜೆ ಹಾಕಿ ನೆರೆದವರ ಮನಸ್ಸಿಗೆ ಸಾಂಸ್ಕೃತಿಕ ರಂಗು ತುಂಬಿದರು.

ಸುಮಾರು 3 ಗಂಟೆಗಳ ಕಾಲ ನಡೆದ ನೃತ್ಯಗಳಲ್ಲಿ ಪ್ರಥಮವಾಗಿ ವೇದಿಕೆ ಹತ್ತಿದ ಪುಟಾಣಿಗಳಿಂದ 45ರ ವಯಸ್ಸಿನ ಮಹಿಳೆಯರ ತನಕ ಕಲಾವಿದರು ನೃತ್ಯ ಮಾಡುವ ಮೂಲಕ ಗಮನ ಸೆಳೆದರು.

ಗೋಣಿಕೊಪ್ಪದ ಚಿಗುರು ತಂಡ ಪೊನ್ನಂಪೇಟೆ ನಾಟ್ಯ ಸಂಕಲ್ಪ ಶಾಲೆಯಿಂದ ನೃತ್ಯ ಭರತನಾಟ್ಯಗಳು ಕಲಾ ಪ್ರೇಕ್ಷಕರನ್ನು ರಂಜಿಸಿತು.

ಕಾವೇರಿ ದಸರಾ ಸಮಿತಿ ಪ್ರದಾನ ಕಾರ್ಯದರ್ಶಿ ಕಂದ ದೇವಯ್ಯ, ಕಾರ್ಯದರ್ಶಿ ವರಲಕ್ಷ್ಮೀ, ಉಪಾದ್ಯಕ್ಷ ಶಿವಾಜಿ, ಕೋಶಧಿಕಾರಿ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಮಹಿಳಾ ದಸರಾ ಅಧ್ಯಕ್ಷೆ ಎಂ ಮಂಜುಳಾ, ಸಂಸ್ಕೃತಿ ಸಮಿತಿ ಸಂಚಾಲಕರಾದ ಪಾರುವಂಗಡ ದಿಲನ್ ಚಂಗಪ್ಪ, ಸೈಕ್ಲೋನ್ ರಮೇಶ್, ಅವಿನಾಶ್ ಸಂಯೋಜಕರಾದ ಮನೆಯಪಂಡ ಶಿಲಾ ಬೋಪ್ಪಣ್ಣ,ಚಂದನ್ ಕಾಮತ್, ಸಮಿತಿ ಸದಸ್ಯರಾದ ಕೊಕ್ಕಂಡ ರೋಶನ್, ಜಪ್ಪೆಕೊಡಿ ರಾಜ ಉತ್ತಪ್ಪ, ಶೋಭಿತ್ ಪಿ.ವಿ,ಗುರುರಾಜ್, ಓಮನ, ಚಂದನ ಮಂಜುನಾಥ್, ಅಂಕಿತ್ ಪೊನ್ನಪ್ಪ ಇದ್ದರು.