ಸಾರಾಂಶ
ಕೂಸಿನಮನೆಗೆ ಬರುವ ಮಕ್ಕಳನ್ನು ಆರೈಕೆ ಮಾಡುವಾಗ ಭೇದ-ಭಾವ ಮಾಡದೇ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಕಂಡು ನೋಡಿಕೊಳ್ಳುವ ಜವಾಬ್ದಾರಿ ಕೂಸಿನ ಮನೆಯ ಆರೈಕೆದಾರರ ಮೇಲಿದೆ. ಕೂಸಿನ ಮನೆಗಳು ಬಡವರ ಪಾಲಿಗೆ ವರದಾನವಾಗಬೇಕು.
ಕುಷ್ಟಗಿ: ಕೂಸಿನ ಮನೆಗೆ ಬರುವಂತಹ ಮಕ್ಕಳನ್ನು ಆರೈಕೆದಾರರು ಸರಿಯಾಗಿ ನೋಡಿಕೊಳ್ಳಬೇಕು ಎಂದು ತಾಪಂ ಸಹಾಯಕ ಲೆಕ್ಕಾಧಿಕಾರಿ ರುದ್ರಪ್ಪ ಹಕ್ಕಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಎರಡನೇ ಹಂತದ ಕೂಸಿನ ಮನೆಯ ಮಕ್ಕಳನ್ನು ಆರೈಕೆ ಮಾಡುವವರಿಗೆ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೂಸಿನಮನೆಗೆ ಬರುವ ಮಕ್ಕಳನ್ನು ಆರೈಕೆ ಮಾಡುವಾಗ ಭೇದ-ಭಾವ ಮಾಡದೇ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಕಂಡು ನೋಡಿಕೊಳ್ಳುವ ಜವಾಬ್ದಾರಿ ಕೂಸಿನ ಮನೆಯ ಆರೈಕೆದಾರರ ಮೇಲಿದೆ. ಕೂಸಿನ ಮನೆಗಳು ಬಡವರ ಪಾಲಿಗೆ ವರದಾನವಾಗಬೇಕು ಎಂದರು.
ಕೂಸಿನಮನೆ ಸ್ಥಾಪನೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮಕ್ಕಳ ಬೌದ್ದಿಕತೆ, ಮಾನಸಿಕ, ಆರೋಗ್ಯಯುತವಾಗಿ ನೋಡಿಕೊಳ್ಳುವುದು ಆರೈಕೆದಾರರ ಮೇಲೆ ಇರುತ್ತದೆ ಎಂದು ಹೇಳಿದರು.
ಬೆಂಗಳೂರಿನ ಮೊಬೈಲ್ ಕ್ರೆಶ್ ಸಂಸ್ಥೆಯ ವಿಶ್ವನಾಥ್ ಗಣಾಚಾರಿ ಮಾತನಾಡಿ, ಮಕ್ಕಳ ಆರೈಕೆದರಾರ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಶಿಬಿರ ಏಳು ದಿನಗಳವರೆಗೆ ನಡೆಯುತ್ತದೆ. ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯಬೇಕು. ಏಳು ದಿನವೂ ಕಡ್ಡಾಯವಾಗಿ ಹಾಜರಾಗಬೇಕು.ತರಬೇತಿ ಪಡೆದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ತರಬೇತಿದಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನ್ನಪೂರ್ಣಾ ಪಾಟೀಲ ಮಾತನಾಡಿ, ಶಿಬಿರದಲ್ಲಿ ತರಬೇತಿ ಪಡೆದುಕೊಳ್ಳುವ ಕೂಸಿನ ಮನೆಯ ಮಕ್ಕಳ ಆರೈಕೆದಾರರು ಕೂಸಿನ ಮನೆಗೆ ಬರುವಂತಹ ಮಕ್ಕಳನ್ನು ಸರಿಯಾಗಿ ಲಾಲನೆ ಪಾಲನೆ ಮಾಡಬೇಕು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಮೊಬೈಲ್ ಕ್ರೆಶ್ ಸಂಸ್ಥೆಯ ತರಬೇತಿದಾರರಾದ ಭವಾನಿ, ತಾಪಂ ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ನರೇಗಾ ಸಿಬ್ಬಂದಿ ಮಂಜುನಾಥ್ ವೀರಭದ್ರಗೌಡ, ಮಹಿಳಾ ಕೆರ್ ಟೆಕರ್ಸ್ ಇದ್ದರು.