ಒಳ್ಳೆಯ ಕಾರ್ಯಗಳಿಂದ ಮನುಷ್ಯನಿಗೆ ನೆಮ್ಮದಿ

| Published : Aug 11 2025, 12:35 AM IST

ಒಳ್ಳೆಯ ಕಾರ್ಯಗಳಿಂದ ಮನುಷ್ಯನಿಗೆ ನೆಮ್ಮದಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕಾರ್ಯ ಮಾಡುವವರೇ ನಿಜವಾದ ಶ್ರೀಮಂತರು. ವಿಶೇಷವಾಗಿ ಶ್ರಾವಣ ಮಾಸದಲ್ಲಿ ನಮ್ಮ ಸಂಸ್ಕೃತಿಗಳ ಆಚಾರ-ವಿಚಾರ ತಪ್ಪದೆ ಪಾಲಿಸಬೇಕು

ಹನುಮಸಾಗರ: ಪಟ್ಟಣದಲ್ಲಿ ಭಾನುವಾರ ತೆರೆದ ಬಸವೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಕುಷ್ಟಗಿ ಪಟ್ಟಣದ ಮದ್ದಾನಿ ಕರಿಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಕಾಲದಲ್ಲಿ ಮನುಷ್ಯನಿಗೆ ಶಾಂತಿ, ನೆಮ್ಮದಿ ಸಿಗುವುದು ಕಷ್ಟಸಾಧ್ಯ. ನೆಮ್ಮದಿ ಮತ್ತು ಶಾಂತಿ ಸಿಗಬೇಕಾದರೆ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಬಡವರ ಕಣ್ಣೀರು ತೊಳೆಯುವ ಕಾರ್ಯಗಳಲ್ಲಿ ತೊಡಗಬೇಕು. ಕಲ್ಯಾಣ ಕಾರ್ಯ ಮಾಡುವವರೇ ನಿಜವಾದ ಶ್ರೀಮಂತರು. ವಿಶೇಷವಾಗಿ ಶ್ರಾವಣ ಮಾಸದಲ್ಲಿ ನಮ್ಮ ಸಂಸ್ಕೃತಿಗಳ ಆಚಾರ-ವಿಚಾರ ತಪ್ಪದೆ ಪಾಲಿಸಬೇಕು. ಸಂಸಾರದಲ್ಲಿ ಇದ್ದುಕೊಂಡು ಭಕ್ತಿ ಮತ್ತು ಶಾಂತಿಯೊಂದಿಗೆ ಜೀವನ ಸಾಗಿಸಿದರೆ ಜೀವನ ಸಫಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತೆರೆದ ಬಸವೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ, ಅನ್ನಪ್ರಸಾದ ಹಾಗೂ ತೆರೆದ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ನಡೆಯಿತು.

ಈ ಸಂದರ್ಭದಲ್ಲಿ ಸಂಗಯ್ಯ ಹಿರೇಮಠ, ಬಸವರಾಜ ಬಾಚಲಾಪೂರ, ಬಸವರಾಜ ಹಳ್ಳೂರ, ಬಸವರಾಜ ದೇವಣ್ಣನವರ, ಸೂಚಪ್ಪ ದೆಡವರಮನಿ, ಮಹಾತಯ್ಯ ಕೋಮಾರಿ, ಮೌಲಾಲಿ ಮೋಟಗಿ, ಶ್ರೀಶೈಲ ಮೋಟಗಿ, ಮಹಾತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ಈರಣ್ಣ ಹುನಗುಂಡಿ, ಶೇಖಪ್ಪ ದೋಟಿಹಾಳ, ಅರ್ಜುನಪ್ಪ ಇಟ್ಟಗಿ, ಬಾಬುಮಿಯ್ಯಾ ಮೋಟಗಿ, ಚಂದ್ರು ಹಳ್ಳಿಗುಡಿ, ಅಂದಪ್ಪ ಹಲಕುಲಿ ಸೇರಿದಂತೆ ಇತರರು ಇದ್ದರು.