ಸಾರಾಂಶ
ಇಲ್ಲಿನ ಕೇಂದ್ರ ಸಭೆ ಚಿಟಗುಪ್ಪದ ಮೆಥೋಡಿಸ್ಟ ಚರ್ಚ್‌ನಲ್ಲಿ ಕರ್ಜೂರ ಗರಿಗಳ ಹಬ್ಬ, ಶುಭ ಶುಕ್ರವಾರದ ಆರಾಧನೆ ಮತ್ತು ಪುನರುತ್ಥಾನದ ಹಬ್ಬ ಅದ್ಧೂರಿಯಿಂದ ಜರುಗಿದವು.
ಮೆಥೋಡಿಸ್ಟ ಚರ್ಚ್‌ನಲ್ಲಿ ಅದ್ಧೂರಿ ಆಚರಣೆ
ಕನ್ನಡಪ್ರಭ ವಾರ್ತೆ ಚಿಟಗುಪ್ಪಇಲ್ಲಿನ ಕೇಂದ್ರ ಸಭೆ ಚಿಟಗುಪ್ಪದ ಮೆಥೋಡಿಸ್ಟ ಚರ್ಚ್‌ನಲ್ಲಿ ಕರ್ಜೂರ ಗರಿಗಳ ಹಬ್ಬ, ಶುಭ ಶುಕ್ರವಾರದ ಆರಾಧನೆ ಮತ್ತು ಪುನರುತ್ಥಾನದ ಹಬ್ಬ ಅದ್ಧೂರಿಯಿಂದ ಜರುಗಿದವು.
ಜಿಲ್ಲಾ ಮೇಲ್ವಿಚಾರಕರಾದ ರೆ.ಪೌಲ್ ಮಧುಕರ್, ಸಹಾಯಕ ಸಭಾಪಾಲಕರಾದ ರೆ.ಎಸ್.ಶ್ರೀಕಾಂತ್‌ರ ಪ್ರಾರ್ಥನೆ ಮತ್ತು ನೇತೃತ್ವದಲ್ಲಿ ಎಲ್ಲಾ ಹಬ್ಬಗಳು ವಿಜೃಂಭಣೆಯಿಂದ ನಡೆದವು.40 ದಿನದ ಆಮರಣ ಉಪವಾಸ ಪ್ರಾರ್ಥನೆಯಿಂದ ಕೊನೆಗೊಂಡಿತು. ಅನೇಕ ಜಿಲ್ಲೆಯ ಸಭಾಪಾಲಕರು ವಾಕ್ಯ ಬೋಧನೆ ಮಾಡಿದರು.
ಖರ್ಜೂರ ಗರಿಗಳ ಹಬ್ಬದ ದಿನ ಭವ್ಯವಾದ ಮೆರವಣಿಗೆ ನಡೆಸಲಾಯಿತು. ಪವಿತ್ರ ವಾರದ ಆರಾಧನೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ರೆವರೆಂಡ್ ಡ್ಯಾನಿಯಲ್ ಜೋಸೆಫ್ ಅವರು ಒಂದು ವಾರ ವಾಕ್ಯ ಬೋಧನೆ ಮಾಡಿದರು, ಜಿಲ್ಲೆಯ ಎಲ್ಲಾ ಸಭೆಗಳಲ್ಲಿ ಕೂಡ ಭಕ್ತಿ ಪೂರ್ವಕ ಆರಾಧನೆಗಳು ಜರುಗಿದವು.ಬಿಷಪ್ ಡಾ.ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ಸಭೆಯಲ್ಲಿ ಬರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆ, ಹಣ್ಣು ಇತರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಭಾನುವಾರ ನಡೆದ ಪುನರುತ್ಥಾನದ ಸರ್ವೋದಯದ ಆರಾಧನೆಯಲ್ಲಿ ರೇವರೆಂಡ್ ಪೌಲ್ ಮಧುಕರ್ ವಾಕ್ಯ ಬೋಧನೆ ಮಾಡುತ್ತಾ, ಯೇಸು ಕ್ರಿಸ್ತರ ಪುನರುತ್ಥಾನ ಸಂದೇಶ ಯಾವುದೇ ಜಾತಿ, ಮತ ಮತ್ತು ಪಂಥಗಳಿಗೆ ಸೀಮಿತವಲ್ಲ ಎಂದು ಸಾರಿದರು.ಸಭೆಯ ಸಭಾಪಾಲನಾ ಸಮಿತಿಯವರು, ಅನೇಕ ಗಣ್ಯರು, ಹಿರಿಯರು ಇದ್ದರು.