ನೆಮ್ಮದಿಯ ಜೀವನ ಸಾಗಿಸಲು ಉತ್ತಮ ಆರೋಗ್ಯ ಅವಶ್ಯ: ಹಿರೇಗೌಡರ

| Published : Feb 02 2025, 01:01 AM IST

ನೆಮ್ಮದಿಯ ಜೀವನ ಸಾಗಿಸಲು ಉತ್ತಮ ಆರೋಗ್ಯ ಅವಶ್ಯ: ಹಿರೇಗೌಡರ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರು ನೀಡಿದ ಸಲಹೆ ತಪ್ಪದೇ ಪಾಲಿಸಬೇಕು. ನಿತ್ಯ ವಾಯು ವಿಹಾರ, ದೇವರ ಪ್ರಾರ್ಥನೆ, ದ್ಯಾನ, ಪ್ರಾಣಾಯಾಮ, ಸಂಗೀತ ಕೇಳುವದು ಮುಂತಾದವುಗಳ ಕಡೆಗೆ ಒಲವು ತೋರಬೇಕು

ಗದಗ: ಪ್ರತಿಯೊಬ್ಬ ವ್ಯಕ್ತಿ ಸುಖ, ಶಾಂತಿ, ನೆಮ್ಮದಿಯ ಜೀವನ ಸಾಗಿಸಬೇಕಾದಲ್ಲಿ ಉತ್ತಮವಾದ ಆರೋಗ್ಯ ಹೊಂದಿರಬೇಕು. ಉತ್ತಮ ಆರೋಗ್ಯಕ್ಕಿಂತ ಬೇರೆ ಸಂಪತ್ತು ಬೇಕಿಲ್ಲ. ಪ್ರತಿಯೊಬ್ಬರೂ ಆರೋಗ್ಯದಿಂದಿದ್ದರೇ ಮಾತ್ರ ಕೌಟುಂಬಿಕ,ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಸೇರಿದಂತೆ ಎಲ್ಲ ಸುಖ ಅನುಭವಿಸಲು ಸಾಧ್ಯ ಎಂದು ಡಾ. ಸಿ.ಬಿ.ಹಿರೇಗೌಡರ ಹೇಳಿದರು.

ಅವರು ನಗರದ ಬಸವೇಶ್ವರ ನಗರದಲ್ಲಿರುವ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದಲ್ಲಿ ಜನೇವರಿಯಲ್ಲಿ ಜನಿಸಿದ ಸಂಘದ ಸದಸ್ಯರ ಜನ್ಮದಿನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಗಮನವಿಡಬೇಕು, ವೈದ್ಯರು ನೀಡಿದ ಸಲಹೆ ತಪ್ಪದೇ ಪಾಲಿಸಬೇಕು. ನಿತ್ಯ ವಾಯು ವಿಹಾರ, ದೇವರ ಪ್ರಾರ್ಥನೆ, ದ್ಯಾನ, ಪ್ರಾಣಾಯಾಮ, ಸಂಗೀತ ಕೇಳುವದು ಮುಂತಾದವುಗಳ ಕಡೆಗೆ ಒಲವು ತೋರಬೇಕು ಎಂದರು.

ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಚ್. ಬೇಲೂರ ವಹಿಸಿ ಮಾತನಾಡಿ, ಸಂಘದಲ್ಲಿ ಪ್ರತಿ ತಿಂಗಳು ಆಯಾ ತಿಂಗಳಲ್ಲಿ ಜನಿಸಿದ ಸದಸ್ಯರ ಜನ್ಮದಿನ ಆಚರಿಸುತ್ತಿರುವುದರೊಂದಿಗೆ ಖ್ಯಾತ ವೈದ್ಯರು, ಸಾಹಿತಿ, ಶ್ರೇಷ್ಠ ಕಲಾವಿದರು, ಧರ್ಮದರ್ಶಿಗಳನ್ನು ಕರೆಯಿಸಿ ವೈದ್ಯಕೀಯ ಸಲಹೆ, ಒಳ್ಳೆಯ ಭಾಷಣ, ಮನರಂಜನೆಯ ಕಾರ್ಯಕ್ರಮ ಹಾಗೂ ಧಾರ್ಮಿಕ ಉಪದೇಶ ನೀಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ನಿವೃತ್ತ ನೌಕರರ ಸಂಘದ ಆಜೀವ ಸದಸ್ಯ ಡಾ.ಸಿ.ಬಿ.ಹಿರೇಗೌಡರ ಅವರ ಜನ್ಮದಿನದ ನಿಮಿತ್ತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಇವರೊಟ್ಟಿಗೆ ಒಟ್ಟು 48 ಜನ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ಎಸ್. ಗುಗ್ಗರಿ, ಎಂ.ಕೆ. ಬಡಿಗೇರ, ವಿ.ಬಿ. ಹಾರೋಗೇರಿ, ವಿ.ಎ. ನರಗುಂದ, ಎಸ್.ಎಸ್. ಲಮಾಣಿ, ಎಫ್.ಬಿ. ಉಮಚಗಿ, ಆರ್.ಜಿ. ಮಹೇಂದ್ರಕರ, ವಿ.ಎ. ನರಗುಂದ, ಆರ್.ಟಿ. ನಾರಾಯಣಪೂರ, ಎನ್.ವಿ.ಸಜ್ಜನರ, ಎಂ.ಎನ್.ಇಮ್ಮಡಿಗೌಡರ, ಪುಷ್ಪಾ ಹಿರೇಮಠ, ಪ್ರಮಿಳಾ ನಂದರಗಿ, ಬಿ.ಡಿ.ಕಿಲಬನವರ ಪರಿಚಯಿಸಿದರು.

ರತ್ನಾ ಗಾರ್ಘಿ ಪ್ರಾರ್ಥಿಸಿದರು. ಬಿ.ಎಸ್.ಸಿದ್ನೇಕೊಪ್ಪ ನಿರೂಪಿಸಿದರು. ಬಿ.ಎಚ್. ಗರಡಿಮನಿ ಸ್ವಾಗತಿಸಿದರು. ಎಂ.ಸಿ. ವಗ್ಗಿ ನಿರೂಪಿಸಿದರು. ಬಿ.ಎಂ. ಬಿಳೆಯಲಿ ವಂದಿಸಿದರು.