ಮಾನಸಿಕ ನೆಮ್ಮದಿಗೆ ಸದೃಢ ಆರೋಗ್ಯ ಮುಖ್ಯ: ಡಾ.ಶಿಲ್ಪಾ ಚಟ್ನಿ

| Published : Oct 29 2024, 12:59 AM IST

ಮಾನಸಿಕ ನೆಮ್ಮದಿಗೆ ಸದೃಢ ಆರೋಗ್ಯ ಮುಖ್ಯ: ಡಾ.ಶಿಲ್ಪಾ ಚಟ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ಮಗುವಿನ ನಂತರ ಮಹಿಳೆ ತಮ್ಮ ಸ್ತನಗಳ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ ಯಾವ ಮಹಿಳೆಯರು ತಪಾಸಣೆಗೆ ಒಳಗಾಗುವುದಿಲ್ಲ

ಕನ್ನಡಪ್ರಭ ವಾರ್ತೆ ಇಳಕಲ್ಲ

ಮಾನಸಿಕ ನೆಮ್ಮದಿಗೆ ಸದೃಢ ಆರೋಗ್ಯ ಅತಿ ಮುಖ್ಯವಾಗಿದೆ ಎಂದು ಹುಬಳ್ಳಿ ಖ್ಯಾತ ವೈದ್ಯರಾದ ಡಾ.ಶಿಲ್ಪಾ ಚಟ್ನಿ ತಿಳಿಸಿದರು.

ಇಳಕಲ್ಲ ನಗರದ ಬಸವ ಪಬ್ಲಿಕ್ ಶಾಲೆಯಲ್ಲಿ ಇಳಕಲ್ಲಿನ ಲಯನ್ಸ್‌ ಸಂಸ್ಥೆ, ಐಎಮ್‌ಐ ಇಳಕಲ್ಲ ಮತ್ತು ನಗರದ ಎಲ್ಲಾ ಮಹಿಳಾ ಸಂಘ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ ಸ್ತನ ಕ್ಯಾನ್ಸರ್‌ ಜಾಗೃತಿ ಅಭಿಯಾನದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮಹಿಳೆ ಆರೋಗ್ಯವಾಗಿದ್ದರೆ ಮನೆ ಮಂದಿ ಆರೋಗ್ಯವಾಗಿರುತ್ತಾರೆ. ಕಾರಣ ಮಹಿಳೆಯು ಮನೆಯ ಪ್ರತಿಯೊಂದು ಕಾರ್ಯ ಮಾಡಿಕೊಂಡು ಹೋಗುತ್ತಾಳೆ. ಅವಳ ಆರೋಗ್ಯದಲ್ಲಿ ಹೆಚ್ಚಕಮ್ಮಿಯಾದರೆ ಎಲ್ಲ ಕಾರ್ಯಗಳು ನಿಂತು ಹೋಗುತ್ತವೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ತನ್ನ ಆರೋಗ್ಯದ ಕಡೆ ಹೆಚ್ಚು ಗಮನ ನೀಡಲು ಸಲಹೆ ನೀಡಿದರು.

ಸ್ತನ ಕ್ಯಾನ್ಸರ್‌ ಬಗ್ಗೆ ತಿಳಿಸದ ಅವರು, ಈ ರೋಗ ಮಹಿಳೆಯರಿಗೆ ಅರಿಯದೆ ಬರುವ ರೋಗವಾಗಿದೆ. ಇದರ ಬಗ್ಗೆ ಸದಾ ಎಚ್ಚರವಿರಬೇಕು. ಎರಡು ಮಗುವಿನ ನಂತರ ಮಹಿಳೆ ತಮ್ಮ ಸ್ತನಗಳ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆದರೆ ಯಾವ ಮಹಿಳೆಯರು ತಪಾಸಣೆಗೆ ಒಳಗಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ಇಳಕಲ್ಲ ಲಯನ್ಸ್‌ ಸಂಸ್ಥೆ ಅದ್ಯಕ್ಷ ಮಹಾಬಳೇಶ ಮರಟದ ವಹಿಸಿದ್ದದರು. ಮುಖ್ಯ ಅತಿಥಿಯಾಗಿ ನಗರದ ಖ್ಯಾತ ವೈದ್ಯರಾದ ಡಾ.ಅರುಣಾ ಅಕ್ಕಿ, ಅತಿಥಿಗಳಾಗಿ ಮಂಜುಳಾ ಬನ್ನಿಗೊಳಮಠ, ರಾಜೇಶ್ವರಿ ಹರಿಹರ, ದೇವಕ್ಕಮ್ಮ ಕುಕನೂರ, ಸುನಿತಾ ಬಸೂದೆ, ಕಲ್ಪನಾ ಕಠಾರೆ, ರೇಖಾ ದಾಲಿಯಾ, ಡಾ.ವಿಠಲ ಶ್ಯಾವಿ ದಂಪತಿ ಆಗಮಿಸಿದ್ದರು.

ಡಾ.ಮಹಾಂತೇಶ ಅಕ್ಕಿ, ಮುರಗೇಶ ಪಾಟೀಲ, ಡಾ.ಸಂತೋಷ ಪೂಜಾರಿ, ಡಾ.ಅನಿತಾ ಅಕ್ಕಿ, ಹಂಪಮ್ಮ ಮರಟದ ಇತರರಿದ್ದರು.