ನನ್ನ ಬಿಟ್ಟು ತೆರಳಿದ ಬಿಜೆಪಿ ಸದಸ್ಯರಿಗೆ ಒಳಿತಾಗಲಿ

| Published : Sep 06 2024, 01:01 AM IST

ನನ್ನ ಬಿಟ್ಟು ತೆರಳಿದ ಬಿಜೆಪಿ ಸದಸ್ಯರಿಗೆ ಒಳಿತಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎನ್. ಮಹೇಶ್ ಮಾತನಾಡಿದರು. ಮಾಜಿ ಶಾಸಕ ಬಾಲರಾಜು, ಚಿಂತು ಪರಮೇಶ್, ಪರಮೇಶ್ವರಯ್ಯ, ಚಂದು, ಜಯರಾಜು ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನನ್ನ ಬಿಟ್ಟು ತೆರಳಿದ ಬಿಜೆಪಿಯ ನಗರಸಭಾ ಸದಸ್ಯರಿಗೆ ಒಳ್ಳೇಯದಾಗಲಿ ಎಂದು ನನ್ನ ಪತ್ನಿ ವಿಜಯಾ ಸಮಾಧಿ ಮುಂದೆ ಪ್ರಾರ್ಥಿಸುವೆ ಎಂದು ಹೇಳುತ್ತಲೆ ಮಾಜಿ ಸಚಿವ ಎನ್ ಮಹೇಶ್ ಭಾವುಕರಾಗಿ ಕಣ್ಣಿರಿಟ್ಟ ಘಟನೆ ಜರುಗಿತು. ಮಾಜಿ ಶಾಸಕ ಎಸ್.ಬಾಲರಾಜು ಅವರ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪತ್ನಿ ನಿಧನದ ದಿನವೇ 7ಮಂದಿ ಸದಸ್ಯರ ಸದಸ್ಯತ್ವ ಅನರ್ಹವಾಯಿತು. ವಿಚಾರ ತಿಳಿಯುತ್ತಿದ್ದಂತೆ ಮಾರನೇ ದಿನ ವಕೀರಲನ್ನು ಭೇಟಿ ಮಾಡಿ ಇವರ ಸದಸ್ವತ ಉಳಿಸಿಕೊಳ್ಳವಲ್ಲಿ ಹೋರಾಟ ನಡೆಸಿದೆ. ಆದರೆ ಹೈಕೋರ್ಟ್ ಹಂತದಲ್ಲೂ ಜಿಲ್ಲಾಧಿಕಾರಿಗಳ ಆದೇಶವನ್ನೆ ಆಧಾರವಾಗಿಟ್ಟುಕೊಂಡು ಆದೇಶ ಪ್ರಕಟಿಸಿದ ಹಿನ್ನೆಲೆಯಲ್ಲಿ 7ಮಂದಿ ಸದಸ್ಯತ್ವ ರದ್ದಾಯಿತು. ಆದರೆ ನಮ್ಮ ಹೋರಾಟದ ಫಲವಾಗಿ ಕೋರ್ಟ್ 7ಮಂದಿ ಅನರ್ಹರು ಸಹ ಮುಂದಿನ ಚುನಾವಣೆ ವೇಳೆ ನಿಲ್ಲಬಹುದೆಂಬ ಆದೇಶದಿಂದ ನನಗೆ ಸಂತಸವಾಯಿತು. ನಂತರ ಉಪಚುನಾವಣೆಯಲ್ಲಿ 7ಮಂದಿಗೂ ಟಿಕೆಟ್ ಕೊಡಿಸುವಲ್ಲಿ ಹೋರಾಟ ನಡೆಸಿ ಸಚಿವರಾಗಿದ್ದ ವಿ.ಸೋಮಣ್ಣ ಹಾಗೂ ವರಿಷ್ಠರ ಸಂಪರ್ಕ ಮಾಡಿದೆ, ಮಾಜಿ ಶಾಸಕ ನಂಜುಂಡಸ್ವಾಮಿ ಅವರ ನಿಷ್ಟುರ ಕಟ್ಟಿಕೊಂಡೆ, ಟಿಕೆಟ್ ಹಂಚಿಕೆ ಪ್ರಕ್ರಿಯೆ ವೇಳೆ ನಂಜುಂಡಸ್ವಾಮಿ ಬೇಸರದಿಂದ ಹೊರನಡೆದರು.

ಬಳಿಕವೂ 7 ಮಂದಿ ಗೆಲುವಿಗೆ ಶ್ರಮ ಹಾಕಿದೆ, 6 ಮಂದಿ ಗೆಲ್ಲುವಲ್ಲಿ ಹಗಲಿರುಳು ಶ್ರಮಿಸಿದೆ. ಆದರೆ ಅವರಾರು ನನ್ನ ಜೊತೆ ಇಲ್ಲ ಎಂದು ಹೇಳುತ್ತಲೆ ಭಾವುಕರಾದರು. ಇಂದು ನನ್ನ ಪತ್ನಿ ತೀರಿಕೊಂಡು ಮೂರನೇ ವರ್ಷದ ನೆನಪು ಈನೆನಪಿನಲ್ಲಿ ನನ್ನ ಜೊತೆಗಿದ್ದ 6ಮಂದಿ ಇಲ್ಲ, ಹಾಗಾಗಿ ಇದೊಂದು ನನಗೆ ಪಾಠವಾಗಿದೆ. ನನಗೆ ದ್ರೋಹ ಮಾಡಿದರನ್ನು ಕ್ಷಮಿಸಿ ಎಂದು ನನ್ನ ಪತ್ನಿ ಸಮಾಧಿ ಮುಂದೆ ಪ್ರಾರ್ಥಿಸುವೆ ಎಂದು ಹೇಳುತ್ತಲೆ ಕಣ್ಣೀರಿಟ್ಟರು.

ಇಂದು ವಿಪ್ ನೀಡಿ ಉಪಾಧ್ಯಕ್ಷ ಸ್ಥಾನಕ್ಕೆ ಸಹಿ ಹಾಕುವಂತೆ ಸದಸ್ಯರ ಸಭೆ ನಡೆಸಿ ಸೂಚಿಸಲಾಗಿತ್ತು, ಸಹಿ ಹಾಕುವುದಾಗಿ ಹೇಳಿದವರ್ಯಾರು ಬರಲಿಲ್ಲ, ಹಾಗಾಗಿ ಸೂಚಕರು, ಅನುಮೋದಕರಿಲ್ಲದೆ ನಾಮಪತ್ರ ಸಲ್ಲಿಕೆಗೆ ಅವಕಾಶವಾಗಲಿಲ್ಲ, ಇಂತಹ ಸನ್ನಿವೇಶ ಸೃಷ್ಟಿಸಿ ನನ್ನಿಂದ ದೂರಾದ ಅವರೆಲ್ಲರಿಗೂ ಶುಭವಾಗಲಿ ಎಂದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ಸಿಎಂ ಪರಮೇಶ್ವರಯ್ಯ, ಜಯರಾಜು, ಕೆ.ಕೆ.ಮೂರ್ತಿ ಸುಂದ್ರಪ್ಪ, ಚಂದ್ರಶೇಖರ್, ಚಿಂತು ಪರಮೇಶ್ ಇನ್ನಿತರರಿದ್ದರು.