ಸಾರಾಂಶ
ನಮ್ಮ ಗುರು ಹಿರಿಯರು ದೇಶ ಹಾಗೂ ಸಮಾಜಕ್ಕೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ ಎಂದು ಪತ್ರಿವನ ಮಠದ ಗುರು ಸಿದ್ದವೀರ ಶಿವಾಚಾರ್ಯ ಶಿವಯೋಗಿ ಶ್ರೀಗಳು ಹೇಳಿದರು.
ನರಗುಂದ: ನಮ್ಮ ಗುರು ಹಿರಿಯರು ದೇಶ ಹಾಗೂ ಸಮಾಜಕ್ಕೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ ಎಂದು ಪತ್ರಿವನ ಮಠದ ಗುರು ಸಿದ್ದವೀರ ಶಿವಾಚಾರ್ಯ ಶಿವಯೋಗಿ ಶ್ರೀಗಳು ಹೇಳಿದರು.
ತಾಲೂಕಿನ ಹುಣಿಸಿಕಟ್ಟಿ ಗ್ರಾಪಂ ವ್ಯಾಪ್ತಿಯ ಜಗಾಪುರ ಗ್ರಾಮದಲ್ಲಿ ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎನ್ಎಸ್ಎಸ್ ಘಟಕ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ -ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜತೆಗೆ ಗ್ರಾಮ ಸ್ವಚ್ಛತೆಗೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಎಂ.ಇ. ವಿಶ್ವಕರ್ಮ ಮಾತನಾಡಿ, ಗ್ರಾಮಸ್ಥರು ಎನ್.ಎಸ್.ಎಸ್. ಶಿಬಿರಕ್ಕೆ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎನ್ಎಸ್ಎಸ್ ಘಟಕದ ವತಿಯಿಂದ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಶಂಕ್ರಯ್ಯ ಮಠದ, ಪ್ರಾಚಾರ್ಯ ಆರ್.ಬಿ. ಪಾಟೀಲ್. ಗ್ರಾಪಂ ಅಧ್ಯಕ್ಷೆ ಶೋಭಾ ಮುಳ್ಳೂರ, ಎಂ.ಇ.ವಿಶ್ವಕರ್ಮ, ಮಾಜಿ ತಾಪಂ ಸದಸ್ಯ ಮಲ್ಲಪ್ಪ ಮೇಟಿ, ಬಿಜೆಪಿ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ್, ಮಾಜಿ ತಾಪಂ ಸದಸ್ಯ ಹನಮ್ಮವ್ವ ಮರೆಣ್ಣವರ, ಎಂ.ಬಿ. ಪಾಟೀಲ, ಶಾಂತವ್ವ ದೇವಕಿ, ಶಿವನಗೌಡ ಪಾಟೀಲ, ಗ್ರಾಮದ ಹಿರಿಯರು ಮತ್ತು ಯುವಕರು ಹಾಗೂ ಎನ್ಎಸ್ಎಸ್ ಘಟಕದ ಎಲ್ಲ ಪ್ರಶಿಕ್ಷಣಾರ್ಥಿಗಳು ಇದ್ದರು. ಜ್ಯೋತಿ ಜಮದಾರ ಸ್ವಾಗತಿಸಿದರು, ವೀರೇಶ್ ಹಿರೇಮಠ ನಿರೂಪಿಸಿದರು. ರವಿ ಗದಗಿನ ವಂದಿಸಿದರು.