ರಾವಂದೂರು ಹೋಬಳಿಯಾದ್ಯಂತ ಉತ್ತಮ ಮಳೆ; ಕೃಷಿ ಚಟುವಟಿಕೆಗಳಿಗೆ ಮುಂದಾದ ರೈತರು

| Published : May 24 2024, 01:01 AM IST

ರಾವಂದೂರು ಹೋಬಳಿಯಾದ್ಯಂತ ಉತ್ತಮ ಮಳೆ; ಕೃಷಿ ಚಟುವಟಿಕೆಗಳಿಗೆ ಮುಂದಾದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ರಾವಂದೂರು, ದೊಡ್ಡ ಬೇಲಾಳು, ಕಂಪಲಾಪುರ, ಹಿಟ್ನೆ ಹೆಬ್ಬಾಗಿಲು, ರಾಮನಾಥತುಂಗ ಸೇರಿದಂತೆ ಆನೇಕ ಗ್ರಾಮಗಳಲ್ಲಿ ಸತತವಾಗಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದ ತಂಬಾಕು ರೈತನು ಸಂತಸ ವ್ಯಕ್ತಪಡಿಸುತ್ತಾ ಮುಂಗಾರಿನ ಸಿಂಚನದೊಂದಿಗೆ ತಂಬಾಕು ನಾಟಿ ಚುರುಕು ಮಾಡಿದ್ದಾನೆ. ಆದರೆ ತಾಲೂಕಿನ ವಿವಿಧಡೆ ಅತಿ ಹೆಚ್ಚು ಮಳೆಯಾಗಿದ್ದು, ನಾಟಿ ಮಾಡಿದ ಹೊಗೆ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿ, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮುಕುಂದ ರಾವಂದೂರು

ಕನ್ನಡಪ್ರಭ ವಾರ್ತೆ ರಾವಂದೂರು

ಪಿರಿಯಾಪಟ್ಟಣ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ತಾಲೂಕಿನ ಪ್ರಮುಖ ಬೆಳೆಯಾದ ತಂಬಾಕು ನಾಟಿ ಮಾಡಲು ರೈತರು ಮುಂದಾಗಿದ್ದಾರೆ. ವಾಡಿಕೆಯಂತೆ ಏಪ್ರಿಲ್ ತಿಂಗಳ ಕೊನೆಯ ದಿನಗಳಲ್ಲಿ ಭರಣಿ ಮಳೆ ಹುಟ್ಟುತ್ತಲೇ ತಂಬಾಕು ರೈತರು ತಮ್ಮ ಕೃಷಿ ಚಟುವಟಿಕೆಗಳತ್ತ ಮುಖ ಮಾಡುತ್ತಿದ್ದುರು, ಆದರೆ ಈ ಬಾರಿ ಬರಗಾಲದಿಂದಾಗಿ ಭರಣಿ ಮಳೆ ರೈತರನ್ನು ಚಿಂತೆಗೆ ದೂಡಿತ್ತು, ಕೃತಿಕಾ ಮಳೆಯ ಅಬ್ಬರದಿಂದಾಗಿ ರೈತರ ಮುಖದಲ್ಲಿ ಸಂತಸ ಮನೆ ಮಾಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳಾದ ರಾವಂದೂರು, ದೊಡ್ಡ ಬೇಲಾಳು, ಕಂಪಲಾಪುರ, ಹಿಟ್ನೆ ಹೆಬ್ಬಾಗಿಲು, ರಾಮನಾಥತುಂಗ ಸೇರಿದಂತೆ ಆನೇಕ ಗ್ರಾಮಗಳಲ್ಲಿ ಸತತವಾಗಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದ ತಂಬಾಕು ರೈತನು ಸಂತಸ ವ್ಯಕ್ತಪಡಿಸುತ್ತಾ ಮುಂಗಾರಿನ ಸಿಂಚನದೊಂದಿಗೆ ತಂಬಾಕು ನಾಟಿ ಚುರುಕು ಮಾಡಿದ್ದಾನೆ.

ಆದರೆ ತಾಲೂಕಿನ ವಿವಿಧಡೆ ಅತಿ ಹೆಚ್ಚು ಮಳೆಯಾಗಿದ್ದು, ನಾಟಿ ಮಾಡಿದ ಹೊಗೆ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿ, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾಣಿಜ್ಯ ಬೆಳೆ ತಂಬಾಕು ಪೂರ್ವ ಮುಂಗಾರು ವರ್ಷುಧಾರೆ ಸಕಾಲಕ್ಕೆ ಸುರಿಯದಿದ್ದರಿಂದ ಈ ಬಾರಿ ಬಹುತೇಕ ಬೆಳೆಗಾರರಿಗೆ ಮಳೆಯಾಶ್ರಿತ ಬೆಳೆಯಾದ ತಂಬಾಕಿನ ನಾಟಿಗೆ ಅವಕಾಶ ಸಿಕ್ಕಿರಲಿಲ್ಲ, ಆದರೆ ಕೃತಿಕ ಮಳೆಯ ಸಿಂಚನದಿಂದ ಸಂತಸಗೊಂಡಿರುವ ತಂಬಾಕು ರೈತ ಶೇ. 80ರಷ್ಟು ನಾಟಿ ಕಾರ್ಯ ಪೂರ್ಣಗೊಳಿಸಿದ್ದಾನೆ.

ದುಬಾರಿಯಾದ ಕೂಲಿಗಾರರು:

ತಂಬಾಕು ನಾಟಿ ಮಾಡಲು ಕೆಲಸಗಾರರು ಕೂಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೂರು ಪಟ್ಟು ಹೆಚ್ಚಳವಾಗಿದ್ದು, ಹೀಗೆ ಮುಂದುವರೆದರೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಂಬಾಕು ಬೆಳೆ ಕೈಬಿಡಬೇಕಾಗುತ್ತದೆ ಎಂದು ತಂಬಾಕು ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ಬೆಳಗ್ಗೆ 8.30 ರಿಂದ ಸಂಜೆ 5 ರವರೆಗೆ ದಿನಕ್ಕೆ 900 ರಿಂದ 1,300 ರು. ಗಳನ್ನು ಕೇಳುತ್ತಾರೆ, ಮಳೆ ಬಿದ್ದರೆ ಪರವಾಗಿಲ್ಲ, ಇಲ್ಲದಿದ್ದರೆ ಬಹಳ ನಷ್ಟವಾಗುತ್ತದೆ. ಪುರುಷರಿಗೆ ಒಂದು ಸಾವಿರದಿಂದ 1,500 ರು.ಗಳು ವ್ಯಯವಾಗುತ್ತಿದೆ.

ತಂಬಾಕು ಬೆಲೆ ಹೆಚ್ಚಳದಿಂದ ತಂಬಾಕು ಕೃಷಿಗೆ ಸಂಕಷ್ಟ:

ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ತಂಬಾಕುವಿಗೆ 400 ನೀಡುತ್ತಿದ್ದು, ನಮಗೆ ದಿನಕ್ಕೆ 800 ಹಣ ನೀಡಲು ಸಾಧ್ಯವಿಲ್ಲವೇ ನಾವು ಸಹ ಜೀವನ ಮಾಡಬೇಕೆಂದು ಕೆಲಸಗಾರರು ಪ್ರಶ್ನಿಸುತ್ತಿದ್ದಾರೆ. ಇದರಿಂದ ತಂಬಾಕು ಉತ್ಪಾದನೆ ವೆಚ್ಚು ಹೆಚ್ಚಾಗುತ್ತಿದ್ದು ಕೆಲಸಗಾರರೊಂದಿಗೆ ಹೆಣಗುವಂತಾಗಿದೆ. ತಂಬಾಕು ಬೆಲೆ ಹೆಚ್ಚಳವಾದರು ಇದರ ಲಾಭವೂ ಕಚ್ಚಾ ವಸ್ತುಗಳ ಖರೀದಿಯಲ್ಲಿ ವ್ಯಯವಾಗುತ್ತಿದೆ ಎನ್ನುತ್ತಿದ್ದಾರೆ ತಂಬಾಕು ಕೃಷಿಕರು.