ಕನಕಗಿರಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಉತ್ತಮ ಸ್ಪಂದನೆ

| Published : Feb 11 2024, 01:48 AM IST

ಸಾರಾಂಶ

ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಪಟಾಕಿಗಳನ್ನು ಸಿಡಿಸುವ ಮೂಲಕ ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪೂಜೆ, ಪೂರ್ಣ ಕುಂಭ ಹಾಗೂ ಕಳಶ ಹಿಡಿದ ಮಹಿಳೆಯರಿಂದ ಜಾಥಕ್ಕೆ ಸ್ವಾಗತ, ಡೊಳ್ಳು ಕುಣಿತ, ಕ್ಯಾಂಡಲ್ ಜಾಥಾ, ಬೈಕ್ ರ‍್ಯಾಲಿ, ಸೈಕಲ್ ರ‍್ಯಾಲಿ ಹೀಗೆ ಹಲವು ಬಗೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅಭೂತ ಪೂರ್ವಕ ಬೆಂಬಲ ನೀಡಿದರು.

ಕೊಪ್ಪಳ: ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ ಮುಂದುವರೆದ ಹಿನ್ನಲೆಯಲ್ಲಿ ಫೆಬ್ರವರಿ 10ರಂದು ಕನಕಗಿರಿ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಮಾರ್ಗದಲ್ಲಿ ಸಂಚರಿಸಿತು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ, ತಾಲೂಕು ಪಂಚಾಯತ್ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಜಿಲ್ಲೆಯಲ್ಲಿ ಜನವರಿ 26 ರಿಂದ ಆರಂಭಗೊಂಡ `ಸಂವಿಧಾನ ಜಾಗೃತಿ ಜಾಥಾ’ ಕಾರ್ಯಕ್ರಮದ ಮೂಲಕ ಸಂವಿಧಾನ ಮೌಲ್ಯಗಳ ಸ್ಮರಣೆ ಮಾಡಲಾಯಿತು.ಜಿಲ್ಲೆಯ ವಿವಿಧೆಡೆ ಸಂವಿಧಾನ ಜಾಗೃತಿ ಜಾಥಾ:

ಕೊಪ್ಪಳ ತಾಲ್ಲೂಕಿನ ಕೊಪ್ಪಳ ನಗರದಿಂದ ಆರಂಭವಾಗಿ, ಬಹದ್ದೂರಬಂಡಿ, ಕೋಳೂರು, ಮಾದಿನೂರ, ಹಲಗೇರಿ ನಂತರ ಹಿರೇಸಿಂಧೋಗಿ, ಕವಲೂರು, ಅಳವಂಡಿ, ಹಟ್ಟಿ, ಬೆಟಗೇರಿ ನಂತರ ಬಿಸರಳ್ಳಿ, ಬೋಚನಹಳ್ಳಿ, ಮತ್ತೂರು, ಕಾತರಕಿ ಗುಡ್ಲಾನೂರ, ಗೊಂಡಬಾಳ, ಕುಣಿಕೇರಿ, ಹಾಲವರ್ತಿ, ಹಿರೇಬಗನಾಳ, ಗಿಣಿಗೇರಾ, ಬೇವಿನಳ್ಳಿ, ಕಲ್‌ತಾವರಗೇರಾ, ಗುಳದಳ್ಳಿ, ವಣಬಳ್ಳಾರಿ, ಬೂದಗುಂಪಾ, ಇಂದರಗಿ ನಂತರ ಹೊಸಳ್ಳಿ, ಮುನಿರಾಬಾದ್ ಡ್ಯಾಂ, ಹುಲಗಿ, ಹಿಟ್ನಾಳ, ಬಂಡಿ ಹರ್ಲಾಪುರ, ಶಿವಪುರ, ಅಗಳಕೇರಾ, ಓಜನಹಳ್ಳಿ, ಕಿನ್ನಾಳ, ಕಲಕೇರಾ, ಲೇಬಗೇರಿ, ಇರಕಲ್‌ಗಡಾ, ಹಾಸಗಲ್, ಚಿಕ್ಕಬೊಮ್ಮನಾಳ, ಕುಕನೂರು ತಾಲ್ಲೂಕಿನ ಭಾಣಾಪುರ, ತಳಕಲ್‌ ಬನ್ನಿಕೊಪ್ಪ, ಇಟಗಿ, ಮಂಡಲಗೇರಿ, ಯರಿಹಂಚಿನಾಳ ನಂತರ ಮಸಬಹಂಚಿನಾಳ, ಕುಕನೂರು ಪಟ್ಟಣ, ಬೆಣಕಲ್, ಬಳಿಗೇರಿ, ರಾಜೂರ, ಶಿರೂರ ನಂತರ ಹಿರೇಬಿಡನಾಳ, ಕುದರಿಮೋತಿ, ಮಂಗಳೂರು, ನೆಲಜೇರಿ, ಯಲಬುರ್ಗಾ ತಾಲ್ಲೂಕಿನ ಸಂಗನಾಳ, ಯಲಬುರ್ಗಾ ಪಟ್ಟಣ, ಕಲ್ಲೂರ, ಮುಧೋಳ, ಕರಮುಡಿ, ಹಿರೇಮ್ಯಾಗೇರಿ, ಸಂಕನೂರ ನಂತರ ಬಳೂಟಗಿ, ಬಂಡಿ, ತುಮ್ಮರಗುದ್ದಿ, ವಜ್ರಬಂಡಿ, ಗೆದ್ದಿಗೇರಿ ನಂತರ ಮುರಡಿ, ಚಿಕ್ಕಮ್ಯಾಗೇರಿ, ವಣಗೇರಿ, ಬೇವೂರ, ಗುನ್ನಾಳ, ಗಾಣದಾಳ, ತಾಳಕೇರಿ, ಬೂದೂರ, ಮಾಟಲದಿನ್ನಿ, ಹಿರೇವಂಕಲಕುಂಟಾ, ಹಿರೇಅರಳಿಹಳ್ಳಿ, ಕನಕಗಿರಿ ತಾಲ್ಲೂಕಿನ ಮುಸಲಾಪುರ, ಚಿಕ್ಕಮಾದಿನಾಳ, ಬಸರಿಗಾಳ, ಕನಕಗಿರಿ ಪಟ್ಟಣ, ಗೌರಿಪುರ, ಹುಲಿಹೈದರ ಗ್ರಾಮಗಳಲ್ಲಿ ಅದ್ದೂರಿಯಾಗಿ ನಡಿಯಿತು. ಜನರಿಗೆ ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಸಂವಿಧಾನ ಪೀಠಿಕೆ ಬೋಧನೆ ಮಾಡಲಾಯಿತು.ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಪಟಾಕಿಗಳನ್ನು ಸಿಡಿಸುವ ಮೂಲಕ ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪೂಜೆ, ಪೂರ್ಣ ಕುಂಭ ಹಾಗೂ ಕಳಶ ಹಿಡಿದ ಮಹಿಳೆಯರಿಂದ ಜಾಥಕ್ಕೆ ಸ್ವಾಗತ, ಡೊಳ್ಳು ಕುಣಿತ, ಕ್ಯಾಂಡಲ್ ಜಾಥಾ, ಬೈಕ್ ರ‍್ಯಾಲಿ, ಸೈಕಲ್ ರ‍್ಯಾಲಿ ಹೀಗೆ ಹಲವು ಬಗೆಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸಾರ್ವಜನಿಕರು ಅಭೂತ ಪೂರ್ವಕ ಬೆಂಬಲ ನೀಡಿದರು.

ಅಲ್ಲದೆ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಜನಮನ ಸೆಳೆಯುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.