ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಬಹುತೇಕ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.ಕಿಕ್ಕೇರಿ ಪ್ರೌಢ ಶಾಲೆಯಲ್ಲಿ 121 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 67 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.55.37 ಫಲಿತಾಂಶ ಲಭಿಸಿದೆ. ಅತ್ಯುನ್ನತ 5, ಪ್ರಥಮ 36, ದ್ವಿತೀಯ 36, ತೃತೀಯ ದರ್ಜೆಯಲ್ಲಿ 18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಮಮತಾ (590), ಗಾನವಿ(582), ಅಮೃತ(575), ಕೀರ್ತನಾ(572), ಭವಾನಿ(551) ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.ಸರ್ಕಾರಿ ಬಾಲಕಿಯರ ಪ್ರೌಢಶಾಲೆ25 ಮಕ್ಕಳು ಪರೀಕ್ಷೆಗೆ ಹಾಜರಾಗಿ 11 ಮಕ್ಕಳು ತೇರ್ಗಡೆಯಾಗಿ ಶೇ.೨೫ ಫಲಿತಾಂಶ ಬಂದಿದೆ. ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 26 ಮಕ್ಕಳು ಪರೀಕ್ಷೆ ಬರೆದು 15ಮಕ್ಕಳು ತೇರ್ಗಡೆ ಹೊಂದಿದ್ದು ಶಾಲೆಗೆ ಶೇ. 57.8 ಫಲಿತಾಂಶ ಲಭಿಸಿದೆ.
ಕೃಷ್ಣಾಪುರದ ಅಲೆಮಾರಿಜನಾಂಗ, ಹಿಂದುಳಿದ ಜನಾಂಗದ ಸರ್ಕಾರಿ ಪೌಢಶಾಲೆಗೆ ಶೇ.52ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ 25 ವಿದ್ಯಾರ್ಥಿಗಳಲ್ಲಿ 13 ಮಕ್ಕಳು ಉತ್ತೀರ್ಣರಾಗಿದ್ದಾರೆ.ಮಾದಾಪುರ ಸರ್ಕಾರಿ ಪ್ರೌಢಶಾಲೆಗೆ ಶೇ.50 ಫಲಿತಾಂಶ ಲಭಿಸಿದ್ದು ಪರೀಕ್ಷೆಗೆ ಹಾಜರಾದ 17 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳ ತೇರ್ಗಡೆಯಾಗಿದ್ದಾರೆ. ಉನ್ನತ(1), ಪ್ರಥಮ(4), ದ್ವಿತೀಯ(2) ದರ್ಜೆ ಪಡೆದಿದ್ದಾರೆ.
ಮಾದಾಪುರ ಮುರಾರ್ಜಿ ವಸತಿ ಶಾಲೆ 49 ಮಕ್ಕಳು ಪರೀಕ್ಷೆಗೆ ಹಾಜರಾಗಿ 45 ಮಕ್ಕಳು ತೇರ್ಗಡೆಯಾಗಿ ಶೇ.91.83 ರಷ್ಟು ಫಲಿತಾಂಶ ಬಂದಿದೆ. ಉನ್ನತದರ್ಜೆ(11), ಪ್ರಥಮ(27), ದ್ವಿತೀಯ(6), ತೃತೀಯ(1) ದರ್ಜೆ ಹೊಂದಿದ್ದಾರೆ. ಆರ್.ಕುಮುದಾ(607), ಜಿ.ಜೆ. ಅಪೇಕ್ಷಾ(599) ಅತೀ ಹೆಚ್ಚು ಅಂಕಪಡೆದು ಶಾಲೆ ಟಾಫರ್ ಆಗಿದ್ದಾರೆ. ಹಿಂದಿಯಲ್ಲಿ ಆರ್.ಕುಮುದಾ ನೂರಕ್ಕೆ ನೂರು ಅಂಕ ಪಡೆದಿದ್ದಾರೆ.6 ರಂದು ಮಹಿಳಾ ಸರ್ಕಾರಿ ಕಾಲೇಜಿನ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಮಂಡ್ಯಕಾಲೇಜು ಶಿಕ್ಷಣ ಇಲಾಖೆಯಿಂದ ಮಹಿಳಾ ಸರ್ಕಾರಿ ಕಾಲೇಜಿ (ಸ್ವಾಯತ್ತ)ನಲ್ಲಿ 2024-2025ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು 2025ರ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಮೇ 6 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ವನರಂಗದಲ್ಲಿ ಆಯೋಜಿಸಲಾಗಿದೆ.
ಉದ್ಘಾಟನೆಯನ್ನು ಶಾಸಕ ಪಿ.ರವಿಕುಮಾರ್ ನೆರವೇರಿಸುವರು. ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ್ ಕೆ.ಪ್ರಭು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನಟ ಮಂಡ್ಯ ರಮೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ನಟಿ ಶರ್ಮಿಳಾ ಮಾಂಡ್ರೆ ಆಗಮಿಸುವರು.ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಚ್.ಎಸ್.ನಿಂಗರಾಜು, ವೇದಿಕೆಯ ಖಜಾಂಚಿ ಡಾ.ಕೆ.ಎಂ.ಮಂಗಳಮ್ಮ, ಕ್ರೀಡಾ ಸಂಚಾಲಕ ಕೆ.ಆರ್.ಲೋಕೇಶ್, ಸ್ನಾತಕ ಮತ್ತು ಸ್ನಾತಕೊತ್ತರ ವಿಭಾಗದ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ.ಎಚ್.ಎಸ್.ಶಿವರಾಜು, ಎಂ.ಮಾದೇಗೌಡ ಇತರರು ಭಾಗವಹಿಸುವರು.