ನಿರಂತರ ಶ್ರಮದಿಂದ ಮಾತ್ರ ಉತ್ತಮ ಪ್ರತಿಫಲ

| Published : Jul 16 2024, 12:44 AM IST

ಸಾರಾಂಶ

ಒಮ್ಮೆ ವಕೀಲರು ವೃತ್ತಿ ಆರಂಭಿಸಬೇಕಾದರೆ ೧೦ ವರ್ಷಗಳ ಕಾಲ ಕತ್ತೆಯಂತೆ ಕೆಲಸ ಮಾಡಿದ ನಂತರ ಕುದರೆಯಂತೆ ಓಡಲು ಸಾಧ್ಯವಾಗುತ್ತದೆ, ನಂತರ ನಿಮಗೆ ವಿಪುಲ ಅವಕಾಶಗಳು ಸಿಗಲಿವೆ, ನಿರಂತರವಾಗಿ ಅಧ್ಯಯನ ಮಾಡಿದಾಗ ಮಾತ್ರ ಫಲಿತಾಂಶ ನಿಮ್ಮ ಪರವಾಗಿ ಬರಲಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್ಕಾನೂನು ಪದವಿ ಪಡೆದಿರುವ ವಿದ್ಯಾರ್ಥಿಗಳು ಓದುವುದಕ್ಕೂ ಹಾಗೂ ಅದೇ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸುವುದರ ಮಧ್ಯೆ ವ್ಯತ್ಯಾಸವಿದೆ, ನಾವು ವೃತ್ತಿ ಜೀವನಕ್ಕೆ ಧುಮುಕಿದ ಮೇಲೆಯೇ ಅದರ ಅಳ ಆಗಲ ಗೊತ್ತಾಗುತ್ತದೆ. ವಕೀಲ ವೃತ್ತಿ ಕಷ್ಟಕರ ಎನಿಸಬಹುದು ಅಥವಾ ಸವಾಲುಗಳು ಕಗ್ಗಂಟಾಗಬಹುದು, ಎಲ್ಲವನ್ನು ಮೆಟ್ಟಿ ನಿಂತಾಗಲೇ ನಿಮಗೆ ಅದರ ಫಲ ಸಿಗಲಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಇಂದ್ರಶ್ ತಿಳಿಸಿದರು.ನಗರದ ಕೆಂಗಲ್ ಹನುಮಂತಯ್ಯ ಕಾನೂನು ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ೪೨ ನೇ ವರ್ಷದ ಕಾನೂನು ಪದವಿ ಪ್ರದಾನ ಘಟಿಕ್ಸೋವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನು ಅಭ್ಯಾಸವು ಅನೇಕ ಕೌಶಲ್ಯಗಳನ್ನು ಅಭಿವೃದ್ದಿಪಡಿಸುತ್ತದೆ, ಅದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ಅನೇಕ ವೃತ್ತಿ ಅವಕಾಶಗಳು ವಿದ್ಯಾರ್ಥಿಗಳಿಗೆ ಸಿಗಲಿದೆ. ರಾಜ್ಯದಲ್ಲಿ ಕೋಲಾರ ಜಿಲ್ಲೆಯ ವಕೀಲರು ಹೆಚ್ಚು ಮಂದಿ ಉಚ್ಚ ನ್ಯಾಯಾಲಯದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ, ಅಲ್ಲದೆ ಜಿಲ್ಲೆಯಲ್ಲಿ ಅನೇಕ ಮಂದಿ ವಕೀಲಕೆಯಿಂದ ಉನ್ನತ ಸ್ಥಾನವನ್ನು ಅಲಂಕರಿದ್ದಾರೆ ಎಂದರು.

ನಿರಂತರ ಶ್ರಮದಿಂದ ಪ್ರತಿಫಲ ಒಮ್ಮೆ ವಕೀಲರು ವೃತ್ತಿ ಆರಂಭಿಸಬೇಕಾದರೆ ೧೦ ವರ್ಷಗಳ ಕಾಲ ಕತ್ತೆಯಂತೆ ಕೆಲಸ ಮಾಡಿದ ನಂತರ ಕುದರೆಯಂತೆ ಓಡಲು ಸಾಧ್ಯವಾಗುತ್ತದೆ, ನಂತರ ನಿಮಗೆ ವಿಪುಲ ಅವಕಾಶಗಳು ಸಿಗಲಿವೆ, ಹಿರಿಯ ವಕೀಲರ ಸಲಹೆ ಪಡೆಯುವುದರಲ್ಲಿ ತಪ್ಪಿಲ್ಲ. ನೀವು ನಿರಂತರವಾಗಿ ಅಧ್ಯಯನ ಮಾಡಿದಾಗ ಮಾತ್ರ ಫಲಿತಾಂಶ ನಿಮ್ಮ ಪರವಾಗಿ ಬರಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಪ್ರಾಂಶುಪಾಲ ಮ್ಯಾಥ್ಯಸ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ದೇಶಧ ನಾನಾ ರಾಜ್ಯಗಳ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ವಕೀಲ ವೃತ್ತಿಯನ್ನು ಆರಂಬಿಸಿ ಸಮಾಜಕ್ಕೆ ನಿಮ್ಮದೆ ಆದ ಕೊಡುಗೆಯನ್ನು ನೀಡಿ ಎಂದರು. ಈ ಸಂದರ್ಭದಲ್ಲಿ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ, ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ, ಉಪಾಧ್ಯಕ್ಷರಾದ ಮಣಿವಣ್ಣನ್, ಕಾಲೇಜಿನ ಟ್ರಸ್ಟಿಗಳಾದ, ವೆಂಕಟಕೃಷ್ಣ, ಕೃಷ್ಣಕುಮಾರ್, ಪ್ರಾಂಶುಪಾಲ ಕೇಶವಮೂರ್ತಿ, ಸೈಯದ್ ಅರಿಫ್, ಕ್ವಾಟೀನಿಸ್ ಉಪಸ್ಥಿತರಿದ್ದರು.