ಸಾರಾಂಶ
ಮಿಲ್ಲತ್ ಸೌಹಾರ್ದ ಸಹಕಾರಿ ಸಂಘ ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ಸುಧಾರಣೆ ಜತೆಗೆ ಸಂಘ ಅಲ್ಪಾವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ.
ಅಳ್ನಾವರ:
ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ಸುಧಾರಣೆ ಜತೆಗೆ ಸಂಘ ಅಲ್ಪಾವಧಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಮಿಲ್ಲತ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಆರ್.ಎಂ. ಬಾಗವಾನ ಹೇಳಿದರು.ಪಟ್ಟಣದ ಆಝಾದ್ ರಸ್ತೆಯಲ್ಲಿರುವ ಮಿಲ್ಲತ್ ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ೧೭ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂಘ ಉದಯಿಸಿ ೧೭ ವರ್ಷವಾಗಿದೆ. ತಾಲೂಕಿನ ಸಣ್ಣ ಮತ್ತು ಉದ್ಯೋಗಸ್ಥರಿಗೆ ಸಾಲ ಸೌಲಭ್ಯ ನೀಡಿ ಅನುಕೂಲ ಕಲ್ಪಿಸಲಾಗಿದೆ. ಜತೆಗೆ ಪಟ್ಟಣದ ಆರ್ಥಿಕತೆಯ ಬೆಳವಣಿಗೆಯಲ್ಲಿ ನಮ್ಮ ಸಂಘ ತನ್ನದೆ ಆದ ಕೊಡುಗೆ ನೀಡುತ್ತಿದ್ದು ಇನ್ನೂ ಹೆಚ್ಚಿನ ಗುಣಮಟ್ಟದ ಸೇವೆ ನೀಡಲು ಆದ್ಯತೆ ನೀಡಲಾಗುತ್ತಿದೆ. ಗ್ರಾಹಕರ ಸಹಕಾರದ ಬಲದಿಂದ ಗುರಿ ಮೀರಿ ಷೇರು ಹಣ, ಠೇವು ಸಂಗ್ರಹಿಸಲಾಗಿದೆ. ಸಂಘದ ಸಂಪನ್ಮೂಲ ಕ್ರೂಡೀಕರಣಕ್ಕೆ ಒಲವು ತೋರಲಾಗಿದೆ. ಆರ್ಥಿಕ ಚಟುವಟಿಕೆ ಜತೆ ಸಾಮಾಜಿಕ ಕಾರ್ಯದಲ್ಲೂ ಸಂಘ ಸದಾ ಮುಂದೆ ಇದೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಫಯಾಜ್‌ಅಹ್ಮದ್ ಅಂಕಲಗಿ ಹಿಂದಿನ ವಾರ್ಷಿಕ ಸಭೆಯ ಠರಾವು ಓದಿದರು. ಶಾನೂರ ಇಮಾಮಸಾಬ್ ಕಂಬಳಿ ವಾರ್ಷಿಕ ವರದಿ ಮಂಡಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ನಡೆಯಿತು.ಈ ವೇಳೆ ಉಪಾಧ್ಯಕ್ಷ ಎಂ.ಎಂ. ತೇಗೂರ, ನಿರ್ದೇಶಕರಾದ ಹಸನಅಲಿ ಶೇಖ, ಎ.ಎ. ಬಾಗೇವಾಡಿ, ಎಂ.ಕೆ. ಬಾಗವಾನ, ಎಂ.ಎಂ. ಖಾಜಿ, ಮುಕ್ತುಂ ಹುದ್ಲಿ, ಬಿ.ಡಿ. ದಾಸ್ತಿಕೊಪ್ಪ ಇದ್ದರು.