ಉತ್ತಮ ಸೇವೆಯೇ ಬ್ಯಾಂಕ್ ಅಭಿವೃದ್ಧಿಗೆ ಸಹಕಾರಿ: ಜವಳಿ ಉದ್ಯಮಿ ಸತೀಶ ಹಜಾರೆ

| Published : Jun 10 2024, 12:45 AM IST

ಉತ್ತಮ ಸೇವೆಯೇ ಬ್ಯಾಂಕ್ ಅಭಿವೃದ್ಧಿಗೆ ಸಹಕಾರಿ: ಜವಳಿ ಉದ್ಯಮಿ ಸತೀಶ ಹಜಾರೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಬ್ಯಾಂಕ್‌ಗಳು ಹಾಗೂ ಗ್ರಾಹಕರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ರಬಕವಿ ಜವಳಿ ಉದ್ಯಮಿ ಸತೀಶ ಹಜಾರೆ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಬ್ಯಾಂಕ್‌ಗಳು ಹಾಗೂ ಗ್ರಾಹಕರು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ರಬಕವಿ ಜವಳಿ ಉದ್ಯಮಿ ಸತೀಶ ಹಜಾರೆ ಹೇಳಿದರು.

ಭಾನುವಾರ ಬೆಳಗ್ಗೆ ಬನಹಟ್ಟಿ ಕರ್ಣಾಟಕ ಬ್ಯಾಂಕ್‌ನ ವಿನೂತನ ಮಾದರಿಯ ಎಟಿಎಂ ಹಾಗೂ ಮಾನವ ರಹಿತ ಹಣ ಭರಣಾ ಮಷಿನ್ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕವಾಗಿ ಸೇವೆ ಮಾಡುವ ಯಾವುದೇ ಕ್ಷೇತ್ರವಾಗಿರಲಿ ಸೇವೆ ಬಯಸಿ ಬಂದ ಪ್ರತಿ ಗ್ರಾಹಕರಿಗೂ ಹೃದಯ ತುಂಬಿ ಸೇವೆ ಮಾಡಿದಾಗ ಮಾತ್ರ ಆ ಸಂಸ್ಥೆ ಉತ್ತರೋತ್ತರವಾಗಿ ಬೆಳೆದು ಹೆಮ್ಮರವಾಗಲು ಸಾಧ್ಯ. ಕರ್ಣಾಟಕ ಬ್ಯಾಂಕ್ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಂಸ್ಥಾಪಕರ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯೇ ಕಾರಣ ಎಂದರು.

ಇಂದಿನ ವಿನೂತನ ಮಾದರಿಯ ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಸಮಯ ಉಳಿತಾಯ ಮಾಡುವ ಬ್ಯಾಂಕ್‌ ಸೇವೆ ಶ್ಲಾಘನೀಯ. ಅವಳಿ ನಗರದ ಪ್ರತಿಯೊಬ್ಬ ಗ್ರಾಹಕರು ಈ ಮಷಿನ್ ಸೇವೆ ಪಡೆದುಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಬನಹಟ್ಟಿ ಶಾಖೆಯ ಮ್ಯಾನೇಜರ್ ಪ್ರವೀಣ ಕಾಲತಿಪ್ಪಿ ಮಾತನಾಡಿದರು. ವೇಂಕಟೇಶ ಭಟ್, ಶಂಕರ ಮುಂಡಗನೂರ, ಸಂಪತ್ ಹಡಗಲಿ, ವೆಂಕಪ್ಪ ಭುರೂಕ, ಈರಪ್ಪ ಕಾಜದಾರ, ಮಹಾದೇವ ತಡಸಲ, ಶಂಕರ ಯರನಡೊಳ್ಳಿ , ಜವಳಿ ವರ್ತಕರಾದ ಸುರೇಶ ಚಿಂಡಕ, ಕಲ್ಲಪ್ಪ ಕುಳ್ಳಿ, ಸುರೇಶ ಶಿರೋಳ, ಆನಂದ ಶಿವಪೂಜಿ, ರೇವಣ್ಣ ಉಮದಿ, ಪ್ರಶಾಂತ ಬಿದರಿ ಸೇರಿದಂತೆ ಅನೇಕರಿದ್ದರು.