ಸಾರಾಂಶ
ಚಿಕ್ಕಮಗಳೂರು: ಕಾರು ಹಾಗೂ ಬೈಕ್‌ಗಳಲ್ಲಿ ಪ್ರವಾಸಕ್ಕೆ ಹೋಗುವವರು ಗೂಗಲ್ ಮ್ಯಾಪ್ ಹಾಕಿ ಕೊಂಡು ಹೋಗುವುದು ಸಹಜ. ಆದರೆ, ಪ್ರವಾಸಿಗರ ಟಿಟಿ ವಾಹನದ ಚಾಲಕ ಬಳಸಿದ ಗೂಗಲ್ ಮ್ಯಾಪ್ ಲೋಕೇಷನ್ ಅವಾಂತರದಿಂದ ಗದ್ದೆ ಬಳಿ ವಾಹನ ಬಂದು ನಿಂತು ಪ್ರವಾಸಿಗರು ತಬ್ಬಿಬ್ಬಾಗುವಂತೆ ಮಾಡಿದೆ.

ಈ ಘಟನೆ ತಾಲೂಕಿನ ಆಲ್ದೂರು ಬಳಿ ಬುಧವಾರ ನಡೆದಿದ್ದು, ಬೆಂಗಳೂರು ಮೂಲದ ಟಿಟಿ ವಾಹನ ಬಾಳೆಹೊನ್ನೂರಿನಿಂದ ಮೂಡಿಗೆರೆಗೆ ಹೊರಟಿದ್ದ ಟಿಟಿ ಮಾರ್ಗ ಮಧ್ಯದಲ್ಲಿರುವ ಆಲ್ದೂರು ಬಳಿ ಕಿರಿದಾದ ರಸ್ತೆಯಲ್ಲಿ ಹೋಗಿ ಗದ್ದೆ ಬಳಿ ನಿಂತಿದೆ. ಗೂಗಲ್ ಲೊಕೇಷನ್ ತೋರಿದ್ದ ದಾರಿಯಲ್ಲಿ ಬಂದಿದ್ದ ಚಾಲಕ ಎಲ್ಲಿ ಬಂದಿದ್ದೇವೆಂದು ನೋಡುತ್ತಿದ್ದದ್ದನ್ನು ಕಂಡ ಸ್ಥಳೀಯರು ವಿಚಾರಿಸಿದಾಗ ಮೂಡಿಗೆರೆಗೆ ಹೋಗಬೇಕಾಗಿದ್ದು, ಗೂಗಲ್ ಮ್ಯಾಪ್ ನೋಡಿ ಇಲ್ಲಿಗೆ ದಾರಿ ತಪ್ಪಿ ಬಂದಿದೆ ಎಂದು ಹೇಳಿದ್ದಾನೆ.ಗದ್ದೆಯ ಬಳಿ ಇಳಿಜಾರಿನ ಪ್ರದೇಶದಲ್ಲಿ ಬಂದು ನಿಂತಿದ್ದ ವಾಹನವನ್ನು ಸ್ಥಳೀಯರ ಸಹಾಯದಿಂದ ಹೊರಕ್ಕೆ ಎಳೆದು ದಾರಿ ಸೂಚಿಸಿ ಕಳುಹಿಸಲಾಯಿತು. 21 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ಟಿಟಿ ವಾಹನ ನಿಂತಿರುವುದು.