ಹಲವು ಅಡೆತಡೆಗಳನ್ನು ದಾಟಿ ಈ ಬಾರಿ ದಸರೆಗೆ ಆಗಮಿಸಿದ್ದ ಅಭಿಮಾನಿಗಳ ಅಭಿಮಾನದ ಕ್ಯಾಪ್ಟನ್ ''''ಅಭಿಮನ್ಯು'''' ಆನೆಯು ನಿಶಾನೆ ಗೌರವ ಗಿಟ್ಟಿಸಿಕೊಳ್ಳುವ ಮೂಲಕ ವಿಜಯದಶಮಿ ಮೆರವಣಿಗೆಯನ್ನು ಮುನ್ನಡೆಸಿತು.

ಬಿ. ಶೇಖರ್‌ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ವಿಜಯದಶಮಿ ಮೆರವಣಿಗೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಆನೆಗಳೇ ಹವಾ ಸೃಷ್ಟಿಸಿದವು. ರಾಜಮಾರ್ಗದಲ್ಲಿ ದಸರಾ ಗಜಪಡೆಯನ್ನು ನೋಡಿದ ಲಕ್ಷಾಂತರ ಜನ ಸಂಭ್ರಮಿಸಿ ರೋಮಾಂಚನಗೊಂಡರು.ಹಲವು ಅಡೆತಡೆಗಳನ್ನು ದಾಟಿ ಈ ಬಾರಿ ದಸರೆಗೆ ಆಗಮಿಸಿದ್ದ ಅಭಿಮಾನಿಗಳ ಅಭಿಮಾನದ ಕ್ಯಾಪ್ಟನ್ ''''''''ಅಭಿಮನ್ಯು'''''''' ಆನೆಯು ನಿಶಾನೆ ಗೌರವ ಗಿಟ್ಟಿಸಿಕೊಳ್ಳುವ ಮೂಲಕ ವಿಜಯದಶಮಿ ಮೆರವಣಿಗೆಯನ್ನು ಮುನ್ನಡೆಸಿತು. ಗಂಟೆ ಗಟ್ಟಲೆ ಕಾದಿದ್ದ ಜನ ಅಭಿಮನ್ಯು ರಾಜಮಾರ್ಗದಲ್ಲಿ ಕಾಣುತ್ತಿದ್ದ ಅಭಿಮಾನಿಗಳು ಸಂತೋಷದಲ್ಲಿ ಚೀರಾಡಿದರು.ಮೈಸೂರು ಅರಮನೆ ಬಲರಾಮ ದ್ವಾರದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.ನಂತರ ಅರಮನೆ ಮುಂಭಾಗದಲ್ಲಿ ನಿಶಾನೆ ಆನೆ ಅಭಿಮನ್ಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನೆರೆದಿದ್ದ ಗಣ್ಯರಿಗೆ, ಜನಸ್ತೋಮಕ್ಕೆ ವಂದಿಸಿ ವಿಜಯದಶಮಿ ಮೆರವಣಿಗೆ ಮುನ್ನಡೆಸಿತು. ಇದನ್ನು ಹಿಂಬಾಲಿಸಿಕೊಂಡು ನೌಫತ್ ಆನೆಯಾಗಿ ಗೋಪಿ ಸಾಗಿ ಬಂತು. ಉಳಿದ ಆನೆಗಳು ಸಾಲಾನೆಗಳಾಗಿ ಸಾಗುವ ಮೂಲಕ ದಸರಾ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು. 12 ಆನೆಗಳೂ ಭಾಗಿಈ ಬಾರಿ ದಸರೆಗಾಗಿ 13 ಆನೆಗಳನ್ನು ಕಾಡಿನಿಂದ ನಾಡಿಗೆ ತರಲಾಗಿತ್ತು. ಮೀಸಲು ಅಂಬಾರಿ ಆನೆಯಾಗಿ ಆಯ್ಕೆಯಾದ ಧನಂಜಯ ಅರಮನೆ ಆನೆ ಬಿಡಾರದಲ್ಲಿ ಉಳಿದಿತ್ತು.ನಿಶಾನೆ ಆನೆಯಾಗಿ ಅಭಿಮನ್ಯು, ನೌಫತ್ ಆನೆ ಗೋಪಿ ಸಾಗಿದವು. ಇದಾದ ಬಳಿಕ ಸಾಲಾನೆಗಳಾಗಿ ಮೊದಲ ತಂಡದಲ್ಲಿ ಮಹೇಂದ್ರ ಮತ್ತು ಲಕ್ಷ್ಮೀ, 2ನೇ ತಂಡದಲ್ಲಿ ಶ್ರೀರಾಮ, ಚೈತ್ರಾ ಮತ್ತು ಸುಗ್ರೀವ ಹಾಗೂ 3ನೇ ತಂಡದಲ್ಲಿ ಶ್ರೀಕಂಠ ಮತ್ತು ಏಕಲವ್ಯ ಆನೆಗಳು ಒಂದರ ಹಿಂದೆ ಒಂದು ಸಾಗುವ ಮೂಲಕ ಗಂಟೆಗಟ್ಟಲೆ ಕಾದಿದ್ದ ಲಕ್ಷಾಂತರ ಜನರ ಮನಸ್ಸಿನಲ್ಲಿ ಸಂಭ್ರಮದ ಸಂಚಲನ ಮೂಡಿಸಿದವು.ಇದೇ ಮೊದಲ ಬಾರಿಗೆ ಪ್ರಶಾಂತ ಆನೆ ಮೈಮೇಲೆ ಅಂಬಾರಿ ಹೊರಿಸಲಾಯಿತು. ಇದರ ಅಕ್ಕಪಕ್ಕ ಕುಮ್ಕಿಗಳಾಗಿ ಕಾವೇರಿ ಮತ್ತು ರೂಪಾ ಆನೆಗಳು ಸಾಗಿದವು. 750 ಕೆ.ಜಿ. ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊರುವ ಮೂಲಕ ಪ್ರಶಾಂತ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು. 2026ನೇ ಸಾಲಿನ ಜಂಬೂಸವಾರಿಯಲ್ಲಿ ಯಶಸ್ವಿಗೊಳಿಸಿತು.----ಬಾಕ್ಸ್... ಆನೆಗಳ ಜವಾಬ್ದಾರಿಅಂಬಾರಿ ಆನೆ- ಪ್ರಶಾಂತಕುಮ್ಕಿ ಆನೆಗಳು- ಕಾವೇರಿ ಮತ್ತು ರೂಪಾನಿಶಾನೆ ಆನೆ- ಅಭಿಮನ್ಯುನೌಫತ್ ಆನೆ- ಗೋಪಿ ಸಾಲಾನೆಗಳು1ನೇ ತಂಡ- ಮಹೇಂದ್ರ, ಲಕ್ಷ್ಮೀ 2ನೇ ತಂಡ- ಶ್ರೀರಾಮ, ಚೈತ್ರಾ, ಸುಗ್ರೀವ 3ನೇ ತಂಡ- ಶ್ರೀಕಂಠ, ಏಕಲವ್ಯ